Advertisement

“ಸಿದ್ಧಗಂಗಾಶ್ರೀ ಶಿವೈಕ್ಯ’: ನಾಳೆ ಚಿತ್ರೋದ್ಯಮ ಬಂದ್

10:14 AM Jan 21, 2019 | Team Udayavani |

ಸಿದ್ಧಗಂಗಾ ಶ್ರೀ ಶಿವೈಕ್ಯರಾದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಂದ್​ ಘೋಷಿಸಿದೆ. ನಾಳೆ ಯಾವುದೇ ಚಿತ್ರಗಳ ಪ್ರದರ್ಶನ ಮತ್ತು ಚಿತ್ರೀಕರಣ ನಡೆಯುವುದಿಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ತಿಳಿಸಿದ್ದಾರೆ.

Advertisement

“ಶಿವಕುಮಾರ ಶ್ರೀಗಳು ಸಮಾಜ ಸೇವೆಯೇ ಜೀವನ ಎಂದು ಬದುಕಿದ್ದವರು. ಅವರು ಲಿಂಗೈಕ್ಯರಾದ ಸುದ್ದಿಯಿಂದ ನೋವಾಗಿದೆ. ಅವರ ಸಮಾಜ ಸೇವೆ, ಕಾಯಕ ನಮಗೆ ಮಾದರಿ. ಶ್ರೀಗಳಿಗೆ ಗೌರವ ಸೂಚಿಸುವ ಸಲುವಾಗಿ ಚಿತ್ರೋದ್ಯಮ ಬಂದ್​ ಘೋಷಿಸಿದೆ’ ಎಂದು ಚಿನ್ನೇಗೌಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next