Advertisement

ಬಿಜೆಪಿಗೆ ಧಮ್ ಇಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ: ಸಿದ್ದರಾಮಯ್ಯ

02:37 PM Dec 14, 2021 | Team Udayavani |

ಸುವರ್ಣಸೌಧ (ಬೆಂಗಳೂರು): ವಿಧಾನ ಪರಿಷತ್ ಚುನಾವಣೆಯಲ್ಲಿ 12 ಗೆಲ್ಲಬಹುದು ಎಂದು ನಮ್ಮ‌ ನಿರೀಕ್ಷೆಯಿತ್ತು. 11 ಸ್ಥಾನಗಳನ್ನು ಗೆದ್ದಿದ್ದೇವೆ. ಚಿಕ್ಕಮಗಳೂರಲ್ಲಿ ಗಾಯತ್ರಿ ನಾಲ್ಕು ಮತಗಳ ಅಂತರದಿಂದ ಸೋಲಾಗಿದೆ‌. ಅದೊಂದು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಭಾವಿಸಿದ್ದೇವೆ. ಆ ಒಂದು ಕ್ಷೇತ್ರದಲ್ಲಿ ಮಾತ್ರ ನಿರೀಕ್ಷೆ ಹುಸಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಪರಿಷತ್ ಫಲಿತಾಂಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಗಾಯತ್ರಿ ಅವರಿಗೆ ಕರೆ ಮಾತನಾಡಿದ್ದೇನೆ. ವಕೀಲರನ್ನು ಸಂಪರ್ಕ ಮಾಡಿ ಎಂದು ಹೇಳಿದ್ದೇವೆ. ನಾಮ ನಿರ್ದೇಶನ ಅಭ್ಯರ್ಥಿಗಳ‌ ಮತದಾನ ಮಾಡುವ ವಿಚಾರಕ್ಕಾಗಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ ಎಂದರು.

ಇದನ್ನೂ ಓದಿ:ಬೆಳಗಾವಿ: ಪಕ್ಷೇತರ ಲಖನ್ ಜಾರಕಿಹೊಳಿಗೆ ಭರ್ಜರಿ ಜಯ: ಬಿಜೆಪಿಗೆ ಭಾರೀ ಮುಖಭಂಗ

ಇದು ಜನರ ತೀರ್ಪಲ್ಲ. ಸ್ಥಳೀಯ ನಾಯಕರ ಅಭಿಪ್ರಾಯ. ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ ಎಂದರು.

ಬೆಳಗಾವಿಯಲ್ಲಿ ಬಿಜೆಪಿ ಸೋಲು ಕಂಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗೆ ಧಮ್ ಇಲ್ಲ. ಪಕ್ಷೇತರರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಅವಕಾಶ ಮಾಡಿಕೊಟ್ಟಿದ್ದರು. ನಮ್ಮ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದಲ್ಲಿ ಜಯಗಳಿಸಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next