Advertisement

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

12:33 AM Nov 09, 2024 | Team Udayavani |

ಮಂಡ್ಯ: ಹೋರಾಟ ದೇವೇಗೌಡರ ಹುಟ್ಟುಗುಣ, ನನ್ನ ದೇಹದಲ್ಲಿ ಕೊನೇ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ. ಇಂದು ರಾಜ್ಯದಲ್ಲಿ ಇರುವಂತಹ ಕೆಟ್ಟ ಸರಕಾರವನ್ನು ನನ್ನ 62 ವರ್ಷದ ರಾಜಕೀಯ ಇತಿಹಾಸದಲ್ಲಿ ಎಂದೂ ಕಂಡಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ರಾಜ್ಯ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರಿಗೆ 92 ವರ್ಷ ವಯಸ್ಸಾಗಿದೆ. ಮೊಮ್ಮಗನನ್ನು ಗೆಲ್ಲಿಸಿ ಅನಂತರ ಮನೆ ಸೇರಿಕೋಳ್ಳುತ್ತಾರೆ ಎಂದುಕೊಂಡಿದ್ದಾರೆ. ನಾನು ಮನೆ ಸೇರುವ ಜಯಮಾನದವನಲ್ಲ, ಕೊನೆಯವರೆಗೂ ಹೋರಾಟ ಮಾಡುತ್ತೇನೆ. ಈ ಸರಕಾರವನ್ನು ಕಿತ್ತೂಗೆಯುವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದರು.

ಎಚ್‌ಡಿಕೆ, ಡಿಕೆ ನಡುವೆ ಹೋಲಿಕೆ ಬೇಡ
ಎಚ್‌ಡಿಕೆ ವರ್ಸಸ್‌ ಡಿಕೆ ಎಂದು ಹೋಲಿಕೆ ಮಾಡಬೇಡಿ. ಎಚ್‌.ಡಿ. ಕುಮಾರಸ್ವಾಮಿ ದೇವೇಗೌಡರ ಮಗ ಎಂದಲ್ಲ. ದೇಶದಲ್ಲಿ ಜೆಡಿಎಸ್‌ ಕೇವಲ 2 ಸ್ಥಾನಗಳಿದ್ದರೂ ದೇಶದ ಎರಡು ಪ್ರಮುಖ ಸ್ಥಾನದ ಹುದ್ದೆಯ ಜವಾಬ್ದಾರಿ ನೀಡಿದ್ದಾರೆ. ಇದು ಕುಮಾರಸ್ವಾಮಿ ಬೆಳೆಸಿಕೊಂಡಿರುವ ವ್ಯಕ್ತಿತ್ವ ಎಂದು ಎಚ್‌.ಡಿ. ದೇವೇಗೌಡ ಹೇಳಿದರು. ಪ್ರಧಾನಿ ಮೋದಿ ಅವರಿಗೆ ಸರಿಸಾಟಿಯಾಗುವ ನಾಯಕ ಇಂಡಿಯಾ ಒಕ್ಕೂಟದಲ್ಲಿ ಒಬ್ಬ ನಾಯಕನಿಲ್ಲ. ದೇಶದ ಪ್ರಗತಿಗಾಗಿ ಎನ್‌ಡಿಎ ಜತೆಗೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.

ಡಿಕೆಶಿ ಎಂದಾದರೂ ಕಣ್ಣೀರು ಹಾಕಿದ್ದು ನೋಡಿದ್ದೀರಾ?
ಪಾಂಡವಪುರ: ದೇಶಕ್ಕೆ ಅನ್ನ ನೀಡುವ ರೈತನಿಗೆ ನೋವಾದರೆ ಹೃದಯ ಮರುಗಿ ಕಣ್ಣೀರು ಬರುತ್ತದೆ. ನಮ್ಮ ವಂಶ ಬಡತನವನ್ನು ಅನುಭವಿಸಿ ಮೇಲೆ ಬಂದಿದ್ದು, ನಮಗೆ ಬಡವರ ಕಷ್ಟ, ಸುಖದ ಬಗ್ಗೆ ಅರಿವಿದೆ. ಕಣ್ಣೀರು ಹಾಕುವುದು ನಮ್ಮ ತಂದೆಯಿಂದಲೇ ಬಂದಿರುವ ಬಳುವಳಿ ಎಂದು ದೇವೇಗೌಡ ಹೇಳಿದರು.

ಡಿ.ಕೆ. ಶಿವಕುಮಾರ್‌ ಎಂದಾದರೂ ಕಣ್ಣೀರು ಹಾಕಿದ್ದಾರಾ? ರೌಡಿ ಕೊತ್ವಾಲ್‌ ರಾಮಚಂದ್ರನ ಹತ್ತಿರ 100 ರೂ.ಗೆ ಕೆಲಸ ಮಾಡುತ್ತಿದ್ದ ಶಿವಕುಮಾರ್‌ ಇಂದು ನೆಹರು, ಇಂದಿರಾ ಗಾಂಧಿ ಆಳ್ವಿಕೆ ಮಾಡಿದ ಪಕ್ಷದ ಅಧ್ಯಕ್ಷನಾಗಿದ್ದಾನೆಂದು ಕುಟುಕಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next