Advertisement

JDS ಶಾಸಕರಿಗೆ ಸಿದ್ದರಾಮಯ್ಯ, ಶಿವಕುಮಾರ್‌ ಆಮಿಷ: ಎಚ್ಡಿಕೆ ಆರೋಪ

12:01 AM Jan 08, 2024 | Team Udayavani |

ಬೆಂಗಳೂರು, ಜ. 7: ನಮ್ಮ ಪಕ್ಷದ ಶಾಸಕರು ತಮ್ಮ ಕ್ಷೇತ್ರದ ಕೆಲಸಕ್ಕೆ ಹೋದರೆ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಬನ್ನಿ. ಏನು ಬೇಕೋ ಅದನ್ನು ಮಾಡಿಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಆಮಿಷ ಒಡ್ಡುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

Advertisement

ಎಚ್‌.ಡಿ.ದೇವೆಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಅರ್ಜುನ್‌ ಮುಂಡಾ ಅವರನ್ನು ಬೀಳ್ಕೊಟ್ಟ ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ಜೆಡಿಎಸ್‌ ಮುಗಿಸಬೇಕು ಎಂಬುದು ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರ‌ ಅಜೆಂಡಾ. ಇದಕ್ಕಾಗಿ ಜೆಡಿಎಸ್‌ ಶಾಸಕರ ಮನೆ ಬಾಗಿಲು ತಟ್ಟುತಿದ್ದಾರೆ ಎಂದರು.

ಅಗತ್ಯ ಬಿದ್ದರೆ ಸುಮಲತಾ ಭೇಟಿಗೆ ಸಿದ್ಧ
ಮಂಡ್ಯ ಸಂಸದೆ ಸುಮಲತಾ ಅವರ ಬೆಂಬಲಿಗ ಸಚ್ಚಿದಾನಂದ ಅವರ ಭೇಟಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಆವಶ್ಯಕತೆ ಬಂದರೆ ಸುಮಲತಾ ಅವರನ್ನೂ ಭೇಟಿ ಆಗುತ್ತೇನೆ. ತಪ್ಪೇನಿದೆ ಎಂದರು.

ಸುಮಲತಾ ಬಿಜೆಪಿಯಲ್ಲಿ ಮುಂದುವರಿಯು ವುದಾದರೆ ಮಿತ್ರಪಕ್ಷ ಬಿಜೆಪಿ ಪರವಾಗಿ ಅವರನ್ನು ಭೇಟಿ ಮಾಡುತ್ತೇನೆ. ನಾವೇನು ಇಂತಹ ಕ್ಷೇತ್ರದಿಂ ದಲೇ ಸ್ಪರ್ಧಿಸುತ್ತೇವೆ ಎಂದು ಹೇಳಿಲ್ಲ. ಇಂಥವರಿಗೆ ತೊಂದರೆ ಕೊಟ್ಟು ನಿಲ್ಲಬೇಕು ಎಂಬ ಉದ್ದೇಶವನ್ನೂ ಹೊಂದಿಲ್ಲ. ಕ್ಷೇತ್ರ ಹಂಚಿಕೆ ಇನ್ನೂ ಚರ್ಚೆಯೇ ಆಗಿಲ್ಲ. ಎಲ್ಲವೂ ಆರಂಭಿಕ ಹಂತದಲ್ಲಿದೆ ಎಂದರು.

ಮಂತ್ರಿಯಾಗುವ ಪ್ರಸ್ತಾವವಿಲ್ಲ
ರಾಜ್ಯದ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮ ಗುರಿ. ನನ್ನ ಮುಂದಿರುವ ಏಕೈಕ ಅಜೆಂಡಾ ಎಂದರೆ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವುದು. ನಾನು ಕೇಂದ್ರ ಮಂತ್ರಿಯಾಗಿ ಏನು ಮಾಡಲಿ? ನನಗೆ ಅಂಥ ಆಸೆ ಇಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next