Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ತವರು ಮೈಸೂರು ಮಹಾನಗರ ಪಾಲಿಕೆಯ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದು ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಅಷ್ಟೇ ಅಲ್ಲ ಮಂಡ್ಯ, ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಜೆಡಿಎಸ್ ಎಲ್ಲಿದೆ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಆದೇಶ ಪ್ರಕಾರ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವ ಮದ್ಯದ ಅಂಗಡಿ ಬಂದ್ ಆಗಿದೆ. ಆರು ತಿಂಗಳ ಹಿಂದೆ ನ್ಯಾಯಾಲಯ ಆದೇಶ ಕೊಟ್ಟಿದ್ದರೂ ಇದುವರೆಗೂ ಏನೂ ಮಾಡದೆ ಮಂಗಳವಾರ ಸಭೆ ಕರೆದು ಚರ್ಚಿಸಿದ್ದಾರೆ. ಇದುವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದರಾ? ಎಂದು ಪ್ರಶ್ನಿಸಿದರು.
Related Articles
Advertisement
ರೈತರ ಸಾಲ ಮನ್ನಾ ಮಾಡಿ ಆ ಹೊರೆ ಮುಂದಿನ ಸರ್ಕಾರದ ಮೇಲೆ ಹೊರಿಸುತ್ತೀರಾ. ನಿಮಗೆ ರಾಜ್ಯದ ಅಭಿವೃದ್ಧಿಗಿಂತ ಮುಂದಿನ ಚುನಾವಣೆಗೆ ಹಣ ಸಂಗ್ರಹ ಮಾಡುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದೀರಿ ಎಂದು ಆರೋಪಿಸಿದರು. 2031 ಬೆಂಗಳೂರು ಸಿಡಿಪಿ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಲೆಕ್ಷನ್ ಮಾಡಲು ಹೊರಟಿದ್ದೀರಿ ಎಂದು ದೂರಿದರು.
ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಐದು ವಿದ್ಯುತ್ ಮಾದರಿ ಗ್ರಾಮ ಮಾಡ್ತೇವೆ ಎಂದು ಘೋಷಿಸಿದ್ದಾರೆ. ನೋಡೋಣ ಅದು ಜಾರಿಯಾಗುವ ವೇಳೆಗೆ ಚುನಾವಣೆ ಮುಗಿದು ಬೇರೆ ಸರ್ಕಾರ ಬಂದಿರುತ್ತದೆ.
ಇಂದು ಜೆಡಿಎಸ್ ಕೋರ್ ಕಮಿಟಿ*ಬುಧವಾರದಂದು ಜೆಡಿಎಸ್ ಕೋರ್ ಸಮಿತಿ, ಶಾಸಕರು, ಪಕ್ಷದ ಜಿಲ್ಲಾ ಅಧ್ಯಕ್ಷರ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವುದ ಸೇರಿ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಮಾಡಲಾಗುವುದು. ಯುವಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರು ಗುರುವಾರದಿಂದ ಯಾದಗಿರಿಯಿಂದ ರಾಜ್ಯಾದ್ಯಂತ ಸಂಘಟನೆ ಪ್ರವಾಸ ಮಾಡಲಿದ್ದಾರೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಯುವಕರ ಸಮಾವೇಶ ನಡೆಯಲಿದೆ. ಇದೇ ತಿಂಗಳು ನಿಗದಿಯಾಗಿದ್ದ ರೈತರ ಸಮಾವೇಶ ಆಗಸ್ಟ್ ಕೊನೇ ವಾರದಲ್ಲಿ ಬಿಜಾಪುರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಹುಣಸೂರಿನಲ್ಲಿ ಜುಲೈ 31 ರಂದು ಕಾರ್ಯಕರ್ತರ ಸಮಾವೇಶ ನಿಗದಿಯಾಗಿದೆ.