Advertisement
ಶಾಲೆಯು 1930ರಲ್ಲಿ ಪ್ರಾರಂಭಗೊಂಡು, 91ನೇ ವರ್ಷಕ್ಕೆ ಕಾಲಿಟ್ಟಿದೆ. 1ರಿಂದ 7ನೇ ತರಗತಿಯ ವರೆ ಗೆ 310 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಬಾರಿ ಒಂದನೇ ತರಗತಿಗೆ 22 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ.ಅಕ್ಕಪಕ್ಕಗಳಲ್ಲಿ ಖಾಸಗಿ ಶಾಲೆಗಳು ಇದ್ದರೂ ಮಕ್ಕಳ ಸಂಖ್ಯೆ ವರ್ಷ ದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 1ನೇ ತರಗತಿ ಯಿಂದ ಇಂಗ್ಲಿಷ್ ಮಾಧ್ಯಮ ಪ್ರಾರಂಭಗೊಂಡಿದೆ. ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಇರುವ ಸರಕಾರಿ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಸಕ್ತ ಸಾಲಿನಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಗೊಂಡಿದೆ. ಇಂಗ್ಲಿಷ್ ಮಾಧ್ಯಮದಲ್ಲಿ 13 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮೂಲಸೌಕರ್ಯ ಕೊರತೆ
ಶಾಲೆಯು ಸುಮಾರು 1.20 ಎಕರೆ ಭೂಮಿ ಹೊಂದಿದ್ದು ಸಿದ್ದಾಪುರ ಪೇಟೆಯ ಹೃದಯ ಭಾಗದಲ್ಲಿ ಇದೆ. ಶಾಲೆಗೆ ಮುಖ್ಯವಾಗಿ ಕಟ್ಟಡ, ತರಗತಿ ಕೋಣೆ, ಸಭಾ ಭವನ ಅಗತ್ಯವಾಗಿ ಬೇಕಾಗಿದೆ. ಆಟದ ಮೈದಾನ, ಅಂಗನವಾಡಿ ಕೇಂದ್ರದ ಬೇಡಿಕೆ ಇದೆ.
Related Articles
Advertisement
10 ಲಕ್ಷ ರೂ. ಅನುದಾನ ಘೋಷಣೆಸಿದ್ದಾಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು, ಸ್ವಾತಂತ್ರÂದ ಅಮೃತ ಮಹೋತ್ಸವ ಯೋಜನೆಯಡಿಯಲ್ಲಿ ಶಾಲೆಗೆ ನೀಡುವ ಭೌತಿಕ ಸೌಲಭ್ಯಗಳ ಅಡಿಯಲ್ಲಿ 10 ಲಕ್ಷ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಈ ಅನುದಾನದಲ್ಲಿ ಪೀಠೊಪಕರಣ, ಶುದ್ಧ ಕುಡಿಯುವ ನೀರಿನ ವ್ಯವ ಸ್ಥೆ, ಸ್ಮಾರ್ಟ್ ಕ್ಲಾಸ್ ಆಗಬೇಕಾಗಿದೆ. ಅಭಿವೃದ್ಧಿ ಕಾರ್ಯಗಳು
ಕರ್ಣಾಟಕ ಬ್ಯಾಂಕ್ 3 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ಮುಂಭಾಗದಲ್ಲಿ ಇಂಟರ್ ಲಾಕ್ ಅಳವಡಿಸಿದೆ. ಹಳೆ ವಿದ್ಯಾರ್ಥಿ ಸುಧೀರ ಪೈ ಅವರು ಕಿಂಡರ್ ಗಾರ್ಡನ್ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ ಅನೇಕ ದಾನಿಗಳು ಶಾಲೆಗೆ ಸಣ್ಣಪುಟ್ಟ ಕೊಡುಗೆಗಳನ್ನು ನೀಡಿದ್ದಾರೆ.
ಈ ಶಾಲೆಗೆ ಕೊಡ್ಲಾಡಿ, ಆಜ್ರಿ, ಯಡಮೊಗೆ, ಹೊಸಂಗಡಿ, ಬಾಳೆಬೇರು, ಕಮಲಶಿಲೆ, ಕಾರೂರು, ಕಳಿನಜೆಡ್ಡು, ಶಂಕರನಾರಾಯಣ, ನೆಲ್ಲಿಕಟ್ಟೆ ಮುಂತಾದ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಉತ್ತಮ ಸೌಲಭ್ಯ ಕಲ್ಪಿಸಿದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಶಿಕ್ಷಕರ ಕೊರತೆ
12 ಶಿಕ್ಷಕರು ಇರಬೇಕಾಗಿದ್ದ ಈ ಶಾಲೆಯಲ್ಲಿ ಪ್ರಸ್ತುತ 9 ಶಿಕ್ಷಕರು ಇದ್ದಾರೆ. ಮೂರು ಶಿಕ್ಷಕರ ಕೊರತೆ ಇದ್ದು, ಇದರಲ್ಲಿ ಮುಖ್ಯ ಶಿಕ್ಷಕಕರ ಹುದ್ದೆಯೂ ಸೇರಿದೆ. ಶಿವರಾಮ ರಾವ್ ಅವರು ಪ್ರಭಾರ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂಲ ಸೌಕರ್ಯ ಒದಗಿಸಿ
ಈ ವರ್ಷ ಸುಮಾರು 80 ವಿದ್ಯಾರ್ಥಿಗಳು ಮುಂದಿನ ತರಗತಿಗೆ ವರ್ಗಾವಣೆ ಪತ್ರ ಪಡೆದು ಕೊಂಡು ಹೋಗಿದ್ದಾರೆ. 95 ವಿದ್ಯಾರ್ಥಿಗಳು ಹೊಸದಾಗಿ ದಾಖಲಾತಿಯಾಗಿದ್ದಾರೆ. ಮೂಲ ಸೌಕರ್ಯ ಲಭಿಸಿದಲ್ಲಿ ವಿದ್ಯಾರ್ಥಿಗಳ
ಸಂಖ್ಯೆಯೂ ಹೆಚ್ಚುತ್ತದೆ.
-ಶಿವರಾಮ ರಾವ್ ನಂದಳಿಕೆ, ಪ್ರಭಾರ ಮುಖ್ಯ ಶಿಕ್ಷಕ ಬಸ್ ವ್ಯವಸ್ಥೆ ಕಲ್ಪಿಸಿ
ಶಾಲೆಗೆ ಆಜ್ರಿ, ಯಡಮೊಗೆ, ಕಾರೂರು ಮುಂತಾದ ದೂರದ ಊರುಗಳಿಂದ ವಿದ್ಯಾರ್ಥಿಗಳು ಬರುದರಿಂದ ಈ ಭಾಗಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕಾಗಿದೆ.
-ಮಹೇಶ ಭಟ್, ಎಸ್‌ಡಿಎಂಸಿ ಅಧ್ಯಕ್ಷ – ಸತೀಶ ಆಚಾರ್ ಉಳ್ಳೂರು