Advertisement

SI, VAO Exam: ತುಂಬು ತೋಳಿನ ಶರ್ಟ್‌, ಹೈಹೀಲ್ಡ್‌ ಚಪ್ಪಲಿ ಹಾಕುವಂತಿಲ್ಲ

10:41 PM Sep 02, 2024 | Team Udayavani |

ಬೆಂಗಳೂರು: ಸೆಪ್ಟಂಬರ್‌ 22ರಂದು ನಡೆಯಲಿರುವ ಪಿಎಸ್‌ಐ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸೆ. 29ರಂದು ನಡೆಯುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯ ವಸ್ತ್ರ ಸಂಹಿತೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.

Advertisement

ಅಭ್ಯರ್ಥಿಗಳು ಪೂರ್ಣ ತೋಳಿನ ಬಟ್ಟೆ ಮತ್ತು ಶೂ ಧರಿಸುವುದನ್ನು ನಿಷೇಧಿಸಲಾಗಿದೆ. ಪುರುಷ ಅಭ್ಯರ್ಥಿಗಳು ಸಾಧ್ಯವಾದಷ್ಟು ಕಾಲರ್‌ ರಹಿತ ಶರ್ಟ್‌ ಧರಿಸಲು ಆದ್ಯತೆ ನೀಡಬೇಕು, ಪ್ಯಾಂಟ್‌ (ಜೇಬುಗಳಿಲ್ಲದಿರುವ ಅಥವಾ ಕಡಿಮೆ ಜೇಬಿರುವ) ಧರಿಸಬೇಕು. ಕುರ್ತಾ ಪೈಜಾಮ, ಜೀನ್ಸ್‌ ಪ್ಯಾಂಟ್‌ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಕೆಇಎ ಹೇಳಿದೆ.

ಮಹಿಳೆಯರಿಗೆ ಕಾಲುಂಗುರ ಮತ್ತು ಮಂಗಳಸೂತ್ರ ಧರಿಸಲು ಅವಕಾಶವಿದೆ. ಇದು ಬಿಟ್ಟ ರೆ ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಹೈಹೀ ಲ್ಡ್‌ ಶೂ/ಚಪ್ಪಲಿ ಮತ್ತು ದಪ್ಪ ಅಡಿ ಭಾಗದ ಶೂ, ಚಪ್ಪಲಿಗಳನ್ನು ಧರಿಸಬಾರದು. ಲೋಹದ ಅಭರಣ, ಕಿವಿಯೋಲೆ, ಉಂಗುರ ಮತ್ತು ಕಡಗ ಧರಿಸುವಂತಿಲ್ಲ. ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ಸರಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ತರುವುದು ಕಡ್ಡಾಯ ಎಂದು ಕೆಇಎ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next