Advertisement

Exam ಸೆ. 22ರಂದು ಪಿಎಸ್‌ಐ ಪರೀಕ್ಷೆಯ ಅಡಕತ್ತರಿ; ಅದೇ ದಿನ ಯುಪಿಎಸ್‌ಸಿ ಪರೀಕ್ಷೆ: ವಿರೋಧ

12:53 AM Sep 11, 2024 | Team Udayavani |

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆ ಸಲು ಉದ್ದೇಶಿಸಿರುವ 402 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಬರೆಯಲಿರುವ 102 ಅಭ್ಯರ್ಥಿಗಳು ಈಗ ಸರಕಾರದ ಕ್ರಮದಿಂದ ಅಕ್ಷರಶಃ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ ಪರೀಕ್ಷೆ ಮುಂದೂಡಿಕೆಗೆ ಅಭ್ಯರ್ಥಿಗಳು, ಬಿಜೆಪಿ ಶಾಸಕರಿಂದ ಒತ್ತಡ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಪರಿಶೀಲಿಸಿ ನಿರ್ಧರಿಸುವುದಾಗಿ ಗೃಹ ಸಚಿವ ಡಾ| ಪರಮೇಶ್ವರ ಭರವಸೆ ನೀಡಿದ್ದಾರೆ.

Advertisement

ಈ 102 ಅಭ್ಯರ್ಥಿಗಳು ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸೆ. 22ರಂದೇ ನಡೆಯಲಿರುವ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಇದರ ಮಧ್ಯೆ ಅದೇ ದಿನ 402 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಇದರಲ್ಲಿ ಯಾವುದಾದರೂ ಒಂದು ಪರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿಯಾಗಿದ್ದು, ಆ ಆಯ್ಕೆಯೊಂದಿಗೆ ಅವಕಾಶವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯುಪಿಎಸ್‌ಸಿ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ (ಸೆ. 29) ಪಿಎಸ್‌ಐ ಪರೀಕ್ಷೆಯನ್ನು ಮುಂದೂಡುವಂತೆ ಅಭ್ಯರ್ಥಿಗಳಿಂದ ಒತ್ತಡ ಕೇಳಿಬರುತ್ತಿದೆ.
ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಬರೆಯಲಿರುವ 102 ಅಭ್ಯರ್ಥಿಗಳ ಪೈಕಿ ಬಹುತೇಕರ ವಯೋಮಿತಿ 35ರ ಆಸುಪಾಸು ಇದೆ. ಒಂದು ವೇಳೆ ಪಿಎಸ್‌ಐ ಪರೀಕ್ಷೆಯಿಂದ ವಂಚಿತರಾದರೆ, ಪಿಎಸ್‌ಐ ಅವಕಾಶ ಶಾಶ್ವತವಾಗಿ ಮುಚ್ಚುತ್ತದೆ. ಇತ್ತ ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಉತ್ತೀರ್ಣರಾಗುವಲ್ಲಿ ವಿಫ‌ಲರಾದರೆ, ಅಲ್ಲಿಯೂ ಇಲ್ಲದಂತಾಗುತ್ತದೆ. ಹಾಗಾಗಿ ಅಭ್ಯರ್ಥಿಗಳು ಪರೀಕ್ಷೆ ಮುಂದೂಡುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.

ಇದರ ಭಾಗವಾಗಿ ಮಂಗಳವಾರ ಕೆಲವು ಅಭ್ಯರ್ಥಿಗಳು ಶಾಸಕರಾದ ಡಾ| ಅಶ್ವತ್ಥನಾರಾಯಣ ಮತ್ತು ಧೀರಜ್‌ ಮುನಿರಾಜ್‌ ನೇತೃತ್ವದಲ್ಲಿ ಗೃಹ ಸಚಿವ ಡಾ| ಪರಮೇಶ್ವರ ಅವರನ್ನು ಭೇಟಿ ಮಾಡಿ, ಪಿಎಸ್‌ಐ ಪರೀಕ್ಷೆ ಮುಂದೂಡಿಕೆಗೆ ಮನವಿ ಮಾಡಿದರು.

ಚರ್ಚಿಸಿ ಕ್ರಮ:
ಡಾ| ಪರಮೇಶ್ವರ್‌
ಪರೀಕ್ಷೆ ಮುಂದೂಡಿಕೆ ಮನವಿಗೆ ಪ್ರತಿಕ್ರಿಯಿಸಿದ ಡಾ| ಪರಮೇಶ್ವರ, ಪಿಎಸ್‌ಐ ನೇಮ ಕಾತಿ ಪರೀಕ್ಷೆ ಮುಂದೂ ಡುವ ಬಗ್ಗೆ ಕೆಇಎ ಹಾಗೂ ಇಲಾಖೆಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವು ದಾಗಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next