Advertisement

Karkala: ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ, ಓರ್ವನ ಬಂಧನ: ಸಂತ್ರಸ್ಥೆಯ ರಕ್ಷಣೆ

03:15 PM Sep 09, 2024 | Team Udayavani |

ಉಡುಪಿ: ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ವ್ಯಕ್ತಿಯೊಬ್ಬರನ್ನು ಬಂಧಿಸಿರುವ ಘಟನೆ ಕಾರ್ಕಳದ ಸಾಣೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪ್ರಮೀಳಾ ವಿಜಯ್‌ ಕುಮಾರ್‌ ಎಂಬಾಕೆಯ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ, ಭರತ್‌ ಎಂಬಾತನನ್ನು ಬಂಧಿಸಿರುವುದಾಗಿ ವರದಿ ವಿವರಿಸಿದೆ.

ಈ ಸಂದರ್ಭದಲ್ಲಿ ಓರ್ವ ಸಂತ್ರಸ್ಥೆ ಮಹಿಳೆಯನ್ನು ರಕ್ಷಿಸಿದ್ದು, ಆಪಾದಿತರಾದ ಭರತ್‌ ಕುಮಾರ್‌, ಮನೆಯ ಮಾಲೀಕರಾದ ಪ್ರಮೀಳಾ ವಿಜಯ್‌ ಕುಮಾರ್‌ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:Bellary: ಬಳ್ಳಾರಿ ಜೈಲಿಗೆ ಬಂದ ಶಿಗ್ಲಿ‌ ಬಸ್ಯಾ; ದರ್ಶನ್‌ ಪರ ವಾದ ಮಾಡಲು ಸಿದ್ದ ಎಂದ ಬಸ್ಯಾ

Advertisement

Udayavani is now on Telegram. Click here to join our channel and stay updated with the latest news.

Next