Advertisement

M.Com ಸೆಮಿಸ್ಟರ್ ಪರೀಕ್ಷೆಯಲ್ಲಿ ಅಪೂರ್ಣ ಪ್ರಶ್ನೆ ಪತ್ರಿಕೆ… ಗೊಂದಲದಲ್ಲಿ ವಿದ್ಯಾರ್ಥಿಗಳು

02:57 PM Sep 11, 2024 | Team Udayavani |

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬುಧವಾರ ನಡೆದ ಎಂ.ಕಾಂ 4 ನೇ ಸೆಮಿಸ್ಟರ್ ಬಿಸಿನೆಸ್ ಅಪ್ಲಿಕೇಶನ್ ಅಂಡ್ ರಿಸರ್ಚ್ ವಿಷಯಕ್ಕೆ ಸಂಬಂಧಿಸಿದಂತೆ ಅಪೂರ್ಣ ಪಶ್ನೆಗಳುಳ್ಳ ಪ್ರಶ್ನೆ ಪತ್ರಿಕೆ ವಿತರಣೆ ಮಾಡಿದ್ದರಿಂದ ಪರೀಕ್ಷಾರ್ಥಿಗಳು ಗೊಂದಲಕ್ಕೆ ಒಳಗಾದ ಘಟನೆ ನಡೆದಿದೆ.

Advertisement

ಬೆಳಗ್ಗೆ 10ಕ್ಕೆ ಎಂ.ಕಾಂ 4 ನೇ ಸೆಮಿಸ್ಟರ್ ನ ಬ್ಯೂಸಿನೆನ್ಸ್ ಅಪ್ಲಿಕ್ಷೇಷನ್ ಅಂಡ್ ಆಪರೇಶನ್ ರಿಸರ್ಚ್ ವಿಷಯವಾಗಿ ಪರೀಕ್ಷೆ ನಡೆದಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ಅಪೂರ್ಣ ವಾದ ಪ್ರಶ್ನೆಗಳನ್ನು ನೀಡಿರುವುದನ್ನ ಗಮನಿಸಿದ ವಿದ್ಯಾರ್ಥಿ ಗಳಲ್ಲಿ ಗೊಂದಲ ಮೂಡಿದೆ.

70 ಅಂಕಗಳ ಪ್ರಶ್ನೆ ನೀಡಲಾಗಿದ್ದು ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳು ಅಪೂರ್ಣ ವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಉತ್ತರ ಬರೆಯಲು ಗೊಂದಲದಲ್ಲಿ ಮುಳುಗಿದರು. ಪ್ರಶ್ನೆಪತ್ರಿಕೆ ಯಲ್ಲಿನ ಎಡವಟ್ಟಿನಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Stable government ನೋಡಿ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ: ದಿನೇಶ್ ಗುಂಡೂರಾವ್

Advertisement

Udayavani is now on Telegram. Click here to join our channel and stay updated with the latest news.