Advertisement

Exam ಸೆ. 24ರಿಂದ ಎಸೆಸೆಲ್ಸಿ ಮಧ್ಯ ವಾರ್ಷಿಕ ಪರೀಕ್ಷೆ

11:43 PM Sep 12, 2024 | Team Udayavani |

ಬೆಂಗಳೂರು: 2024-25ನೇ ಸಾಲಿನ ಎಸೆಸೆಲ್ಸಿ ಮಧ್ಯ  ವಾರ್ಷಿಕ ಪರೀಕ್ಷೆಯನ್ನು (ಸಂಕಲನಾತ್ಮಕ ಮೌಲ್ಯಮಾಪನ-1) ಸೆ. 24ರಿಂದ ಅ.1ರವರೆಗೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ.

Advertisement

2024-25ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯ ವಾರ್ಷಿಕ ಪರೀ ಕ್ಷೆ ನಡೆಸಲು ಮಂಡಳಿಯಿಂದ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ನೀಡುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.

ಎಲ್ಲ ವಿಷಯಗಳಿಗೆ ಮಂಡಳಿ ಹಂತದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಪ್ರಶ್ನೆ ಪತ್ರಿಕೆಗಳ ಸಾಫ್ಟ್ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ಗೆ ಲಭ್ಯಗೊಳಿಸಲಾಗುವುದು. ಅದರಂತೆ 2024-25ನೇ ಸಾಲಿನ ಎಸೆಸೆಲ್ಸಿ ಮಧ್ಯ ವಾರ್ಷಿಕ ಪರೀಕ್ಷೆ-1 ಅನ್ನು ಸೆ. 24ರಿಂದ ಅ. 1ರ ವರೆಗೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದ್ದು, ಪರೀಕ್ಷೆಯನ್ನು ಆಯಾ ಶಾಲಾ ಹಂತದಲ್ಲಿ ವ್ಯವಸ್ಥಿತವಾಗಿ ನಡೆಸಲು ಸೂಕ್ತ ಕ್ರಮ ವಹಿಸಲು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next