ಕುಷ್ಟಗಿ: ತಾಲೂಕಿನ ನೂತನ ತಹಶೀಲ್ದಾರಾಗಿ ಶೃತಿ ಮಲ್ಲಪ್ಪ ಗೌಡರ್ ಅವರನ್ನು ಸರ್ಕಾರ ನೇಮಿಸಿದೆ.
ಕುಷ್ಟಗಿ ತಹಶೀಲ್ದಾರಾಗಿ ಸೇವೆಯಲ್ಲಿದ್ದ ಗುರುರಾಜ್ ಅವರನ್ನು ಕಳೆದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಆದೇಶದ ಮೇರೆಗೆ ಬಳ್ಳಾರಿ ಜಿಲ್ಲೆಯ ಕುರಗೋಡ ಗೆ ವರ್ಗಾಯಿಸಲಾಗಿತ್ತು.
ತೆರವಾದ ಈ ಸ್ಥಾನಕ್ಕೆ ಕುರಗೋಡು ತಹಶೀಲ್ದಾರ ಕರ್ಣಂ ರಾಘವೇಂದ್ರ ರಾವ್ ತಹಶೀಲ್ದಾರಾಗಿ ಕಾರ್ಯನಿರ್ವಹಿಸಿದ್ದರು. ಸರಕಾರ ಆದೇಶದ ಮೇರೆಗೆ ತಹಶೀಲ್ದಾರ್ ಕರ್ಣಂ ರಾಘವೇಂದ್ರರಾವ್ ಅವರಿಗೆ ಮೂಲ ಸ್ಥಳ ಕುರಗೋಡಿಗೆ ವರ್ಗವಾಗಿದ್ದು, ಸದ್ಯ ಕುಷ್ಟಗಿ ತಹಶೀಲ್ದಾರ ಆಗಿ ಗ್ರೇಡ್-2 ತಹಶೀಲ್ದಾರ ಮುರಳಿಧರ ಮೊಕ್ತೆದಾರ ಪ್ರಭಾರಿ ತಹಶೀಲ್ದಾರ ಆಗಿ ಸೇವೆಯಲ್ಲಿದ್ದರು.
ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಜೆ.ಎನ್. ಸುಶೀಲ ಅವರ ಆದೇಶ ಮೇರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಹಶೀಲ್ದಾರಾಗಿದ್ದ ಶೃತಿ ಮಲ್ಲಪ್ಪಗೌಡ್ರು ಅವರನ್ನು ಕುಷ್ಟಗಿ ತಹಶೀಲ್ದಾರ ಆಗಿ ವರ್ಗಾಯಿಸಲಾಗಿದೆ.
ಶೃತಿ ಅವರು, ಕೆಎಎಸ್ 2015 ನೇ ಬ್ಯಾಚಿನ ಅಧಿಕಾರಿಯಾಗಿದ್ದಾರೆ. ಇದೇ ಜುಲೈ 31 ರಂದು ಶೃತಿ ಮಲ್ಲಪ್ಪಗೌಡ್ರು ಕುಷ್ಟಗಿ ತಹಶೀಲ್ದಾರ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.