Advertisement

ಹೊಂಬಾಳೆ ತಂಡ ಸೇರಿದ ಬೋಲ್ಡ್‌ ಬ್ಯೂಟಿ: ಸಲಾರ್‌ಗೆ ಶ್ರುತಿ ಹಾಸನ್‌

08:33 AM Jan 29, 2021 | Team Udayavani |

ಹೊಂಬಾಳೆ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗುತ್ತಿರುವ ಬಹುಭಾಷಾ ಚಿತ್ರ “ಸಲಾರ್‌’ಗೆ ನಾಯಕಿ ಯಾರಾಗುತ್ತಾರೆಂಬ ಕುತೂಹಲ ಸಿನಿಪ್ರೇಮಿಗಳಲ್ಲಿತ್ತು. ಈಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಅದು ನಾಯಕಿಯ ಅನೌನ್ಸ್‌ಮೆಂಟ್‌ನೊಂದಿಗೆ. ಹೌದು, ಪ್ರಭಾಸ್‌ ನಾಯಕರಾಗಿರುವ “ಸಲಾರ್‌’ ಚಿತ್ರಕ್ಕೆ ಶ್ರುತಿ ಹಾಸನ್‌ ನಾಯಕಿಯಾಗಿದ್ದಾರೆ.

Advertisement

ಗುರುವಾರ ಶ್ರುತಿ ಹಾಸನ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಅವರಿಗೆ ಶುಭಕೋರಿ, ತಂಡಕ್ಕೆ ವೆಲ್‌ಕಮ್‌ ಮಾಡಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದ “ಸಲಾರ್‌’ ಚಿತ್ರಕ್ಕೆ ಇತ್ತೀಚೆಗಷ್ಟೇ ಹೈದರಾಬಾದ್‌ ಸೆಟ್ಟೇರಿದೆ.

ಈಗಾಗಲೇ ಚಿತ್ರದ ಪೂರ್ವತಯಾರಿ ಜೋರಾಗಿ ನಡೆಯುತ್ತಿದ್ದು, ಸದ್ಯ ಪ್ರಶಾಂತ್‌ ನೀಲ್‌ “ಕೆಜಿಎಫ್-2′ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅದು ಮುಗಿಯುತ್ತಿದ್ದಂತೆ “ಸಲಾರ್‌’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಇದು ಕೂಡಾ ಹೊಂಬಾಳೆ ಬ್ಯಾನರ್‌ನಿಂದ ಬರುತ್ತಿರುವ ಮತ್ತೂಂದು ಅದ್ಧೂರಿ ಸಿನಿಮಾ ಇದಾಗಿದ್ದು, ಈಗಾಗಲೇ ಸಿನಿಮಾ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಇನ್ನು ಶ್ರುತಿ ಹಾಸನ್‌ ನಾಯಕಿಯಾಗಿರುವ “ಕ್ರ್ಯಾಕ್‌’ ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next