Advertisement

ಕೆಜಿಎಫ್ ಅಡ್ಡಾಕ್ಕೆ ಬಂದೇ ಬಿಟ್ರು ಶೃತಿ-ಸುಧಾರಾಣಿ : ಅರೇ.. ಇವರದ್ಯಾವ ಪಾತ್ರ?

12:11 PM Aug 10, 2021 | Team Udayavani |

ಹಾಗಾಗ್ಗೆ ಬಿಸಿ ಬಿಸಿ ಸುದ್ದಿ ನೀಡುತ್ತಿರುವ ಕೆಜಿಎಫ್ ಚಿತ್ರತಂಡ ಇದೀಗ ಮತ್ತೊಂದು ಕತೂಹಲಕಾರಿ ಮಾಹಿತಿಯನ್ನು ತಿಳಿಸಿದೆ. ಕನ್ನಡದ ಹಿರಿಯ ನಟಿಯರಾದ ಶೃತಿ ಮತ್ತು ಸುಧಾರಾಣಿ ಕೆಜಿಎಫ್ 2 ಚಿತ್ರತಂಡವನ್ನು ಸೇರಲಿದ್ದಾರಂತೆ.

Advertisement

ಅರೇ.. ಈ ಚಿತ್ರದಲ್ಲಿ ಶೃತಿ ಮತ್ತು ಸುಧಾರಾಣಿಯದು ಯಾವ ಪಾತ್ರ ಎಂದು ನೀವು ಯೋಚನೆ ಮಾಡ್ತಾ ಇದ್ದೀರ.. ಇವರು ಯಾವ ಪಾತ್ರಕ್ಕೂ ಬಣ್ಣ ಹಚ್ಚುತ್ತಿಲ್ಲ.. ಬದಲಾಗಿ ಪ್ರಮುಖ ಪಾತ್ರಗಳಿಗೆ ದನಿಯಾಗುತ್ತಿದ್ದಾರೆ.

ಹೌದು ಕೆಜಿಎಫ್ ಚಾಪ್ಟರ್ 2ನಲ್ಲಿ ಬರುವ ರಮೀಕಾ ಸೇನ್ ಪಾತ್ರಕ್ಕೆ ಸುಧಾರಾಣಿ ಧ್ವನಿಯನ್ನು ನೀಡುತ್ತಾರಂತೆ.  ರಮೀಕಾ ಸೇನ್  ಕೆಜಿಎಫ್ ಸಿನಿಮಾದ ಪವರ್ ಫುಲ್ ಪಾತ್ರಗಳಲೊಂದುಈ ಪಾತ್ರವನ್ನು ಬಾಲಿವುಡ್ ನಟಿ ರವೀನಾ ಟಂಡನ್ ನಿರ್ವಹಿಸಿದ್ದಾರೆ. ಈ ಪವರ್ ಫುಲ್ ಪ್ರಧಾನಿ ಪಾತ್ರಕ್ಕೆ ಕನ್ನಡದ ಧ್ವನಿದಾನವನ್ನ ಎವರ್​ ಗ್ರೀನ್ ಬ್ಯೂಟಿ ಸುಧಾರಾಣಿ ಅವರು ನೀಡಿದ್ದಾರೆ.

ಇನ್ನು ಕೆಜಿಎಫ್ ನಲ್ಲಿ ಈಶ್ವರಿ ರಾವ್ ಎಂಬ ಪಾತ್ರ ಕೂಡ ಪ್ರಮುಖವಾಗಿದೆಯಂತೆ. ಈ ಪಾತ್ರಕ್ಕೆ ಶೃತಿ ಹಿನ್ನಲೆ ಧ್ವನಿ ನೀಡುತ್ತಿದ್ದಾರೆ. ಈಶ್ವರಿ ರಾವ್​​​​​​ ತೆಲುಗಿನ ಫೇಮಸ್ ನಟಿ. ಇವರು ಕೂಡ ಸಿನಿಮಾದಲ್ಲಿ ಒಂದು ಖಡಕ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next