ಶೃಂಗೇರಿ: ಮನುಷ್ಯ ಜನ್ಮ ಪಡೆದಾಗ ಪ್ರತಿಯೊಬ್ಬರೂ ಧರ್ಮಾಚರಣೆ ಮಾಡುವುದರಿಂದ ನಮ್ಮ ಜನ್ಮವನ್ನು ಸಾರ್ಥಕ್ಯಗೊಳಿಸಿಕೊಳ್ಳಬೇಕು ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಟಾರ ಬ್ರಾಹ್ಮಣ ಮಹಾಸಭಾದಿಂದ ಭಾನುವಾರ ಏರ್ಪಡಿಸಿದ್ದ ಶ್ರೀ ಗಾಯತ್ರಿ ಹೋಮದ ಪೂರ್ಣಾಹುತಿ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಬ್ರಾಹ್ಮಣರೆಲ್ಲರೂ ಗಾಯತ್ರಿ ಮಂತ್ರವನ್ನು ಪ್ರತಿ ದಿನವೂ ಹೇಳುವುದರ ಮೂಲಕ ದೇವಿಯನ್ನು ಪೂಜಿಸಬೇಕು. ಗಾಯತ್ರಿ ಮಂತ್ರವನ್ನು ಪಠಿಸುವುದಲ್ಲದೆ ಆಚಾರ- ವಿಚಾರದಲ್ಲೂ ಶ್ರದ್ಧೆ ಇರಬೇಕು. ಪ್ರತಿಯೊಬ್ಬರೂ ಮತ್ತೂಂದು ಜನ್ಮದಲ್ಲಿ ಏಳಿಗೆ ಕಾಣಬೇಕಾದರೆ ಧರ್ಮಾನುಷ್ಠಾನ ಮಾಡಬೇಕು.ನಮ್ಮ ಜೀವನಕ್ಕಾಗಿ ಲೌಖೀಕ ವ್ಯವಹಾರ ನಡೆಸಿದಂತೆ ನಾವು ಧರ್ಮಾಚರಣೆ ಆಚರಿಸುವುದನ್ನು ಮರೆಯಬಾರದು. ಶರೀರದಿಂದ ಮೋಕ್ಷ ಹೊಂದಿದ ನಂತರ ನಾವೇ ಗಳಿಸಿದ ಆಸ್ತಿ, ಹಣವನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಉಳಿಸಿದ ಹಣದಲ್ಲಿ ಸಮಾಜದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಹಣವನ್ನು ಮೀಸಲು ಇಡಬೇಕು.
ನಮ್ಮ ಪೂರ್ವಿಕರು ಹಾಕಿಕೊಟ್ಟ ಮಾರ್ಗದಂತೆ ಮಕ್ಕಳಿಗೆ ಸಕಾಲದಲ್ಲಿ ಉಪನಯನ ಮಾಡಬೇಕು. ಕೇವಲ ನಾಮಕಾವಸ್ಥೆ ಧಾರ್ಮಿಕ ವಿಧಿ ಪೂರೈಸದೆ ಗಾಯತ್ರಿ ಮಂತ್ರ ಉಪದೇಶ ಪಡೆದು, ಪ್ರತಿ ದಿನವೂ ಸಂಧ್ಯಾವಂದನೆ ಮಾಡಬೇಕು. ವೇದ ನಮ್ಮ ಪವಿತ್ರ ಗ್ರಂಥವಾಗಿದ್ದು, ಸಂಪ್ರದಾಯವನ್ನು ಅನುಸರಿಸುವುದರಿಂದ ನಮಗೆ ಶ್ರೇಯಸ್ಸು ಉಂಟಾಗುತ್ತದೆ ಎಂದರು.
ಶ್ರೀಮಠದ ಆಡಳಿತಾ ಧಿಕಾರಿ ಡಾ| ಗೌರಿಶಂಕರ್ ಮಾತನಾಡಿ, ಜಗದ್ಗುರುಗಳ ಆದೇಶ ಮತ್ತು ಸಮಾಜ ಬಾಂಧವರ ಶ್ರದ್ಧೆಯಿಂದ ಕೈಗೊಂಡ ಗಾಯತ್ರಿ ಜಪ ಯಶಸ್ವಿಯಾಗಿದೆ. 2.5 ಕೋಟಿಗೂ ಅಧಿ ಕ ಜಪವನ್ನು ಪೂರೈಸಿ,ಇಂದು ಜಗದ್ಗುರುಗಳ ಅನುಗ್ರಹದಿಂದ ಗಾಯತ್ರಿ ಹೋಮದ ಪೂರ್ಣಾಹುತಿ ನಡೆದಿದೆ ಎಂದರು. ಮಹಾಸಭಾದ ಅಧ್ಯಕ್ಷ ಜಿ.ಸಿ. ಗೋಪಾಲಕೃಷ್ಣ ಮಾತನಾಡಿ, ಜಗದ್ಗುರುಗಳ ಆದೇಶದಂತೆ ಸಮಾಜ ಬಾಂಧವರು ಕೈಗೊಂಡ ಗಾಯತ್ರಿ ಜಪ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಂಟು ತಿಂಗಳ ಕಾಲ ನಡೆದ ಜಪದಲ್ಲಿ ಸಮಾಜ ಬಾಂಧವರು, ಎಲ್ಲಾ ಸಮುದಾಯದವರು ಕೈಜೋಡಿಸಿದ್ದಾರೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಯಾಗಶಾಲೆಯಲ್ಲಿ ಶ್ರೀ ಗಾಯತ್ರಿ ಹೋಮದ ಪೂರ್ಣಾಹುತಿ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಧಿ ಕಾರಿ ಡಾ| ವಿ.ಆರ್.ಗೌರಿಶಂಕರ್ ಅವರನ್ನು ಗೌರವಿಸಲಾಯಿತು. ಮಹಾಸಭಾದ ಗೋಳಾYರ್ ನಾಗೇಂದ್ರರಾವ್, ಶಾರದಾ ಸೌಹಾರ್ದದ ಅಧ್ಯಕ್ಷ ಶಿವಶಂಕರ ರಾವ್, ಹೆಬ್ಬಿಗೆ ಗಣೇಶ್, ಹುಲ್ಕುಳಿ ದೀಪಕ್, ವಿಜಯರಂಗ, ಟಿ.ಆರ್. ಕೃಷ್ಣಮೂರ್ತಿ ಮತ್ತಿತರರು ಇದ್ದರು