Advertisement

ಹಿರಿಯಡಕ ದೇಗುಲ ನಕ್ಷತ್ರವನ: 100ಕ್ಕೂ ಮಿಕ್ಕಿ  ಸಸ್ಯಸಂಕುಲ

07:00 AM Apr 18, 2018 | |

ಹಿರಿಯಡಕ: 800 ವರ್ಷಗಳ ಇತಿಹಾಸ ಹೊಂದಿರುವ ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಅತ್ಯಾಕರ್ಷಕ ಕೆತ್ತನೆ ಹಾಗೂ ಕಾಷ್ಟ ಶಿಲ್ಪದ ರಚನೆಯಿಂದ ಈಗಾಗಲೇ ಜನರನ್ನು ಆಕರ್ಷಿಸುತ್ತಿರುವುದರೊಂದಿಗೆ ಇದೀಗ ಆದಿಬ್ರಹ್ಮಸ್ಥಾನದ ಗುಡಿಯ ಸಮೀಪ ಸುಮಾರು 100ಕ್ಕೂ ಮಿಕ್ಕಿ ಸಸ್ಯಸಂಕುಲಗಳಿಂದ ಕೂಡಿದ ನಕ್ಷತ್ರವನ ಹಾಗೂ ನವಗ್ರಹ ವನ ನಿರ್ಮಾಣಗೊಳ್ಳುತ್ತಿದ್ದು ಅಂತಿಮ ಹಂತದಲ್ಲಿದೆ

Advertisement

ದೇವಸ್ಥಾನದ ಪರಿಸರದಲ್ಲಿಯೇ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ನಡುವೆ  ಅತ್ಯಾಕರ್ಷಕವಾಗಿ ನಿರ್ಮಾಣವಾದ ನಕ್ಷತ್ರ ವನದಲ್ಲಿ ಕಾಸರಕ, ನೆಲ್ಲಿ, ಅತ್ತಿಮರ, ನೇರಳೆ, ಕಾಚು, ಹಿಪ್ಪಲಿ, ಬಿದಿರು, ಅಶ್ವತ್ಥ, ನಾಗಸಂಪಿಗೆ, ಅಳಲೆ, ಬಸರಿ ಮರ, ಮುತ್ತುಗ, ಅಂಬಟೆ, ಬಿಲ್ವ, ಹೊಳೆಮತ್ತಿ, ಹಣ್ಣುಸಂಪಿಗೆ, ರೆಂಜೆ, ಸರಳ,  ರಾಳ ಧೂಪ, ಬೀಟೆ, ಹಲಸು, ಎಕ್ಕೆಗಿಡ, ಶಮೀ, ಕದಂಬ, ಕಹಿಬೇವು, ಮಾವು, ಇಪ್ಪೆಮರ ಸೇರಿದಂತೆ ನೂರಕ್ಕೂ ಮಿಕ್ಕಿ ಸಸ್ಯಸಂಕುಲಗಳಿವೆ. 

ಸುರೇಶ್‌ ತಂತ್ರಿಯವರ ಮಾರ್ಗದರ್ಶನದಲ್ಲಿ ವಿಟ್ಲದ ದಿನೇಶ್‌ ನಾಯಕ್‌ ಅವರ ವಿಶೇಷ ಮುತುವರ್ಜಿಯೊಂದಿಗೆ ನಿರ್ಮಾಣ ಕಾರ್ಯ ನಡೆಯಿತ್ತಿದೆ.

ನವಗ್ರಹ ವನ: ನಕ್ಷತ್ರವನದ ಮಧ್ಯ ಭಾಗದಲ್ಲಿ ನವಗ್ರಹಗಳಿಗೆ ಸಂಬಂಧ ಪಟ್ಟ ಕೇತುವಿಗೆ ದರ್ಬೆ, ಗುರುವಿಗೆ ಅಶ್ವತ್ಥ, ಬುಧನಿಗೆ ಉತ್ತರಾಣಿ, ಶನಿಗೆ ಶಮೀ, ರವಿಗೆ ಬಿಳಿಎಕ್ಕ, ಶುಕ್ರನಿಗೆ ಅತ್ತಿಮರ, ರಾಹುವಿಗೆ ಗರಿಕೆ, ಮಂಗಳನಿಗೆ ಖದಿರ ಹಾಗೂ ಸೋಮ ಗ್ರಹಕ್ಕೆ ಮುತ್ತುಗ ಗಿಡವನ್ನು ನವಗ್ರಹವನದಲ್ಲಿ ಕಾಣಬಹುದಾಗಿದೆ.

ಸಕರಾತ್ಮಕ  ಚಿಂತನೆ 
ಉತ್ತಮ ಗಾಳಿ ,ಉತ್ತಮ ಆರೋಗ್ಯ ಭಾಗ್ಯಕ್ಕೆ ಹಾಗೂ ಸಕರಾತ್ಮಕ ಚಿಂತನೆಗಳನ್ನು ಹೊಂದಲು ನವಗ್ರಹ ವನಗಳು ಸಹಕಾರಿಯಾಗಿದೆ.ಈ ನಟ್ಟಿನಲ್ಲಿ  ಕ್ಷೇತ್ರಕ್ಕೆ ಆಗಮಿಸಿದ ಭಕ್ತಾಧಿಗಳು ದೇವರ ದರ್ಶನ ಪಡೆದು ಅತ್ಯಾಕರ್ಷಕ ಕೆತ್ತನೆಯ ವೀಕ್ಷಣೆಯೊಂದಿಗೆ ನಕ್ಷತ್ರವನದಲ್ಲಿ ವಾಯುವಿಹಾರ ಮಾಡಲು ಪೂರಕವಾಗಿ ನಿರ್ಮಾಣವಾಗಿದೆ ಎಂದು ಜೀರ್ಣೋದ್ಧಾರ ಸಮಿತಿಯ ರಾಜರಾಮ ಹೆಗ್ಡೆ  ಅವರು ಹೇಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next