Advertisement
ಶ್ರೀಗಳ ಭೇಟಿಗಾಗಿ ರಾಷ್ಟ್ರಮಟ್ಟದ ನಾಯಕರು ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಸಮೀಪ 14 ಹೆಲಿಪ್ಯಾಡ್‌ಗಳ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ. ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವಂತೆಯೇ ಪೊಲೀಸ್ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಮಠದ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಸುತ್ತೂರು ಶ್ರೀಗಳು ಶುಕ್ರವಾರ ಮಠಕ್ಕೆ ಭೇಟಿ ನೀಡಲಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆಯಿಂದ ಮಠದಲ್ಲಿಯೇ ಇದ್ದು ಸಭೆಗಳ ಮೇಲೆ ಸಭೆ ನಡೆಸಿದ್ದಾರೆ. ಸಿದ್ಧಗಂಗಾ ಶ್ರೀ ಅವರಿಗೆ ಭಾರತ ರತ್ನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅಗತ್ಯ ಬಿದ್ದರೆ ಸಂಸದರ ನಿಯೋಗದ ಜತೆಗೆ ತೆರಳಿ ಮನವಿ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ. ಶುಕ್ರವಾರ ಸುತ್ತೂರು ಶ್ರೀಗಳು ಮಠಕ್ಕೆ ಆಗಮಿಸಲಿದ್ದಾರೆ. ಅವರು ಬಂದ ಮೇಲೆ ಮುಂದೆ ಯಾವ ನಿರ್ಣಯ ಕೈಗೊಳ್ಳಬೇಕು ಎಂದು ನಿರ್ಧಾರವಾಗಲಿದೆ.
Related Articles
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಯಾರೂ ಮಠಕ್ಕೆ ಬರಬೇಡಿ. ಶ್ರೀಗಳನ್ನು ನೋಡಲು ಅವಕಾಶವಿಲ್ಲ, ಶ್ರೀಗಳಿಗೆ ಸೋಂಕು ತಗಲುತ್ತದೆ ಎಂದು ಹೇಳಿ ದರೂ ಭಕ್ತರು ತಂಡೋಪತಂಡವಾಗಿ ಬರು ತ್ತಿದ್ದಾರೆ. ಶ್ರೀಗಳನ್ನು ನಾವು ನೋಡ ಬೇಕು, ಅವಕಾಶ ನೀಡಿ ಎಂದು ಅಪರಾಹ್ನ ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಭಕ್ತರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಮಧ್ಯಾಹ್ನ ಹಳೆಯ ಮಠದಲ್ಲಿ ಕಿಟಿಕಿಯ ಮೂಲಕ ನೋಡಲು ಅವಕಾಶ ಕಲ್ಪಿಸಲಾಯಿತು.
Advertisement