Advertisement

ಶ್ರೀ ಕ್ಷೇತ್ರ ಘನ್ಸೋಲಿ: ಶ್ರೀ ಮೂಕಾಂಬಿಕಾ ದೇವಾಲಯದ ವಾರ್ಷಿಕ ಮಹಾಸಭೆ

11:47 AM Oct 26, 2018 | |

ನವಿಮುಂಬಯಿ:  ಘನ್ಸೋಲಿ ಮೂಕಾಂಬಿಕಾ ದೇವಾ ಲಯದ ಆಡಳಿತ ಸಮಿತಿ ಶ್ರೀ ಸಂತೋಷಿ ಮಾತಾ ದೇವಾಲಯ ಟ್ರಸ್ಟಿನ 28ನೇ ವಾರ್ಷಿಕ ಮಹಾ ಸಭೆಯು ಅ. 21ರಂದು  ಬೆಳಗ್ಗೆ  ಟ್ರಸ್ಟಿನ ಅಧ್ಯಕ್ಷರಾದ ಧರ್ಮದರ್ಶಿ  ಅಣ್ಣಿ ಸಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ  ಜರಗಿತು.

Advertisement

ಟ್ರಸ್ಟಿನ ಎಲ್ಲ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಮಹಿಳಾ ಮಂಡಳಿ ಯವರು ಪ್ರಾರ್ಥನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌ರವರು ಸದಸ್ಯರನ್ನು ಸ್ವಾಗತಿಸಿ,  2017 – 2018 ನೇ ಸಾಲಿನ  ವಾರ್ಷಿಕ ವರದಿಯನ್ನು ಓದಿದರು.

ಜತೆ ಕಾರ್ಯದರ್ಶಿ ತಾಳಿ ಪಾಡಿಗುತ್ತು ಭಾಸ್ಕರ್‌ ಎಂ. ಶೆಟ್ಟಿ ಅವರು 27ನೇ ವಾರ್ಷಿಕ ಮಹಾ ಸಭೆಯ  ವರದಿಯನ್ನು ಓದಿದರು. ಕೋಶಾಧಿಕಾರಿ ಶೇಖರ್‌ ವಿ. ದೇವಾಡಿಗ  ಅವರು 2017 – 2018ರ ಲೆಕ್ಕಪತ್ರವನ್ನು ಮಂಡಿಸಿದರು. ಆನಂತರ  ನೂತನ ಸಮಿತಿ  ರಚನೆ ಬಗ್ಗೆ ಸಭೆಯಲ್ಲಿ  ಚರ್ಚಿಸಿ 2018 -2021ರವರೆಗೆ ಮೂರು ವರ್ಷಗಳ ಅವಧಿಗೆ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರನ್ನು ಟ್ರಸ್ಟಿನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ  ಮಾಡ ಲಾಯಿತು.

ಉಪಾಧ್ಯಕ್ಷರನ್ನಾಗಿ ನಂದಿಕೂರು ಜಗದೀಶ್‌ ಶೆಟ್ಟಿ ಮತ್ತು  ಕೆ.ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯ ದರ್ಶಿಯಾಗಿ  ಸುರೇಶ್‌ ಎಸ್‌. ಕೋಟ್ಯಾನ್‌, ಜತೆ ಕಾರ್ಯ

ದರ್ಶಿಯಾಗಿ  ತಾಳಿಪಾಡಿಗುತ್ತು ಭಾಸ್ಕರ್‌ ಎಂ. ಶೆಟ್ಟಿ, ಕೋಶಾಧಿಕಾರಿ ಯಾಗಿ ಶೇಖರ್‌ ವಿ. ದೇವಾಡಿಗ, ಜತೆ ಕೋಶಾಧಿಕಾರಿಯಾಗಿ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ ಹಾಗೂ ಕಾರ್ಯಕಾರಿ  ಸಮಿತಿಯ ಸದಸ್ಯರನ್ನಾಗಿ ರಾಘು ಆರ್‌. ಕೋಟ್ಯಾನ್‌, ಕುಟ್ಟಿ ಎ. ಕುಂದರ್‌, ಶಂಕರ್‌ ಮೊಲಿ, ಸುಧಾ ಕರ್‌ ಸಿ. ಪೂಜಾರಿ, ವಿಶ್ವನಾಥ್‌ಎಸ್‌. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಶ್ರೀಧರ್‌ ಬಿ. ಪೂಜಾರಿ, ಮಹಾಬಲ ಟಿ. ಶೆಟ್ಟಿ, ಹರೀಶ್‌ ಶೆಟ್ಟಿ  ಕುರ್ಕಾಲ್‌, ಹರೀಶ್‌ ಶೆಟ್ಟಿ ಪಡುಬಿದ್ರಿ, ಹರೀಶ್‌ ಶೆಟ್ಟಿ ನಲ್ಲೂರು ಮತ್ತು ಶಕುಂತಳಾ ಎಸ್‌. ಶೆಟ್ಟಿ ಅವರನ್ನು  ಆಯ್ಕೆ ಮಾಡಲಾಯಿತು.

Advertisement

ಕರುಣಾಕರ ಆಳ್ವ ಅವರು ಮಾತನಾಡಿ, ಟ್ರಸ್ಟ್‌ನ ಸದಸ್ಯರನ್ನು ನೋಡಿ ತುಂಬಾ ಸಂತೋಷವಾಗಿದೆ. ಅಣ್ಣಿ ಶೆಟ್ಟಿಯವರ ಮುಂದಾಳತ್ವದಲ್ಲಿ  ಇಲ್ಲಿ ಒಳ್ಳೆಯ ಕೆಲಸ ನಡೆಯುತ್ತಿದೆ. ಸಮಿತಿಯ ಸದಸ್ಯರು ಇಲ್ಲಿಗೆ ಬಂದಾಗ ನಮ್ಮನ್ನು, ಇತರ ಭಕ್ತರನ್ನು ಗೌರವಿಸುತ್ತಾರೆ. ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಾವೆಲ್ಲರೂ ಒಟ್ಟಾಗಿ ಸಹಕರಿಸುವ ಎಂದರು.

ಪ್ರಭಾಕರ್‌ ಎಸ್‌. ಹೆಗ್ಡೆ ಮಾತ ನಾಡಿ, ಕಾರ್ಯದರ್ಶಿಯಾಗಿ ಸುರೇಶ್‌ ಕೋಟ್ಯಾನ್‌ ಅವರು  ಎಲ್ಲ ಕಾರ್ಯಕ್ರಮಗಳ ವಿವರ ಬರೆದಿಟ್ಟಿದ್ದಾರೆ. ಅವರ ಕಾರ್ಯ ಶ್ಲಾಘನೀಯ. ಮುಂದೆ ಬೃಹತ್‌ ಯೋಜನೆ ಇರುವುದರಿಂದ ಇದೇ ಸಮಿತಿಯನ್ನು ಮುಂದುವರಿಸಿದ್ದು, ಸೂಕ್ತವಾಗಿದೆ. ಅಣ್ಣಿ ಶೆಟ್ಟಿ ಅವರ ಅಧ್ಯಕ್ಷತೆ ಇರುವುದರಿಂದ  ಈ ಸಂಸ್ಥೆಯಲ್ಲಿ ಯಾವುದೇ ತಪ್ಪು ಕೆಲಸ ನಡೆಯುವುದಿಲ್ಲ.  ಒಳ್ಳೆಯ ಕಾರ್ಯವೇ ನಡೆಯುತ್ತಿದೆ. ಆದ್ದ ರಿಂದಲೇ ಈ ಕ್ಷೇತ್ರ ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಾ ಇದೆ. ನಾವೆಲ್ಲರೂ ಸಹಕರಿಸೋಣ ಎಂದರು.

ನಂದಿಕೂರು ಜಗದೀಶ್‌  ಶೆಟ್ಟಿ ಅವರು ಮಾತನಾಡಿ, ಕರುಣಾಕರ ಆಳ್ವರ  ಮಾತು ಕೇಳಿ ಹೆಮ್ಮೆಯಾಗುತ್ತದೆ. ಅವರು  ಹೇಳಿದ್ದಾರೆ ಸಮಿತಿಯ ಸದಸ್ಯರು  ನಮಗೆ ತುಂಬಾ ಗೌರವ ನೀಡುತ್ತಾರೆ. ನಮ್ಮನ್ನು ಬೇರೆಯವರು ಹೊಗಳಿದಾಗ ನಿಜವಾಗಿಯು  ಸಂತೋಷವಾಗಿದೆ. ನಮ್ಮನ್ನು ಪುನಃ 3 ವರ್ಷದ ಅವಧಿಗೆ ನೇಮಿಸಿದ್ದಕ್ಕೆ  ನಿಮಗೆಲ್ಲರಿಗೂ ಧನ್ಯವಾದಗಳು. ಮುಂದಿನ ನಮ್ಮ ಕಟ್ಟಡ ನಿರ್ಮಾಣ ಯೋಜನೆಗೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ನಮ್ಮ ಅಧ್ಯಕ್ಷರಾದ ಅಣ್ಣಿ  ಶೆಟ್ಟಿಯವರು  ಕಳೆದ 36 ವರ್ಷಗಳಿಂದ  ದೇವಿಯ ಸೇವೆ ಮಾಡುತ್ತಾ ಇದ್ದಾರೆ.  ಅವರ ಜತೆ ಕಳೆದ  20 ವರ್ಷಗಳಿಂದ ನಾನು ಇದ್ದೇನೆ ಅವರ ಜತೆ ಕೆಲಸ ಮಾಡಲು ತುಂಬಾ  ಸಂತೋಷವಾಗಿದೆ. ಅಧ್ಯಕ್ಷರೇ ನೀವು ಮುಂದೆ ಹೋಗಿ ನಾವು ನಿಮ್ಮ ಬೆನ್ನೆಲುಬಾಗಿ  ಹಿಂದೆ ಸದಾ ಇದ್ದೇವೆ ಎಂದರು.

ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ತಮ್ಮ ಅಧ್ಯಕ್ಷೀಯ  ಭಾಷಣದಲ್ಲಿ, ಈ ಕ್ಷೇತ್ರದಲ್ಲಿ ಏನೆಲ್ಲ ಕಾರ್ಯಕ್ರಮ ನಡೆದಿದೆ ಎಂದು ಹೊರಗಿನವರು  ಹೊಗಳಿದ್ದಾರೆ. ಅದನ್ನು ಕೇಳಿ ಸಂತೋಷವಾಗಿದೆ. ಎಲ್ಲಿ ಒಗ್ಗಟ್ಟು ಇದೆಯೋ ಅಲ್ಲಿ ಪ್ರಗತಿ ಸಾಧ್ಯವಿದೆ.  ಸುರೇಶ್‌ ಕೋಟ್ಯಾನ್‌ರವರು ಇಲ್ಲಿ ಜರಗಿದ ಎಲ್ಲ ಕಾರ್ಯಕ್ರಮವನ್ನೂ ಸ್ಪಷ್ಟವಾಗಿ ಬರೆದಿಟ್ಟಿದ್ದಾರೆ. ನಮ್ಮನ್ನೇ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಿಸಿದ್ದೀರಿ. ಬರೇ ಅಧ್ಯಕ್ಷರೊಬ್ಬರಿಂದ ಏನೂ ಮಾಡಲು ಸಾಧ್ಯವಿಲ್ಲ. ಸಮಿತಿಯ ಸದಸ್ಯರ ಸಹಕಾರದಿಂದ ಮಾತ್ರ ಸಾಧ್ಯ. ನಮ್ಮ ಸಮಿತಿಯ ಸದಸ್ಯರು ಯಾವತ್ತೂ ನನಗೆ ಎದುರು ಮಾತಾಡಿದವರಲ್ಲ. ಎಲ್ಲ ಕಾರ್ಯಕ್ಕೂ ಸಹಕಾರ ನೀಡುತ್ತಾ ಇದ್ದಾರೆ. 1982ರಲ್ಲಿ ಅಧ್ಯಕ್ಷನಾಗಿ ಸೇವೆ ಮಾಡುವ ಭಾಗ್ಯ ದೊರಕಿತು. ಅಂದಿನಿಂದ ಕಳೆದ 36 ವರ್ಷಗಳಿಂದ  ಅಧ್ಯಕ್ಷನಾಗಿ ತಾಯಿ ಮೂಕಾಂಬಿಕೆಯ  ಸೇವೆ ಮಾಡುತ್ತಾ ಬಂದಿದ್ದೇನೆ. 1999ರಲ್ಲಿ  ಸತತ ಪ್ರಯತ್ನದಿಂದ ಸಿಡ್ಕೊàದಿಂದ  300 ಚ. ಮೀ. ಜಾಗ  ಪಡೆಯುವಲ್ಲಿ ಯಶಸ್ವಿಯಾಗಿ ಆ ಜಾಗದಲ್ಲಿ ದಾನಿಗಳ ಸಹಕಾರದಿಂದ  ಈ ದೇವಾಲಯ ನಿರ್ಮಿಸಿ 2003ರಲ್ಲಿ ಉದ್ಘಾಟಿಸಲಾಯಿತು. ಇದಕ್ಕೆ ಸಹಕಾರ ನೀಡಿದ ದಾನಿಗಳನ್ನು ಯಾವತ್ತೂ ಮರೆಯಬಾರದು. ಹಿಂದೆ ವರ್ಷಕ್ಕೆ ಒಂದು ದಿನ ನವರಾತ್ರಿ ಸಂದರ್ಭದಲ್ಲಿ ಅನ್ನದಾನ ನಡೆಯುತ್ತಿದ್ದು, ಈ ದೇವಾಲಯ ನಿರ್ಮಿಸಿದ ಬಳಿಕ ನವರಾತ್ರಿಯ 10 ದಿನಗಳ 2 ಹೊತ್ತು ಅನ್ನದಾನ ನಡೆಯುತ್ತಿದೆ. ಇತರ ವಿಶೇಷ ಸಂದರ್ಭದಲ್ಲೂ ಅನ್ನದಾನ ನಡೆಯುತ್ತಿದೆ. ಈಗ ಸತತ ಪ್ರಯತ್ನದಿಂದ 700 ಚ. ಮೀ. ಜಾಗ ಸಿಕ್ಕಿದ್ದು, ಈಗ  ಅದನ್ನು ದೇವಾಲಯದ 300 ಚ. ಮೀ. ಜಾಗದ ಜತೆಗೆ ಸೇರ್ಪಡೆಗೊಳಿಸಿ ಕಟ್ಟಡದ ನಕ್ಷೆ ತಯಾರಿಸಿ  ಅನುಮತಿಗಾಗಿ ನಗರ ಪಾಲಿಕೆಗೆ  ಕಳುಹಿಸಿದ್ದೇವೆ. ಅನುಮತಿ  ದೊರೆತ ಕೂಡಲೇ ಭೂಮಿ ಪೂಜೆ ಮಾಡಿ ಕೆಲಸ ಆರಂಭಿಸಬೇಕಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅತೀ ಅಗತ್ಯವಿದೆ. ನಿಮಗೆಲ್ಲರಿಗೂ ದೇವಿಯ ಅನುಗ್ರಹ ಸದಾ ಇರಲಿ ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಪುಷ್ಪ ಗೌರವ ನೀಡಲಾಯಿತು. ಕಾರ್ಯದರ್ಶಿ ಸುರೇಶ್‌  ಕೋಟ್ಯಾನ್‌ ಅವರು ನಿರೂ ಪಿಸಿ ಕೊನೆಗೆ ವಂದಿಸಿದರು.

ವರ್ಷದಲ್ಲಿ 192 ದಿನ ಅನ್ನ ಸಂತರ್ಪಣೆ ನಡೆದಿರುವುದು  ಸಂತೋಷ ತಂದಿದೆ. ಅಣ್ಣಿ ಶೆಟ್ಟಿಯವರ ಹಾಗೂ ಅವರ ಸಮಿತಿಯ ಸಾಧನೆ ಶ್ಲಾಘನೀಯ. ಸಮಿತಿಯ ಮುಂದೆ ಕಟ್ಟಡ ನಿರ್ಮಾಣದ  ಬೃಹತ್‌ ಯೋಜನೆ ಇದೆ. ಅದಕ್ಕೆ ನನ್ನಿಂದಾದ ಸಹಕಾರ ನೀಡುತ್ತೇನೆ.
 – ಕೆ. ಡಿ. ಶೆಟ್ಟಿ, ಸಂಸ್ಥಾಪಕರು,  ಭವಾನಿ ಫೌಂಡೇಷನ್‌ ಮುಂಬಯಿ

ಕ್ಷೇತ್ರವು ಯಕ್ಷಗಾನ, ಅನ್ನದಾನದಿಂದ ಪ್ರಸಿದ್ಧವಾಗಿದೆ.  ಸಮಿತಿ ಒಳ್ಳೆಯ ಕೆಲಸ ಮಾಡುತ್ತಿರುವುದರಿಂದ ಮುಂದಿನ ಮೂರು ವರ್ಷಕ್ಕೆ ಇದೇ ಸಮಿತಿಯನ್ನು ಮುಂದುವರಿಸಿದ್ದು ಸೂಕ್ತ¤. ಸಮಿತಿ ಸತತ ಪ್ರಯತ್ನದಿಂದ  700 ಚ. ಮೀ. ಜಾಗ ಸಿಕ್ಕಿದೆ. ಮುಂದೆ  ಕಟ್ಟಡ ನಿರ್ಮಾಣದ ಬೃಹ‌ತ್‌ ಯೋಜನೆ ಇದೆ. ತಾಯಿಯ ಆಶೀರ್ವಾದದಿಂದ ಆದಷ್ಟು ಬೇಗ ಕಟ್ಟಡ ನಿರ್ಮಾಣಗೊಳ್ಳಲಿ. 
 -ಧರ್ಮದರ್ಶಿ ರಮೇಶ್‌  ಎಂ. ಪೂಜಾರಿ, ಅಧ್ಯಕ್ಷರು, ಶ್ರೀ ಶನೀಶ್ವರ ಮಂದಿರ ನೆರೂಲ್‌

Advertisement

Udayavani is now on Telegram. Click here to join our channel and stay updated with the latest news.

Next