Advertisement
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದಲ್ಲಿ ರವಿವಾರ ಜರಗಿದ ಬೃಹತ್ ಗೀತೋತ್ಸವದ ಮಂಗಳ್ಳೋತ್ಸವದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.
Related Articles
Advertisement
ಭಗವದ್ಗೀತೆ, ನ್ಯಾಯಾಂಗ ಅಗತ್ಯಹೈಕೋರ್ಟ್ ನಿವೃತ್ತ ನ್ಯಾಯಾಧೀಶ ದಿನೇಶ್ ಪಿ.ಎಸ್.ಮಾತನಾಡಿ, ಸನಾತನ ಧರ್ಮದಂತೆ ಕಾರ್ಯಾಂಗ ನಡೆಯುತ್ತಿದೆ. ಭಗವದ್ಗೀತೆ ಮತ್ತು ನ್ಯಾಯಾಂಗದ ಅಗತ್ಯ ಬಹಳಷ್ಟಿದೆ. ವರ್ತಮಾನದ ಸ್ಥಿತಿಯಲ್ಲಿ ಕಾನೂನು ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಗಳು ಕಾನೂನು ಪ್ರಕಾರವಾಗಿ ನಡೆಯುತ್ತಿದೆ. ಈಗ ನಡೆಯುತ್ತಿರುವುದು ಸಂವಿಧಾನದ ಅಡಿಯಲ್ಲಿ ಬರುವ ಕಾನೂನು. ಭಗವದ್ಗೀತೆ ಮಹಾಭಾರತದ ಒಂದು ಅಂಗವಾಗಿದೆ. ಭಗವದ್ಗೀತೆಯ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಜನರು ತಮ್ಮ ಪ್ರತಿಭೆಯನ್ನು ಜಾಗೃತಗೊಳಿಸಬೇಕು ಎಂದರು. ಡಾ| ಎಂ.ಎನ್.ದಯಾಕರ್ ಉಜಿರೆ ಹಾಗೂ ಪುಣೆಯ ಹರಿ ಬಾಲಕೃಷ್ಣ ಜನಿ ಅವರಿಗೆ ಪರ್ಯಾಯ ಶ್ರೀಪಾದರು ಶ್ರೀಕೃಷ್ಣಾನುಗ್ರಹ ಪ್ರಶಸ್ತಿಯನ್ನು ಪ್ರದಾನಿಸಿದರು. 2025ರ ವಿಶ್ವಾವಸು ನಾಮ ಸಂವತ್ಸರದ ನೂತನ ಶ್ರೀ ಪುತ್ತಿಗೆ ಮಠ ಪರ್ಯಾಯ ಪಂಚಾಂಗವನ್ನು ಪುತ್ತಿಗೆ ಶ್ರೀಪಾದರು ಬಿಡುಗಡೆಗೊಳಿಸಿದರು. ಪರ್ಯಾಯ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಶಾಸಕರಾದ ಯಶ್ಪಾಲ್ ಎ.ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.