ಮುಂಬಯಿ: ಜೀರ್ಣೋದ್ಧಾರಗೊಳ್ಳುತ್ತಿರುವ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಂಬಯಿ ಸಮಿತಿಯ ಸಭೆಯು ಇತ್ತೀಚೆಗೆ ಗೋರೆಗಾಂವ್ ಪಶ್ಚಿಮದ ಲಲಿತ್ ಹೊಟೇಲ್‌ನ ಕ್ರಿಸ್ಟಲ್ ಸಭಾಗೃಹದಲ್ಲಿ ನಡೆಯಿತು. ಬಪ್ಪನಾಡು ದೇವಸ್ಥಾನದ ಅನುವಂಶಿಕ ಮತ್ತು ಆಡಳಿತ ಮೊಕ್ತೇಸರ ಎನ್. ಎಸ್. ಮನೋಹರ ಶೆಟ್ಟಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್ ಆಳ್ವ ಅವರು ಕ್ಷೇತ್ರದ ಅಭಿವೃದ್ದಿಯ ಬಗ್ಗೆ ವಿವರಿಸಿದರು.
ದೇವಸ್ಥಾನದ ಮಹತ್ವ ಮತ್ತು ಸೇವೆಯ ಬಗ್ಗೆ ಸಮಿತಿಯ ಸದಸ್ಯ ಎಳತ್ತೂರು ಸಂತೋಷ್ ಕುಮಾರ್ ಹೆಗ್ಡೆ ವಿವರಿಸಿದರು. ಕರ್ನಿರೆ ವಿಶ್ವನಾಥ ಶೆಟ್ಟಿ, ಧÌಜಸ್ತಂಭಕ್ಕೆ ಬೆಳ್ಳಿಯ ಹೊದಿಕೆ ನೀಡಿದ ರೇಷ್ಮಾ ಪೂಜಾರಿ, ಸಮಿತಿ ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ ಶೆಟ್ಟಿ, ಅಶೋಕ್ ಸುವರ್ಣ ಮೊದಲಾದವರು ದೇವಸ್ಥಾನದ ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವದ ಬಗ್ಗೆ ಮಾತನಾಡಿದರು.
ಉದ್ಯಮಿ ಪುರುಷೋತ್ತಮ ಎಸ್. ಕೋಟ್ಯಾನ್, ಚಿತ್ರಾಪು ಲಕ್ಷ¾ಣ ಪೂಜಾರಿ, ಧನಂಜಯ ಮಟ್ಟು, ಶಿಮಂತೂರು ಉದಯ ಶೆಟ್ಟಿ, ಗಂಗಾಧರ ಅಮೀನ್, ರತ್ನಾಕರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಸುನೀಲ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮ ಕಲಶೋತ್ಸವಕ್ಕೆ ದಾನ ನೀಡುವ ಭಕ್ತಾದಿಗಳು ಗೋರೆಗಾಂವ್ ಲಲಿತ್ ಹೊಟೇಲ್‌ನಲ್ಲಿ ತಮ್ಮ ದೇಣಿಗೆಯನ್ನು ತಲುಪಿಸಿದ್ದಲ್ಲಿ ಅದನ್ನು ಜೀಣೊìದ್ಧಾರ ಸಮಿತಿಗೆ ವರ್ಗಾಯಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.
ಹೆಚ್ಚಿನ ವಿವರಗಳಿಗೆ ಪುರುಷೋತ್ತಮ ಎಸ್. ಕೋಟ್ಯಾನ್ (9819800685), ವಾಸುದೇವ ಎಂ. ಕೋಟ್ಯಾನ್ (9867726940), ಅಶೋಕ್ ಸುವರ್ಣ (9769333860) ಅವರನ್ನು ಸಂಪರ್ಕಿಸಲು ಸಭೆಯಲ್ಲಿ ತಿಳಿಸಲಾಯಿತು. ಸಮಾವೇಶದ ಸಂಘಟಕ ಜಗನ್ನಾಥ ವಿ. ಕೋಟ್ಯಾನ್ ಪುಷ್ಪಗುತ್ಛವನ್ನಿತ್ತು ಸರ್ವರನ್ನೂ ಗೌರವಿಸಿದರು. ಭಾರತ್ ಬ್ಯಾಂಕಿನ ಉಪ ಮಹಾಪ್ರಬಂಧಕ ವಾಸುದೇವ ಎಂ. ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.