ಗಂಗಾವತಿ: ಅಯೋಧ್ಯೆಯಲ್ಲಿ ಮರ್ಯಾದಾ ಪುರುಷ ಶ್ರೀರಾಮ ಸೀತಾ ಸಮೇತ ಲಕ್ಷ್ಮಣ ಮಂದಿರ ನಿರ್ಮಾಣದ ಕನಸು ಕಂಡು ನಿರಂತರ ಹೋರಾಟ ಮಾಡಿದವರಲ್ಲಿ ಉಡುಪಿಯ ವಿಶ್ವೇಶ ತೀರ್ಥ ಶ್ರೀ ಪಾದಂಗಳು ಪ್ರಮುಖರು. ಹಿಂದೂ ಧರ್ಮದ ಬೆಳವಣಿಗೆಗೆ ಉಡುಪಿ ಮಠದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ನಗರದ ಸತ್ಯನಾರಾಯಣ ಪೇಟೆಯ ಶ್ರೀ ಸತ್ಯನಾರಾಯಣ ದೇವಸ್ಥಾನ ಹಾಗೂ ಶ್ರೀ ವಿಜಯಧ್ವಜ ವಿದ್ಯಾಪೀಠದಲ್ಲಿ ವಿಶ್ವೇಶ ತೀರ್ಥ ಸಭಾಭವನದ ನಿರ್ಮಾಣ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗಂಗಾವತಿಯಲ್ಲಿ ವಿದ್ಯಾಪೀಠ ಸ್ಥಾಪಿಸುವ ಮೂಲಕ ಧರ್ಮದ ಕಾರ್ಯ ಶ್ರೀ ಮಠದಿಂದ ನಡೆಯುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ, ಸಂಜೆ ಉಡುಪಿಯ 1008 ಶ್ರೀ ವಿಶ್ವಪ್ರಸನ್ನ ಶ್ರೀ ಪಾದಂಗಳು, ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶೆಟ್ಟಿ, ಎಚ್ ಗಿರೇಗೌಡ, ಮಹಾಲಿಂಗಪ್ಪ, ಅಮರೇಗೌಡ, ಬ್ರಾಹ್ಮಣ ಸಮಾಜದ ಮುಖಂಡರಾದ ಎಸ್.ಬಿ. ಎಚ್. ನಾರಾಯಣ ರಾವ್, ಪಂಡಿತ ವಾಗೀಶ ಗೊರೆಬಾಳ, ಗೊರೆಬಾಳ ಶ್ರೀನಿವಾಸ, ದರೋಜಿ ಶ್ರೀರಂಗ, ಅಮರೆಗೌಡ, ಜಿ.ಪವನಕುಮಾರ ಗುಂಡೂರು, ಮೇಗೂರು ರಾಘವೇಂದ್ರ, ನವಲಿ ಶ್ರೀನಾಥ, ಅರ್ಚಕ ಶ್ರೀಧರ, ವಾಸುದೇವ ನವಲಿ, ಪತ್ರಕರ್ತರಾದ ಪ್ರಸನ್ನ ದೇಸಾಯಿ, ರಾಮಮೂರ್ತಿ, ವಿರಾಪುರ ಕೃಷ್ಣ ಹಾಗೂ ಬ್ರಾಹ್ಮಣ ಸಮಾಜದವರಿದ್ದರು.