Advertisement
ಸಂಘದ ಮಹಿಳಾ ವಿಭಾಗಧ್ಯಕ್ಷೆ ರೀನಾ ಕೇದರ್‌ನಾಥ್ ಬೋಳಾರ್ ಅವರ ಮುಂದಾಳತ್ವದಲ್ಲಿ ನಡೆದ ತ್ರಿವಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್ ವಹಿಸಿದ್ದರು. ಸಮಾಜದ ಜೇಷ್ಠ ಮಹಿಳಾ ಧುರೀಣೆ ಧನ್ವಂತರಿ ದಿನಕರ್ ರಾವ್ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಸುಮನ್ ಮನ್‌ಮೋಹನ್ ರಾಜ್, ಕಲಾವತಿ ಗಣಪತಿ ಸೌಕೂರ್, ಸಂಘದ ಉಪಾಧ್ಯಕ್ಷ ಎನ್. ರವೀಂದ್ರನಾಥ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಕೇದರ್‌ನಾಥ ಆರ್. ಬೋಳಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Related Articles
Advertisement
ಕುಲದೇವರು ಶ್ರೀ ರಾಮ ದೇವರನ್ನು ಸ್ತೋತ್ರದೊಂದಿಗೆ ಆರಾಧಿಸಿ ಕಾರ್ಯಕ್ರಮವು ಪ್ರಾರಂಭಗೊಂಡಿತು. ಬಳಿಕ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.
ಮಹಿಳೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ, ಕನ್ನಡ ಕಲಿಕೆ ಮತ್ತು ಆಧುನಿಕ ಯುಗದ ದಾಂಪತ್ಯ ಜೀವನದಲ್ಲಿ ಗಂಡನ ಪಾತ್ರ ಮುಖ್ಯವೋ ಹೆಂಡತಿಯ ಪಾತ್ರ ಪ್ರಧಾನವೋ ವಿಚಾರವಾಗಿ ಹರಟೆ ಕಾರ್ಯಕ್ರಮ ಪ್ರಸ್ತುತಗೊಂಡಿತು. ಮಧ್ಯಾಂತರದಲ್ಲಿ ಮಹಿಳಾ ವಿಭಾಗದ ಪದಾಧಿಕಾರಿಗಳು ಯೋಗ ಇನ್‌ಸ್ಟಿಟ್ಯೂಟ್ ತಂಡವು ಜೀವವನ್ನು ಯಾವ ರೀತಿಯಾಗಿ ಸಮತೋಲನದಲ್ಲಿ ಇರಿಸಬೇಕು ವಿಚಾರಿತ ಆರೋಗ್ಯ ಸಂಜೀವಿನಿ ಮಾಹಿತಿ ಕಾರ್ಯಗಾರವನ್ನು ನಡೆಸಿ, ಯೋಗದ ಮುಖೇನ ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಸದಸ್ಯರು, ಮಹಿಳಾ ಸದಸ್ಯೆಯರು, ಮಕ್ಕಳಿಂದ ವಿವಿಧ ವಿನೋದಾವಳಿಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರಿಯ ಸಂಘ ಮುಂಬಯಿ ಮಹಿಳಾ ವಿಭಾಗದ ಗೌರವ ಕೋಶಾಧಿಕಾರಿ ಪ್ರಜ್ಞಾ ಎಸ್. ರಾವ್, ಕಾರ್ಯಕಾರಿ ಸಮಿತಿಯ ಸದಸ್ಯೆಯರುಗಳಾದ ಕವಿತಾ ಆರ್. ರಾವ್, ಕಾಂತಿ ವಿ. ರಾವ್, ಧನಲಕ್ಷ್ಮೀ ಆರ್. ಕಾರ್ನಾಡ್, ಶ್ರೇಯಾ ಎಸ್. ರಾವ್, ಸಾರಿಕಾ ಡಿ. ಶೇರುಗಾರ್, ಅನುಪಮಾ ಎಸ್. ರಾವ್, ನಿಶಾ ಎಸ್. ರಾವ್, ಗಾಯತ್ರಿ ರಾವ್ ಸೇರಿದಂತೆ ಮಾಜಿ, ಹಾಲಿ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಆರತಿ ಎನ್. ರಾವ್ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು.ಕೀರ್ತನ ರೂಪೇಶ್ ರಾವ್ ಸ್ವಾಗತಿಸಿದರು. ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್ ಗಣ್ಯರಿಗೆ ಪುಷ್ಪಗುತ್ಛವನ್ನಿತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ಪ್ರದಾನಿಸಿ ಅಭಿನಂದಿಸಿದರು. ಸಪ್ನಾ ಉದಯಕುಮಾರ್ ಬೇಕಲ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಗೌರವ ಕಾರ್ಯದರ್ಶಿ ಚಿತ್ರಾ ಎಂ. ರಾವ್ ವಂದಿಸಿದರು. ಚಿತ್ರ-ವರದಿ : ರೋನ್ಸ್ ಬಂಟ್ವಾಳ್