Advertisement

‘ಸೈಂಧವ’ನ ಜತೆಯಾದ ಶ್ರದ್ಧಾ; ಪ್ಯಾನ್ ಇಂಡಿಯಾ ಚಿತ್ರದಲ್ಲಿ ಯು ಟರ್ನ್ ಬೆಡಗಿ

05:05 PM Apr 16, 2023 | Team Udayavani |

ಯು ಟರ್ನ್ ಸಿನಿಮಾ ಮೂಲಕ ಕನ್ನಡ ಸಿನಿಪ್ರೇಕ್ಷಕರನ್ನು ರಂಜಿಸಿದ್ದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್‌ ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಾಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಸಕ್ರಿಯರಾಗಿರುವ ಶ್ರದ್ಧಾ ಕೈ ತುಂಬಾ ಅವಕಾಶಗಳಿವೆ. ಇದೀಗ ಅವರು ಪ್ಯಾನ್‌ ಇಂಡಿಯಾ ಸಿನಿಮಾಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

Advertisement

ಟಾಲಿವುಡ್‌ ನಟ ವಿಕ್ಟರಿ ವೆಂಕಟೇಶ್‌ ನಟನೆಯ 75ನೇ ಸಿನಿಮಾ “ಸೈಂಧವ್‌’ ಚಿತ್ರಕ್ಕೆ ಶ್ರದ್ಧಾ ನಾಯಕಿಯಾಗಿದ್ದಾರೆ. ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ವೈಜಾಗ್‌ನಲ್ಲಿ ಎರಡನೇ ಹಂತದ ಶೂಟಿಂಗ್‌ ನಡೆಯುತ್ತಿದೆ.

ನಿಹಾರಿಕಾ ಎಂಟರ್‌ ಟೈನ್ಮೆಂಟ್‌ ನಡಿ ವೆಂಕಟ್‌ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂದವ್‌ಗೆ ಕನ್ನಡತಿ ಶ್ರದ್ಧಾ ಶ್ರೀನಾಥ್‌ ಎಂಟ್ರಿ ಕೊಟ್ಟಿದ್ದಾರೆ. ವಿಕ್ಟರಿಗೆ ವೆಂಕಟೇಶ್‌ ಗೆ ಜೋಡಿಯಾಗಿ ನಟಿಸುತ್ತಿರುವ ಮೂಗುತಿ ಸುಂದರಿಯ ಫ‌ಸ್ಟ್‌ ಲುಕ್‌ ಅನಾವರಣ ಮಾಡಲಾಗಿದೆ.

ಈ ಸಿನಿಮಾದಲ್ಲಿ ಶ್ರದ್ಧಾ ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸೀರೆಯುಟ್ಟು ಹೋಮ್ಲಿ ಲುಕ್‌ ಕಾಣಿಸಿಕೊಂಡಿರುವ ಶ್ರದ್ದಾ, ಕೈಯಲ್ಲಿ ಟಿಫ‌ನ್‌ ಬಾಕ್ಸ್‌ ಹಿಡಿದು ಸೀರಿಯಸ್‌ ಲುಕ್‌ನಲ್ಲಿದ್ದಾರೆ. ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್‌ ಸಿನಿರಂಗ ಪ್ರವೇಶಿಸಿದ್ದಾರೆ. ಸಿನಿಮಾಗೆ ಸಂತೋಷ್‌ ನಾರಾಯಣನ್‌ ಸಂಗೀತ ನಿರ್ದೇಶನ, ಎಸ್‌ ಮಣಿಕಂದನ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next