ಚಿಂಚೋಳಿ: ಕಲಬುರಗಿ-ಯಾದಗಿರಿ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಕಳೆದ ಆರು ವರ್ಷಗಳಿಂದ ಜಿಲ್ಲೆಯ ಒಂದು ಗ್ರಾಮ ಪಂಚಾಯಿತಿಗೂ ಭೇಟಿ ನೀಡಿಲ್ಲ, ಅಲ್ಲದೇ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿಲ್ಲ, ಈ ಕುರಿತು ಜನರಿಗೆ ಉತ್ತರ ನೀಡಿ ಅವರು ಮತಯಾಚಿಸಬೇಕು ಎಂದು ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಸವಾಲು ಹಾಕಿದರು.
ತಾಲೂಕಿನ ಕಲ್ಲೂರ-ಮಿರಿಯಾಣ ಗ್ರಾಮದಲ್ಲಿ ತಮ್ಮ ಚುನಾವಣೆ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ ಆರು ವರ್ಷಗಳಲ್ಲಿ ವಿಧಾನ ಪರಿಷತ್ ಅಧಿ ವೇಶನದಲ್ಲಿ ನಮ್ಮ ಭಾಗದ ಗ್ರಾಪಂಗಳಿಗೆ ಸಿಗುವ ಸೌಕರ್ಯಗಳ ಬಗ್ಗೆ ಒಂದೂ ಪ್ರಶ್ನೆ ಮಾಡಿಲ್ಲ. ಅನೇಕ ಗ್ರಾಪಂಗಳಲ್ಲಿ ಮೂಲ ಸೌಕರ್ಯಗಳಿಲ್ಲ, ಗ್ರಾಪಂಗಳಿಂದ ನೀಡಿದ ಸಾವಿರಾರು ಮನೆಗಳ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿವೆ. ಅವರಿಗೆ ಯಾಕೆ ಅನುದಾನ ಕೊಡಿಸಲಿಲ್ಲ. ಆದ್ದರಿಂದ ಮತದಾರರು ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ತಾಲೂಕಿನ ಎಲ್ಲ 35 ಗ್ರಾಪಂಗಳಲ್ಲಿ 317 ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಇದ್ದಾರೆ. 14 ಗ್ರಾಪಂಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಅಧಿ ಕಾರದಲ್ಲಿದ್ದಾರೆ. ನಾನೇನು ಶ್ರೀಮಂತ ಅಲ್ಲ. ನನಗೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿ ಗಳೇ ಆಸ್ತಿ, ಸಂಪತ್ತು ಆಗಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಸುಭಾಷ ರಾಠೊಡ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಗ್ರಾಪಂ, ತಾಪಂ, ಜಿಪಂ ಸದಸ್ಯರಾಗಿ ಮತ್ತು ಜಿಪಂ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ಅನುಭವಿ ರಾಜಕಾರಣಿ ಆಗಿದ್ದಾರೆ. ಇವರಿಗೆ ಮತ ನೀಡಿದರೇ ಪಕ್ಷಕ್ಕೆ ಮುನ್ನುಡಿಯಾಗಲಿದೆ ಎಂದರು.
ಮುಖಂಡ ಮಧುಸೂಧನರೆಡ್ಡಿ ಪಾಟೀಲ ಕಲ್ಲೂರ, ಪುರಸಭೆ ಉಪಾಧ್ಯಕ್ಷ ಶಬ್ಬೀರ ಅಹೆಮದ್, ಅಬ್ದುಲ್ ರವೂಫ, ರವಿರಾಜ ಕೊರವಿ, ಸುದರ್ಶನರೆಡ್ಡಿ ಪಾಟೀಲ, ಬಸವರಾಜ ಮಲಿ, ಗಣಪತರಾವ್, ರೇವಣಸಿದ್ಧ ಪೂಜಾರಿ, ಅಬ್ದುಲ್ ಬಾಸಿತ್, ಜಗನ್ನಾಥ ಇದಲಾಯಿ, ಮಿರಿಯಾಣ ಗ್ರಾಪಂ ಅಧ್ಯಕ್ಷ ಗೋಪಾಲ ಭೋವಿ, ಸುರೇಶ ಬಂಟಾ, ಚಿತ್ರಶೇಖರ ಪಾಟೀಲ ದೇಗಲಮಡಿ, ಶರಣು ಮೋತಕಪಳ್ಳಿ, ಸಂತೋಷ ಗುತ್ತೇದಾರ ಹಾಗೂ ಮಿರಿಯಾಣ ಗ್ರಾಪಂ ಸದಸ್ಯರು ಇದ್ದರು.