ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದೆ. ಈ ಬಾರಿ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾ ಜಿದ್ದಿ ಹೋರಾಟ ನಡೆಯಲಿದೆ ಎಂದು ರಾಜ್ಯದ ರಾಜಕೀಯ ವಲಯದಲ್ಲಿ ಹೇಳಲಾಗಿದೆ.
ತೃಣಮೂಲ ಕಾಂಗ್ರೆಸ್ ನ ಚುನಾವಣಾ ಪ್ರಚಾರ ಸಲಹೆಗಾರ ಪ್ರಶಾಂತ್ ಕಿಶೋರ್ ಅವರು ಮಾತಾಡಿದ್ದು ಎಂದು ಹೇಳಲಾದ ಧ್ವನಿ ಮುದ್ರಿಕೆಯೊಂದು ಹೊರಗೆ ಬಿದ್ದಿದ್ದು, ಅದು ಈಗ ಪಶ್ಚಿಮ ಬಂಗಾಳ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ. ಅದರಲ್ಲಿ ಕಿಶೋರ್, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಲಿದೆ ಎಂದು ಮಾತನಾಡಿದ್ದಾರೆ. ಬಿಜೆಪಿಯ ಪ್ರಾಬಲ್ಯದ ಬಗ್ಗೆ ತೃಣಮೂಲ ಕಾಂಗ್ರೆಸ್ ಗೆ ಈಗ ಅರಿವಾಗಿದೆ ಎಂದು ಬಿಜೆಪಿಯ ಅಮಿತ್ ಮಾಳವಿಯ ಸರಣಿ ಟ್ವೀಟ್ ಮಾಡಿರುವುದಕ್ಕೆ ಸ್ವತಃ ಪ್ರಶಾಂತ್ ಕಿಶೋರ್ ತಿರುಗೇಟು ಕೊಟ್ಟಿದ್ದಾರೆ.
ಓದಿ : ಪಶ್ಚಿಮಬಂಗಾಳ: ಮತಗಟ್ಟೆ ಬಳಿ ಮತದಾರನಿಗೆ ಗುಂಡಿಕ್ಕಿ ಹತ್ಯೆ, ಬಿಜೆಪಿ-ಟಿಎಂಸಿ ಘರ್ಷಣೆ
ಅಮಿತ್ ಮಾಳವಿಯಾ ಅವರ ಎಲ್ಲಾ ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್, ನಮ್ಮ ಕ್ಲಬ್ ಹೌಸ್ ಸಮಾಲೋಚನೆಗಳನ್ನು ಬಿಜೆಪಿ ಇಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುವುದು ಸಂತೋಷದ ವಿಚಾರ. ಅವರು ತಮ್ಮ ನಾಯಕರ ಮಾತಿಗಿಂತ ನಮ್ಮ ಮಾತುಕತೆಗಳ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಾಣುತ್ತಿದೆ. ಮಾತುಕತೆಯಲ್ಲಿ ತಮಗೆ ಬೇಕಾಗುವ ಹಾಗೆ, ಅವರಿಗೆ ಅನುಕೂಲ ಆಗುವ ಭಾಗಗಳನ್ನು ಮಾತ್ರ ಆರಿಸಿ ಬಿಡುಗಡೆ ಮಾಡಿದ್ದಾರೆ. ತಮಗೆ ಬೇಕಾದ ಭಾಗಗಳನ್ನು ಮಾತ್ರ ಬಿಡುಗಡೆ ಮಾಡುವುದಲ್ಲ. ಧೈರ್ಯವಿದ್ದಲ್ಲಿ ಮಾಡುವುದಿದ್ದರೇ, ಪೂರ್ಣವಾಗಿ ಬಿಡುಗಡೆ ಮಾಡಿ ಎಂದು ಅವರು ಸವಾಲು ಹಾಕಿದ್ದಾರೆ.
Related Articles
ಇನ್ನು, ಈ ಕುರಿತಾಗಿ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ಅಮಿತ್ ಮಾಳವಿಯಾ, ತೃಣಮೂಲ ಕಾಂಗ್ರೆಸ್ ನ ಆಂತರಿಕ ಸಮೀಕ್ಷೆಯೂ ಕೂಡ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯುತ್ತದೆ ಎಂದು ಸೂಚಿಸುತ್ತದೆ. ಪಶ್ಚಿಮ ಬಂಗಾಳದ ಎಸ್ ಸಿ ಸಮುದಾಯದ ಮತಗಳು ಕೂಡ ಬಿಜೆಪಿಗೆ ಬರಲಿದೆ. ಮೋದಿ ಚುನಾವಣೆಯಲ್ಲಿ ಜಯಭೇರಿ ಬಾರಿಸುವುವಲ್ಲಿ ಸಂಶಯ ಬೇಕಾಗಿಲ್ಲ. ಆಡಳಿತರೂಢ ತೃಣ ಮೂಲ ಕಾಂಗ್ರೆಸ್ ನ ವಿರುದ್ಧ ಅಲೆಗಳು ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಳೆದ 20 ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ಇಲ್ಲಿ ಮುಸ್ಲಿಂ ಸಮುದಾಯದವರಿಗೆ ಏನು ಮಾಡಿದ್ದಾರೆ ಎನ್ನುವುದು ಇಲ್ಲಿನ ಚುನಾವಣಾ ಫಲಿತಾಂಶ ಹೊರಬಿದ್ದಾಗ ತಿಳಿಯುತ್ತದೆ. ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಗಳ ಮೇಲೆ ಮುಸ್ಲಿಂ ತುಷ್ಟೀಕರಣದ ಆರೋಪ ಕೇಳಿ ಬಂದಿದೆ.
ಎಸ್ ಸಿ ಸಮುದಾಯದ ಮತಗಳು ಬಿಜೆಪಿಗೆ ಲಾಭವಾಗಲಿದೆ ಎಂದು ತೃಣಮೂಲ ಕಾಂಗ್ರಸ್ ನ ಚುನಾವಣಾ ಪ್ರಚಾರದ ಸಲಹೆಗಾರರೇ ಅಭಿಪ್ರಾಯ ಪಟ್ಟಿದ್ದಾರೆ. ಅವರಿಗೆ ತಾವು ಸಾರ್ವಜನಿಕವಾಗಿ ಗುಟ್ಟುಗಳನ್ನು ಬಹಿರಂಗ ಪಡಿಸಬಾರದೆಂದು ಅರಿವಿಲ್ಲ. ಅವರ ಗುಟ್ಟು ಬಹಿರಂಗವಾಗಿದೆ ಎಂದು ಪ್ರಶಾಂತ್ ಕಿಶೋರ್ ಅವರ ಕಾಲೆಳೆದಿದ್ದಾರೆ.
ಓದಿ : ಒಂದೇ ದಿನದಲ್ಲಿ ನೆಗೆಟಿವ್ ವರದಿ ಕಡ್ಡಾಯ ಆದೇಶ ವಾಪಸ್ ಪಡೆದ ಜಿಲ್ಲಾಧಿಕಾರಿ