Advertisement

Show cause Notice: ಶಿಸ್ತು ಸಮಿತಿಯ ಮುಂದೆ ಇಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಜರು

02:53 AM Dec 04, 2024 | Team Udayavani |

ಬೆಂಗಳೂರು: ಪಕ್ಷದಿಂದ ಶೋಕಾಸ್‌ ನೋಟಿಸ್‌ ಪಡೆದ ಅನಂತರವೂ ದಿಲ್ಲಿಯಲ್ಲಿಯೇ ಇರುವ “ಭಿನ್ನ ನಾಯಕ’ಯತ್ನಾಳ್‌ ಬುಧವಾರ ಪಕ್ಷದ ಕೇಂದ್ರೀಯ ಶಿಸ್ತು ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡಲಿದ್ದಾರೆ. ಈ ಮಧ್ಯೆ ಯತ್ನಾಳ್‌ ತಂಡವು ಸಂಸತ್ತಿನ ವಕ್ಫ್ ಜಂಟಿ ಸದನ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್‌ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದೆ.

Advertisement

ಶಾಸಕರಾದ ರಮೇಶ ಜಾರಕಿಹೊಳಿ, ಬಿ.ಪಿ. ಹರೀಶ್‌, ಮಾಜಿ ಸಚಿವರಾದ ಕುಮಾರ್‌ ಬಂಗಾರಪ್ಪ, ಅರವಿಂದ ಲಿಂಬಾವಳಿ ಮೊದಲಾದವರು ಯತ್ನಾಳ್‌ ನೇತೃತ್ವದಲ್ಲಿ ಮಂಗಳವಾರ ಸಭೆ ಸೇರಿ ಸಮಾಲೋಚನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ ಜಾರಕಿಹೊಳಿ, ಬುಧವಾರ ಬೆಳಗ್ಗೆ 11.30ಕ್ಕೆ ಬರುವಂತೆ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್‌ ಕರೆ ಮಾಡಿ ಸೂಚಿಸಿದ್ದಾರೆ. ಯತ್ನಾಳ್‌ ಅವರೊಬ್ಬರೇ ವಿವರಣೆ ನೀಡಲಿದ್ದಾರೆ. ನಾವು ಪಕ್ಷದ ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಯತ್ನಾಳ್‌ ಮೇಲೆ ಕ್ರಮ ಸಾಧ್ಯತೆ ಕ್ಷೀಣ?
ಇದೆಲ್ಲದರ ಮಧ್ಯೆ ರಾಜ್ಯವನ್ನು ಪ್ರತಿನಿಧಿಸುವ ಎನ್‌ಡಿಎ ಸಂಸದರ ನಿಯೋಗ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನಿವಾಸದಲ್ಲಿ ಸಭೆ ಸೇರಿ ವಿಜಯೇಂದ್ರ  ಯತ್ನಾಳ್‌ ಬಣ ರಾಜಕಾರಣದಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಿದೆ. ಈ ತಂಡ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆಗೂ ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದ್ದು, ಯತ್ನಾಳ್‌ ವಿರುದ್ಧ ತತ್‌ಕ್ಷಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಈಗ ಕ್ಷೀಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next