Advertisement

ಚೀನಾ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎನ್ನುವ ಮಾತಿಗೆ ಅಭಿಪ್ರಾಯವೇನು?

04:29 PM Jun 18, 2020 | keerthan |

ಮಣಿಪಾಲ: ಗಡಿಯಲ್ಲಿ ಚೀನಾ ಉದ್ಧಟತನ ಮೆರೆಯುತ್ತಿರುವುದರ ನಡುವೆಯೇ ಭಾರತದಲ್ಲಿ ಚೀನಾ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎನ್ನುವ ಕೂಗಿಗೆ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ನೀಲಕಂಠಿ ಲಿಂಗರಾಜು:ದೇಶ ಸೇವೆ ನಾವು ಮನೆಯಲ್ಲೇ ಕುಳಿತೂ ಮಾಡಬಹುದು.ಈಗ ಆ ಸಮಯ ಬಂದಿದೆ.! ಚೀನಾದ ಆಪ್ ಗಳು, ವಸ್ತುಗಳು ಎಲ್ಲವನ್ನೂ ನಾವು ತಿರಸ್ಕರಿಸೋಣ.!ಏಕೆಂದರೆ ಇವೆಲ್ಲವೂ ಇಲ್ಲದಿದ್ದರೂ ನಾವು ಬದುಕಬಹುದು

ಸದಾಶಿವ್ ಸದಾಶಿವ್: ಇನ್ನೂ ನಾವು ಭಾರತೀಯರು ಪಾಠ ಕಲಿಯದೇ ಇದ್ದರೆ ನಾವು ಪಶ್ಚಾತ್ತಾಪ ಪಡುವುದು ಕಂಡಿತ. ಇದೊಂದು ಅವಕಾಶ ಚೀನಾ ವಸ್ತುಗಳ ಬಹಿಷ್ಕರಿಸಿ ನಮ್ಮದೇ ಆದ ಗುಡಿಕೈಗಾರಿಕೆ ಗಳನ್ನು ಪ್ರೋತ್ಸಾಹಿಸುವುದು. ಮೋದಿ ಸರಕಾರದ ಈ‌ ಒಂದು‌ ಯೋಜನೆ ಕನಿಷ್ಟ 50% ಸರಿಯಾದ ರೀತಿಯಲ್ಲಿ ಬಳಸಿದರೆ ಉಹುಸಲಾಗದ ಬದಲಾವಣೆ ಕಂಡಿತಾ.

ಉಪೇಂದ್ರ ಪ್ರಭು: ಎರಡನೇ ಅಭಿಪ್ರಾಯವಿಲ್ಲ. ಸರಕಾರಕ್ಕೆ ಈ ವಿಷಯದಲ್ಲಿ ಏನು ಮಾಡುವುದಕ್ಕೂ ಆಗುವುದಿಲ್ಲ. ನಾವು ಎಲ್ಲವರೂ ಚೀನಾದ ಸಾಮಗ್ರಿಯನ್ನು ಒಂದೊಂದಾಗಿ ಖರೀದಿ ಮಾಡುವುದನ್ನು ನಿಲ್ಲಿಸಬೇಕು.

ಸತೀಶ್ ಚಾಣಾಕ್ಷ ಪಾರ್ಥಿವಾಸ: 100 % ಜನರೇ ನಿಷೇಧಿಸ ಬೇಕು ಕೇವಲ ಚೀನಾ ಮಾತ್ರ ಅಲ್ಲ . ಎಲ್ಲಾ ವಿದೇಶಿ ವಸ್ತುಗಳ ವ್ಯಾಮೋಹ ಬಿಟ್ಟು , ಸ್ವದೇಶಿ ವಸ್ತುಗಳ ಬಳಸಿದರೆ ಮಾತ್ರ ನಾವು ಭಾರತೀಯರು ಶ್ರೀಮಂತರಾಗಲು ಸಾಧ್ಯ . ನಮ್ಮ ಬೃಹತ್ ಮಾರುಕಟ್ಟೆ ಆಳಲು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಸ್ವದೇಶಿ ಮಂತ್ರ ನಮ್ಮ ದಾಗಲೇ ಬೇಕು.

Advertisement

ಜನಾರ್ಧನ್ ಗಜ: ದೊಡ್ಡ ದೊಡ್ಡ ಬಿಜಿನೆಸ್ ಮ್ಯಾನ್ ಅವರ ಜೊತೆ ಇರುವ ರಾಜಕಾರಣಿಗಳು ಇವರೆಲ್ಲರ ಸಹಾಯ ವಿಲ್ಲದಿದ್ದರೆ ಬೇರೆ ದೇಶದ ವಸ್ತುಗಳು ನಮ್ಮ ದೇಶದಲ್ಲಿ ಏಕೆ ಮಾರಾಟವಾಗುತ್ತದೆ ಇದನ್ನು ಮೊದಲು ತಿಳಿದುಕೊಳ್ಳಿ

ಸಾಗರ್ ಹರೀಶ್: ಕಡಿಮೆ ಬೆಲೆಗೆ ಸಿಗುವ ವಸ್ತುವನ್ನು ಯಾಕೆ ಕೊಳ್ಳಬಾರದು? ಕೆಲ ವರ್ಷಗಳ ಹಿಂದೆ ನೋಕಿಯಾ ಫೋನ್ 5 ಸಾವಿರಕ್ಕೆ ಮಾರಾಟ ಮಾಡಿದ್ದರು ಅದೇ ಚೀನಾ ಫೋನ್ ಬಂದ ಮೇಲೆ ಎಲ್ಲರು ಸ್ಮಾರ್ಟ್ ಫೋನ್ ತೆಗೆದು ಕೊಳ್ಳುವ ಹಾಗೇ ಆಯಿತು. ನಮ್ಮ ಸರ್ಕಾರಗಳು ಚೀನಾ ಬೆಲೆಗೆ ಎಲ್ಲಾ ದೇಶೀಯ ಉತ್ಪನ್ನಗಳು ಸಿಗುವ ಹಾಗೇ ಮಾಡಲಿ. ಎಲ್ಲರು ದೇಶೀಯ ವಸ್ತುಗಳನ್ನು ಬಳಸುತ್ತಾರೆ.

ಮಹಾದೇಶ್ವರ ದೆಪಾಪುರ: ನಿಷೇಧಿಸುವುದು ಸರಿ. ಕಂಪನಿ ಗಳು ಡೀಲರ್ ಗೆ  ಚೈನಾ ವಸ್ತುಗಳನ್ನು ಕೊಡುವುದನ್ನು ನಿಲ್ಲಿಸಿ. ಸ್ವತಃ ಅವರೇ ಉತ್ಪಾದಿಸಿ ಕೊಡಿ. ಹಾಗೂ ಉತ್ಪಾದನೆಗೆ ಸಹಕರಿಸಿ.. ಉತ್ತೇಜಿಸಿ. ಲೋಕಲ್ ಇನ್ವೆಸ್ಟ್ಮೆಂಟ್ ಗೆ ಉತ್ತೇಜಿಸಿ. ಕೊಳ್ಳುವ ಗ್ರಾಹಕರಲ್ಲಿ ಇಂಡಿಯನ್ ಪ್ರೋಡಕ್ ಗಳ ಬಗ್ಗೆ ಗೌರವ ನಂಬಿಕೆ ಬರುವ ಹಾಗೆ ಮಾಡಿ ನಂಬಿಕೆ ಉಳಿಸಿಕೊಂಡು. ಚೈನಾ ವಸ್ತು ಗಳನ್ನೂ ಸಂಪೂರ್ಣ ನಿಲ್ಲಿಸಬಹುದು.

ವಸಂತ್ ಕುಮಾರ್: ಪಾಠ ಕಲಿಯಬೇಕಿರುವುದು ಆಳುತ್ತೀರುವ ಸರ್ಕಾರ ಚೀನಾ ವಸ್ತುಗಳ ಆಮದು ನಿಷೇಧ ಮಾಡಿ. ಮಾರಾಟ ‌ನಿಷೇಧ ಮಾಡಿ. ಬರಿ ಜನರಿಗೆ ಭಾವನೆ ಕೆದಕಿ ರಾಜಕೀಯ ಮಾಡುವ ಗುಣ ಬಿಟ್ಟರೆ ಒಳ್ಳೆಯದು.

ರಮೇಶ್ ಉದ್ಯಾವರ್: ಒಮ್ಮೆಲೇ ನಿರ್ಧಾರ ಅಸಾಧ್ಯ. ಇದು ವಾಜಪೇಯಿ ಸರ್ಕಾರದ ಸಮಯದಲ್ಲಿ ತೆಗೆದುಕೊಂಡ ನಿರ್ಧಾರ. ಮುಂದೆ ಕೆಲವೊಂದು ಮುಂದಾಲೋಚನೆಯ ಮೂಲಕ ಅಳತೆಗೆ ತರಬಹುದು. ಅಷ್ಟೆ.

Advertisement

Udayavani is now on Telegram. Click here to join our channel and stay updated with the latest news.

Next