Advertisement

ಸಮಸ್ಯೆಗಳ ನಡುವೆ ಪದವಿ ಚರ್ಚೆ ಸಲ್ಲ; ಮೋದಿ ಪರ ಬ್ಯಾಟಿಂಗ್‌ ಮಾಡಿದ Sharad Pawar

07:20 PM Apr 10, 2023 | Team Udayavani |

ಮುಂಬೈ: ಇತ್ತೀಚೆಗಷ್ಟೇ ಅದಾನಿ ಪರ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಮಿತ್ರ ಪಕ್ಷ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಇದೀಗ ಡಿಗ್ರಿ ವಿಚಾರವಾಗಿ ಮೋದಿ ಪರ ಬ್ಯಾಟಿಂಗ್‌ ಮಾಡಿದ್ದಾರೆ.

Advertisement

ದೇಶದಲ್ಲಿ ಹಲವು ಸಮಸ್ಯೆಗಳಿದ್ದಾಗಲೂ ಮತ್ತೊಬ್ಬರ ಪದವಿ ವಿಚಾರ ರಾಜಕೀಯ ಚರ್ಚೆಯ ಭಾಗವಾಗುತ್ತದೆ ಎಂದು ಆಪ್‌ ಪಕ್ಷಕ್ಕೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ದೆಹಲಿ ಸಿಎಂ ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ದಾಖಲಾತಿ ಕುರಿತು ವಿಧಾನಸಭೆಯಲ್ಲಿ ಮತ್ತೆ ಪ್ರಸ್ತಾಪಿಸುತ್ತಿದ್ದು, ಇದೇ ವಿಚಾರವಾಗಿ ವಿಪಕ್ಷಗಳು ಕೂಡ ಬಿಜೆಪಿ ವಿರುದ್ಧ ಮುಗಿಬಿದ್ದಿವೆ. ಈ ನಡುವೆ, ಪ್ರತಿಕ್ರಿಯಿಸಿರುವ ಪವಾರ್‌, ದೇಶದಲ್ಲಿ ನಿರುದ್ಯೋಗ, ಕಾನೂನು ಸುವ್ಯವಸ್ಥೆ ಹಾಗೂ ಹಣದುಬ್ಬರದ ಸಮಸ್ಯೆಗಳಿದ್ದಾಗಲೂ ಈ ಪದವಿ ವಿಚಾರ ಚರ್ಚೆಯಾಗುತ್ತಿರುವುದು ಸರಿಯಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next