Advertisement
ಆದರೆ ನಾನು ಈ ಹಳ್ಳಿಯ ವಾತಾವರಣದಲ್ಲೇ ಬೆಳೆದವಳು. ಚಾಪೆ ಹಾಸಿ ಮಲಗುತ್ತಿದ್ದ ನಮಗೆ, ಕಿಟಕಿಯ ಸಂದಿನಲ್ಲಿ ನುಸುಳಿಸುತ್ತಿದ್ದ ಬೆಳಕೇ ಗಡಿಯಾರ! ಅಡುಗೆ ಮನೆಯಿಂದ ಅಮ್ಮನ ಗಡಿಬಿಡಿಯಲ್ಲಿ ಕೇಳ್ಳೋ ಪಾತ್ರಗಳ ಸದ್ದು, ಅಪ್ಪ ಗುನುಗುತ್ತಿದ್ದ ಯಕ್ಷಗಾನ ಹಾಡುಗಳು… ಎಲ್ಲದರ ಮಧ್ಯೆ, ಅನ್ನ – ಕಾಳುಗಳನ್ನು ತಿನ್ನಲು ಬರುವ ಕಾಗೆಗಳು, ಅವುಗಳು ತಮ್ಮ ಬಳಗವನ್ನು ಕರೆಯುವ ವೈಖರಿ. ಇಷ್ಟೇ ಸಾಕಾಗ್ತಿದ್ದವು ಮುಂಜಾನೆಯ ಸಮಯವನ್ನು ನಿರ್ಧರಿಸಲು.
Related Articles
ಬಹುಶಃ ಚೀನಿಯರ ಜೋತಿಷ್ಯಶಾಸ್ತ್ರಕ್ಕೂ ಕಾಗೆಗಳಿಗೂ ಆಗಿ ಬರೋದಿಲ್ಲವೋ ಏನೋ ಎಂದು ತಿಳಿದಿ¨ªೆವು. ನಾವು ಯೋಚನೆ ಮಾಡಿದ್ದೇ ಬೇರೆ, ಸತ್ಯಾಂಶವೇ ಬೇರೆ. ಇಲ್ಲಿನ ಜನತೆಯ ಪ್ರಕಾರ, ಕಾಗೆಗಳದ್ದು ಒರಟು ಸ್ವರ, ಅಶಿಸ್ತು, ಗಲೀಜು ಮಾಡುವ ಬುದ್ಧಿ. ಅದಲ್ಲದೆ, ಇಲ್ಲಿನ ಕಾಗೆಗಳು ಮನುಷ್ಯರ ಮೇಲೂ ದಾಳಿ ಮಾಡುವ ಸಾಧ್ಯತೆ ಇದೆಯಂತೆೆ. ಈ ಹಿನ್ನಲೆಯಲ್ಲಿ ಕಾಗೆಗಳ ನಿರ್ನಾಮಕ್ಕೆ ತಂಡಗಳೇ ರಚನೆಯಾಗಿವೆ ಎಂದರೆ ನಂಬುತ್ತೀರಾ?
Advertisement
ಇದಕ್ಕೆಂದೇ ಸಮವಸ್ತ್ರ ಧರಿಸಿ ಕಾಲಲ್ಲಿ ಬೂಟ್, ಹೆಗಲಲ್ಲಿ ಗನ್ ಏರಿಸಿಕೊಂಡು ಸಿದ್ಧರಾದವರಿದ್ದಾರೆ. ಕಾಗೆಗಳನ್ನು ನಿರಂತರವಾಗಿ ಕೊಲ್ಲುವುದನ್ನು ಕಂಡರೆ ನೀವಾದರೂ ಕೇಳಿಯೇ ಕೇಳುತ್ತೀರಿ-ಹೀಗೂ ಉಂಟೇ ! ನಮ್ಮ ಊರಿನಲ್ಲಿ ಮಂಗಗಳ ಹಾವಳಿ ತಪ್ಪಿಸಲು ಮಾಡುವ ಕಾರ್ಯಾಚರಣೆಯ ಹಾಗೆ. ಕ್ರೋ ಶೂಟಿಂಗ್ ಇನ್ ಪ್ರೋಗ್ರೆಸ್, ಪ್ಲೀಸ್ ಕೀಪ್ ಅವೇ ಅನ್ನೋ ಬೋರ್ಡ್‌ಗಳು ಕೆಲವೊಮ್ಮೆ ಕಾಣಸಿಗುತ್ತವೆ. ವಿಶೇಷವೆಂದರೆ, ಈ ಕಾಗೆಗಳಿಗೆ ಗುಂಡಿನ ಶಬ್ದಗಳು ಚಿರಪರಿಚಿತ. ಹಾಗಾಗಿ, ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ತಪ್ಪಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮುಂದುವರಿಸುತ್ತವೆ.ನಮ್ಮಲ್ಲಿ ಕಾಗೆಗಳನ್ನು ನಾವು ಪೂಜಿಸುವುದಿಲ್ಲವಾದರೂ ಬದುಕುವುದಕ್ಕೆ ಬಿಡುತ್ತೇವೆ. ಆದರೆ, ಸಿಂಗಾಪುರದವರ ಲೆಕ್ಕಾಚಾರವೇ ಬೇರೆ. ಪ್ರವಾಸಿ ಸ್ಥಳಗಳಲ್ಲಿ ಭಯೋತ್ಪಾದಕ ದಾಳಿ ನಡೆದ ಹಾಗೇ ಝಡ್+ ಭದ್ರತೆಯಲ್ಲಿ ಕಾಗೆಗಳ ಮರ್ಡರ್ ನಡೆಸಲಾಗುತ್ತದೆ. ಬಡಪಾಯಿ ಕಾಗೆ ಅಂತ ನನ್ನಲ್ಲಿ ನಾನೇ ಉದ್ಗರಿಸುತ್ತೇನೆ ! – ಶ್ರೀವಿದ್ಯಾ, ಸಿಂಗಾಪುರ