Advertisement

ಆರೋಗ್ಯ ಕೇಂದ್ರದಲ್ಲಿ ಶಾರ್ಟ್‌ ಸರ್ಕ್ಯೂಟ್‌:ರಾತ್ರಿ ಬಾಣಂತಿಯರ ಪರದಾಟ

09:19 AM Jun 03, 2018 | |

ಬಳ್ಳಾರಿ: ಇಲ್ಲಿನ ಕೊಟ್ಟೂರಿನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಶನಿವಾರ ರಾತ್ರಿ ಹೆರಿಗೆ ಮತ್ತು ಮಕ್ಕಳ ವಿಭಾಗದ  ವಾರ್ಡ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿದ್ದು, ಅದೃಷ್ಟವಷಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ. 

Advertisement

ಫ್ಯಾನ್‌ಗಳಲ್ಲಿ ಬೆಂಕಿ ಯ ಕಿಡಿ ಕಾಣಿಸಿಕೊಳ್ಳುತ್ತಿದ್ದಂತೆ ಆತಂಕಗೊಂಡ ಬಾಣಂತಿಯರು , ಹಸುಗೂಸುಗಳನ್ನು ಹಿಡಿದು ಪೋಷಕರು ಹೊರಗೆ ಓಡಿ ಬಂದಿದ್ದಾರೆ. 

ರಾತ್ರಿಯೀಡಿ ಆಸ್ಪತ್ರೆಯ ಆವರಣಗಳಲ್ಲೇ ಬಾಣಂತಿಯರು ಹಸುಗೂಸುಗಳೊಂದಿಗೆ ನಿದ್ದೆಯಿಲ್ಲದೆ ಪರದಾಡುವ ಸ್ಥಿತಿ ಬಂದೊದಗಿತು. 

ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ದ ಮಹಿಳೆಯರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next