Advertisement

ಅಪಾಯಿಂಟ್‌ಮೆಂಟ್‌ ಇದ್ದರಷ್ಟೇ ಶಾಪಿಂಗ್‌

10:01 AM May 05, 2020 | mahesh |

ಮುಂಬೈ: ಲಾಕ್‌ಡೌನ್‌ ಬಳಿಕ ನಿಮ್ಮ ಇಷ್ಟದ ಬ್ರ್ಯಾಂಡ್‌ನ‌ ಬಟ್ಟೆ ಖರೀದಿಸಲು, ಅಂಗಡಿಗೆ ಹೊರಟಿದ್ದೀರಾ? ನಿಮ್ಮ ಬಳಿ ಅಪಾಯಿಂಟ್‌ಮೆಂಟ್‌ ಇದ್ದರಷ್ಟೇ, ನಿಮಗೆ ಪ್ರವೇಶ. ಮಾಸ್ಕ್ ಧರಿಸಿ ಬಂದರಷ್ಟೇ ಒಳಗೆ ಕಾಲಿಡಲು ಅವಕಾಶ. ಹೌದು, ಲಾಕ್‌ಡೌನ್‌ಗೆ ತೆರಬಿದ್ದ ಬಳಿಕ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ವಸ್ತ್ರೋದ್ಯಮ ಅಗತ್ಯ ನಿಯಮಾವಳಿ ರೂಪಿಸುತ್ತಿದೆ. “ಗ್ರಾಹಕರ ಸುರಕ್ಷತೆ ಕಾಪಾಡುವುದೇ ದೊಡ್ಡ ಸವಾಲಾಗಿದೆ. ಸಾಮಾಜಿಕ ಅಂತರಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಶಾಪಿಂಗ್‌ಗೂ ನಿಗದಿತ ಸಮಯ ಅಳವಡಿಸುವ ಬಗ್ಗೆ ಯೋಜಿಸುತ್ತಿದ್ದೇವೆ’ ಎಂದು ಫ್ಯಾಬ್‌ ಇಂಡಿಯಾ ಅಧ್ಯಕ್ಷ ಅಜಯ್‌ ಕಪೂರ್‌ ಹೇಳಿದ್ದಾರೆ. ಪ್ರಸ್ತುತ ಫ್ಯಾಬ್‌ ಇಂಡಿಯಾ ತನ್ನ 327 ಅಂಗಡಿಗಳಲ್ಲಿ, 10 ಮಾತ್ರ ತೆರೆದಿದೆ.

Advertisement

ಎಲ್ಲವೂ ಶುದ್ಧ ಶುದ್ಧ: ಇನ್ನೊಂದೆಡೆ ಬ್ಲ್ಯಾಕ್‌ಬೆರ್ರಿ ಜವಳಿ ಸಂಸ್ಥೆ, ಟ್ರಯಲ್‌ ರೂಮ್‌ನಲ್ಲಿ ಬಾಗಿಲಿನ ಹಿಡಿಕೆಯಿಂದ ಹಿಡಿದು, ಕ್ಯಾಷ್‌ ಡೆಸ್ಕ್ವರೆಗೆ ನಿರಂತರವಾಗಿ ಸ್ಯಾನಿಟೈಸ್‌ ಮಾಡಲು ನಿರ್ಧರಿಸಿದೆ. ಅಲ್ಲದೆ, ಗ್ರಾಹಕ ಟ್ರಯಲ್‌ ರೂಮ್‌ನಲ್ಲಿ ಧರಿಸಿ, ನಿರಾಕರಿಸಿ ಕಳಚಿಟ್ಟ ಬಟ್ಟೆಯನ್ನು ಕೆಲವು ದಿನಗಳವರೆಗೆ ಮಾರಾಟಕ್ಕೆ ಇಡದೇ ಇರಲು ತೀರ್ಮಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next