ಸೂಚಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಕಾರಣಕ್ಕೆ ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಲ್ಯಾನ್ಸ್ ನಾಯಕ್ ಯಜ್ಞ ಪ್ರತಾಪ್ ಸಿಂಗ್ ಎಂಬಾತ ಗೋಳು ತೋಡಿಕೊಂಡಿದ್ದಾನೆ.
Advertisement
ಯೋಧರು ಎದುರಿಸುತ್ತಿರುವ ತೊಂದರೆ ಬಗ್ಗೆ ಪ್ರಧಾನಿ, ರಕ್ಷಣಾ ಸಚಿವರು, ರಾಷ್ಟ್ರಪತಿ, ಸುಪ್ರೀಂಕೋರ್ಟ್‌ಗೆ ಕಳೆದ ವರ್ಷ ಪತ್ರ ಬರೆದಿದ್ದೆ. ಈ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ಕಾರ್ಯಾಲಯದಿಂದ ಸೂಚನೆಯೂ ಬಂದಿತ್ತು. ಆದರೆ ತನಿಖೆ ಮಾಡುವ ಬದ ಲಿಗೆ ಮೇಲಧಿಕಾರಿಗಳು ನನಗೆ ಕಿರುಕುಳ ಆರಂಭಿಸಿದ್ದಾರೆ. ನಾನು ಆತ್ಮಹತ್ಯೆ ಮಾಡಿ ಕೊಳ್ಳುವ ಮಟ್ಟಕ್ಕೆ ಹಿಂಸೆ ನೀಡಿದ್ದಾರೆ. ಆದರೆ ನಾನು ಸಾವಿಗೆ ಶರಣಾಗುವುದಿಲ್ಲ. ಈಗಾಗಲೇ ನನ್ನ ವಿರುದ್ಧ ವಿಚಾರಣೆ ಯನ್ನೂ ಶುರು ಮಾಡಿದ್ದು, ನಾನು ಕೋರ್ಟ್ ಮಾರ್ಷಲ್‌ಗೆ ಒಳಗಾಗುವ ಸಂಭವವಿದೆ ಎಂದು ಡೆಹ್ರಾಡೂನ್‌ನಲ್ಲಿರುವ 42ನೇ ಇನ್‌ಫೆಂಟ್ರಿ ಬ್ರಿಗೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಅಳಲು ತೋಡಿಕೊಂಡಿದ್ದಾನೆ.