Advertisement

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

07:47 AM Nov 17, 2024 | Team Udayavani |

ತಿರುವನಂತಪುರ: ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳು ದೇವರ ದರ್ಶನಕ್ಕೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಾಡಿಕೊಳ್ಳಬೇಕಿದ್ದು, ದಿನಕ್ಕೆ 70,000 ಬುಕ್ಕಿಂಗ್‌ಗೆ ಮಾತ್ರ ಕೇರಳ ಸರಕಾರ ಅವಕಾಶ ನೀಡಿತ್ತು. ಇದೀಗ 10 ಸಾವಿರ ಹೆಚ್ಚುವರಿ ಬುಕ್ಕಿಂಗ್‌ಗೆ ಅವಕಾಶ ನೀಡಲು ನಿರ್ಧರಿಸಿದೆ.

Advertisement

ಮಂಡಲಂ-ಮಕರವಿಳಕ್ಕು ಯಾತ್ರಾ ಹಿನ್ನೆಲೆಯಲ್ಲಿ ಭಕ್ತರ ಆಗಮನ ಹೆಚ್ಚಿರುವ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ರಾಜ್ಯ ದೇವಸ್ವಂ ಸಚಿವ ವಿ.ಎನ್‌. ವಾಸವನ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಈಗಾಗಲೇ ವರ್ಚುವಲ್ ಕ್ಯೂ ಬುಕ್ಕಿಂಗ್‌ಗೆ ದಿನಕ್ಕೆ 70,000 ಯಾತ್ರಾರ್ಥಿಗಳಿಗೆ ಮಿತಿಯನ್ನು ನಿಗದಿಪಡಿಸಿದೆ. ಹೆಚ್ಚುವರಿಯಾಗಿ, ಸ್ಪಾಟ್ ಬುಕಿಂಗ್ ವ್ಯವಸ್ಥೆಯ ಮೂಲಕ 10,000 ಭಕ್ತರಿಗೆ ದರ್ಶನಕ್ಕಾಗಿ ಸ್ಲಾಟ್‌ಗಳನ್ನು ಕಾಯ್ದಿರಿಸಲು ಅವಕಾಶ ನೀಡಲಾಗುತ್ತದೆ ಎಂದರು.

ಸ್ಪಾಟ್ ಬುಕಿಂಗ್ ವ್ಯವಸ್ಥೆಯಡಿ, ಯಾತ್ರಿಕರು ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಸ್ಥಾಪಿಸಲಾದ ಕೌಂಟರ್‌ಗಳಲ್ಲಿ ದರ್ಶನ ಸ್ಲಾಟ್‌ಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next