Advertisement

Odisha ಅಸೆಂಬ್ಲಿ: ಸ್ಪೀಕರ್‌ ಪೀಠದ ಮೇಲೆ ಹತ್ತಿ ವಿಪಕ್ಷ ನಾಯಕರ ಗದ್ದಲ

01:07 AM Aug 24, 2024 | Team Udayavani |

ಭುವನೇಶ್ವರ: ಗಂಜಮ್‌ ಕಳ್ಳಭಟ್ಟಿ ಸಾರಾಯಿ ದುರಂತಕ್ಕೆ ಸಂಬಂಧಿಸಿದಂತೆ ಒಡಿಶಾ ಅಧಿವೇಶನವು ಶುಕ್ರವಾರವು ಭಾರೀ ಗದ್ದಲ್ಲಕ್ಕೆ ಕಾರಣವಾಯಿತು. ಅಧಿ ವೇಶನದ ಕಲಾಪ ಆರಂಭವಾಗುತ್ತಿದ್ದಂತೆ, ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜು ಜನತಾ ದಳ(ಬಿಜೆಡಿ) ಹಾಗೂ ಕಾಂಗ್ರೆಸ್‌ ಶಾಸಕರು ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಲಾರಂಭಿಸಿದರು.

Advertisement

ಕೆಲವು ಸದಸ್ಯರು ಸ್ಪೀಕರ್‌ ಅವರ ಪೀಠವನ್ನು ಏರಲು ಪ್ರಯತ್ನಿಸಿದರು. ತೀವ್ರ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಬೇಕಾದ ಪರಿಸ್ಥಿತಿ ಎದುರಾಯಿತು. ಗಂಜಮ್‌ ಜಿಲ್ಲೆಯಲ್ಲಿ ಸಂಭವಿಸಿದ ಕಳ್ಳಭಟ್ಟಿ ಸಾರಾಯಿ ದುರಂತದಲ್ಲಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಈ ಪ್ರಕರಣವು ಒಡಿಶಾ ವಿಧಾನಸಭೆಯಲ್ಲಿ ಶುಕ್ರವಾರ ಭಾರೀ ಗದ್ದಲಕ್ಕೆ ಕಾರಣವಾಯಿತು.

ಒಡಿಶಾದಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಸರಕಾರ‌ ಪ್ರಕಟ
ಭಾರತೀಯ ಭೂಸರ್ವೇಕ್ಷಣ ಇಲಾಖೆ (GSI) ಒಡಿಶಾದ ದಿಯೋಗಢ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪಗಳನ್ನು ಪತ್ತೆಹಚ್ಚಿದೆ. ಮೊದಲ ಬಾರಿಗೆ ಒಡಿಶಾ ಸರಕಾರ‌ ಚಿನ್ನದ ಗಣಿಯ ಹರಾಜು ಪ್ರಕ್ರಿಯೆ ನಡೆಸಲಿದೆ ಎಂದು ಒಡಿಶಾದ ಸಚಿವ ಬಿಭೂತ ಜೆನಾ ಹೇಳಿದ್ದಾರೆ. ತಾಮ್ರದ ಅದಿರಿನ ಬಗ್ಗೆ ಶೋಧನೆ ನಡೆಸುವ ವೇಳೆ ಚಿನ್ನದ ನಿಕ್ಷೇಪ ದೊರೆತಿದೆ. ಈ ಹಿಂದೆ ಕಿಯೋಜಾರ್‌ ಜಿಲ್ಲೆಯ ಗೊಪೌರ್‌, ಗಾಜಿಪುರ್‌ನಲ್ಲೂ ಚಿನ್ನದ ನಿಕ್ಷೇಪ ದೊರೆತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next