Advertisement

ವಿದ್ಯುತ್‌ ಬಳಕೆದಾರರಿಗೆ ಮೆಸ್ಕಾಂನಿಂದ ಶಾಕ್‌

10:43 PM May 01, 2020 | Sriram |

ವಿಶೇಷ ವರದಿ-ಮುಂಡಾಜೆ: ಮೆಸ್ಕಾಂನಿಂದ ಎಪ್ರಿಲ್‌ ತಿಂಗಳ ಬಿಲ್‌ ಮೊತ್ತ ನೋಡಿ ವಿದ್ಯುತ್‌ ಬಳಕೆದಾರರು ಶಾಕ್‌ಗೆ ಒಳ ಗಾಗಿದ್ದಾರೆ. ಮೊಬೈಲ್‌ ಸಂದೇಶ ಮೂಲಕ ಬಂದಿರುವ ಬಿಲ್‌ ಮೊತ್ತ ಹಿಂದಿನ ಬಿಲ್‌ಗಿಂತ ದುಪ್ಪಟ್ಟು ಜಾಸ್ತಿ ಆಗಿದೆ.

Advertisement

ಮಾಮೂಲು 500 ರೂ. ಬಿಲ್‌ ಬರುತ್ತಿದ್ದವರಿಗೆ 1,000 ರೂ.ಗಿಂತ ಹೆಚ್ಚು ಮೊತ್ತದ ಬಿಲ್‌ ಬಂದಿದೆ. ಖಾಸಗಿ ಕಂಪೆನಿಯವರು ಗುತ್ತಿಗೆ ನೌಕರ ರಿಂದ ರೀಡಿಂಗ್‌ ಮಾಡಿಸಿ ಬಿಲ್‌ ಮಾಡು ತ್ತಿದ್ದುದು ಈ ಹಿಂದಿನ ಕ್ರಮ. ಆದರೆ ಈ ಬಾರಿ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಮೀಟರ್‌ ರೀಡಿಂಗ್‌ ಮಾಡದೇ ಖಾಸಗಿ ಕಂಪೆನಿಗಳ ಮೂಲಕ ಸರಾಸರಿ ಬಿಲ್‌ ತಯಾರಿಸಿ ಬಳಕೆದಾರರ ಮೊಬೈಲ್‌ಗ‌ಳಿಗೆ ಬಿಲ್‌ ಮೊತ್ತ ಮತ್ತು ಪಾವತಿಗೆ ಕಡೆ ದಿನಾಂಕದ ಸಂದೇಶ ಕಳುಹಿಸಲಾಗಿದೆ.

ಡೋರ್‌ ಲಾಕ್‌ ಸಿಸ್ಟಂ
ಕೆಲವು ಕಡೆ ಮೀಟರ್‌ಗಳು ಮನೆಯ ಒಳಗೆ ಇದ್ದು, ಮೀಟರ್‌ ರೀಡರ್‌ ಮೀಟರ್‌ ರೀಡಿಂಗ್‌ಗೆ ಬರುವಾಗ ಮನೆಗೆ ಬೀಗ ಇದ್ದರೆ, ಅಂತಹ ಕಡೆಗಳಲ್ಲಿ ಡೋರ್‌ ಲಾಕ್‌ ಸಿಸ್ಟಂ ಮೂಲಕ ಬಿಲ್‌ ಮಾಡಲಾಗುತ್ತದೆ. ಅಂದರೆ ಕೊನೆಯ ಸಲ ರೀಡಿಂಗ್‌ ಮಾಡುವಾಗ ಬಂದಿರುವ ಮೊತ್ತಕ್ಕೇ ಬಿಲ್‌ ಮಾಡುವುದು. ಈ ಬಾರಿ ಲಾಕ್‌ಡೌನ್‌ ಇದ್ದರೂ ಡೋರ್‌ಲಾಕ್‌ ಮಾಡದವರಿಗೂ ಇದೇ ವ್ಯವಸ್ಥೆ ಪ್ರಕಾರ ಬಿಲ್‌ ಮಾಡಲಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಸರಾಸರಿ ಬಿಲ್‌ ಎಂದು ಕರೆಯಲಾಗುತ್ತದೆ.

ಆನ್‌ಲೈನ್‌
ಪಾವತಿಗೂ ಸಮಸ್ಯೆ
ಪೇಟಿಯಂ ಮತ್ತು ಮೆಸ್ಕಾಂ ಟಿ.ಆರ್‌.ಎಂ. ಮೂಲಕ ಬಿಲ್‌ ಪಾವತಿ ಮಾಡುತ್ತಿದ್ದವರಿಗೆ ಈಗ ಬಂದಿರುವ ಬಿಲ್‌ನ ಮೊತ್ತ ತಲೆಬಿಸಿಗೆ ಕಾರಣವಾಗಿದೆ. ಕಳೆದ ಬಾರಿ ಬಳಕೆದಾರರು ಪಾವತಿಸಿದ ಬಿಲ್‌ ಮೆಸ್ಕಾಂ ಖಾತೆಗೆ ಜಮೆಯಾಗದ ಕಾರಣ ಆ ಮೊತ್ತವನ್ನು ಸೇರಿಸಿ ಬಿಲ್‌ ಬಂದಿದೆ. ಆದರೆ ಆನ್‌ಲೈನ್‌ ಮೂಲಕ ಪಾವತಿಸುವ ಬಿಲ್‌, ಮೊತ್ತ ಇರುವಷ್ಟು ಅಥವಾ ಅದಕ್ಕಿಂತ ಹೆಚ್ಚು ಮೊತ್ತ ಮಾತ್ರ ಪಾವತಿಸಲು ಸಾಧ್ಯವಾಗುತ್ತದೆ. ಬಂದಿರುವ ಬಿಲ್‌ ಮೊತ್ತಕ್ಕಿಂತ ಕಡಿಮೆ ಪಾವತಿಸಲು ಸಾಧ್ಯವಾಗುವುದಿಲ್ಲ.ಇದರಿಂದ ಬಳಕೆದಾರರು ಹಿಂದಿನ ಬಿಲ್‌ ಕಟ್ಟಿದ್ದರೂ ದ್ವಿಗುಣ ಮೊತ್ತ ಪಾವತಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ಕಳೆದ ತಿಂಗಳ ಬಿಲ್‌ ಪಾವತಿ ಗೊಂದಲ
ಕಳೆದ ಮಾರ್ಚ್‌ ತಿಂಗಳಲ್ಲಿ ಬಳಕೆದಾರರು ಪಾವತಿಸಿದ ಬಿಲ್‌ಗ‌ಳು ಮೆಸ್ಕಾಂ ಖಾತೆಗೆ ಜಮೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೆಸ್ಕಾಂ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣದಿಂದ ಬಳಕೆದಾರರು ಪಾವತಿಸಿದ ಬಿಲ್‌ ಮೊತ್ತ ಮೆಸ್ಕಾಂ ಖಾತೆಗೆ ಜಮೆಯಾಗದೆ ಇರುವುದರಿಂದ ಕಳೆದ ತಿಂಗಳ ಬಿಲ್‌ ಕೂಡಾ ಈಗ ಬಂದಿರುವ ಬಿಲ್‌ನಲ್ಲಿ ಸೇರ್ಪಡೆಗೊಂಡಿದೆ ಎಂದು ಹೇಳಲಾಗುತ್ತಿದೆ.

Advertisement

 ಹೆಚ್ಚುವರಿ ಪಾವತಿ ಮುಂದಿನ
ಬಿಲ್‌ನಲ್ಲಿ ಹೊಂದಾಣಿಕೆ
ಮೆಸ್ಕಾಂನ ವಿಭಾಗ ಕಚೇರಿಗಳಿಗೆ ಹೋಗಿ ಈ ತಿಂಗಳ ರೀಡಿಂಗ್‌ ಅನ್ನು ಹೇಳಿದರೆ, ಅಷ್ಟೇ ಯುನಿಟ್‌ಗಳ ಬಿಲ್‌ ಮೊತ್ತವನ್ನು ಪಾವತಿಸುವ ವ್ಯವಸ್ಥೆ ಮಾಡಿ ಕೊಡಲಾಗುವುದು. ಸರಾಸರಿ ಬಿಲ್‌ ಪ್ರಕಾರ ಬಂದಿರುವ ಹೆಚ್ಚಿನ ಮೊತ್ತವನ್ನು ಪಾವತಿಸಿದರೂ ಅದನ್ನು ಮುಂದಿನ ಬಿಲ್‌ಗ‌ಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.
 - ಶಿವಶಂಕರ್‌ಕಾರ್ಯನಿರ್ವಾಹಕ ಅಭಿಯಂತ, ಮೆಸ್ಕಾಂ, ಬೆಳ್ತಂಗಡಿ

ಮೊಬೈಲ್‌ಗೆ ಸಂದೇಶ
ಮಾರ್ಚ್‌ನಲ್ಲಿ 450 ರೂ.ಬಿಲ್‌ ಬಂದಿದ್ದು, ಪಾವತಿಸಲಾಗಿದೆ. ಆದರೆ ಎ. 30ರಂದು 1,100 ರೂ. ಬಿಲ್‌ ಕಟ್ಟಲು ಮೊಬೈಲ್‌ಗೆ ಸಂದೇಶ ಬಂದಿದ್ದು, ಮೇ 2 ಪಾವತಿಗೆ ಕಡೆ ದಿನಾಂಕವಾಗಿದೆ.
– ಕಿರಣ್‌ ಮರಾಠೆ, ವಿದ್ಯುತ್‌ ಬಳಕೆದಾರರು, ಮುಂಡಾಜೆ

Advertisement

Udayavani is now on Telegram. Click here to join our channel and stay updated with the latest news.

Next