Advertisement

Shock!; ಆಶ್ರಯ ಮನೆಯಲ್ಲಿರುವ ಅಜ್ಜಿಗೆ ಬಂತು 1.03 ಲಕ್ಷ ರೂ. ಕರೆಂಟ್ ಬಿಲ್ !

03:53 PM Jun 22, 2023 | Team Udayavani |

ಕೊಪ್ಪಳ: ಕೊಪ್ಪಳ ಸಮೀಪದ ಭಾಗ್ಯನಗರದ ಅಜ್ಜಿಗೆ ಜೆಸ್ಕಾಂನಿಂದ ಬರೊಬ್ಬರಿ 1.03 ಲಕ್ಷ ರೂ. ಮೊತ್ತದ ವಿದ್ಯುತ್ ಬಿಲ್ ನೀಡಿ ಶಾಕ್ ಕೊಟ್ಟಿದ್ದಾರೆ. ಇದರಿಂದ ಅಜ್ಜಿ ಚಿಂತೆ ಮಾಡುವಂತಾಗಿದೆ.

Advertisement

ಭಾಗ್ಯನಗರದ ನಿವಾಸಿ ಗಿರಿಜಮ್ಮ ಚಿಂತಪಲ್ಲಿ ಎನ್ನುವ ವೃದ್ದೆ ಆಶ್ರಯ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಸರ್ಕಾರ ಈ ಅಜ್ಜಿಗೆ ಭಾಗ್ಯಜೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಮನೆಯಲ್ಲಿ ಅಜ್ಜಿ ಮತ್ತು ಮಗ ಮಾತ್ರ ವಾಸವಿದ್ದಾರೆ. ಮನೆಯಲ್ಲಿ ಇರೋದು ಎರಡು ಲೈಟ್ ಮಾತ್ರ. ಆದರೆ ಜೆಸ್ಕಾಂ ಈ ಅಜ್ಜಿ ಮನೆಗೆ 1.03 ಲಕ್ಷ ವಿದ್ಯುತ್ ಬಿಲ್ ನೀಡಿ ಅಜ್ಜಿಯ ನಿದ್ದೆಗೆಡಿಸಿದೆ.

ಪ್ರತಿ ತಿಂಗಳು ಅಜ್ಜಿ ಕುಟುಂಬ 10 ಯೂನಿಟ್ ಮಾತ್ರ ವಿದ್ಯುತ್ ಬಳಕೆ ಮಾಡುತ್ತಾರೆ. ಆದರೆ ಇಷ್ಟೊಂದು ಬಿಲ್ ಬಂದಿದ್ದು ಅಜ್ಜಿಗೂ ತಿಳಿದಿಲ್ಲ. ಈಗ ರಾಜ್ಯ ಸರ್ಕಾರ 200 ಯೂನಿಟ್ ವಿದ್ಯುತ್ ಉಚಿತ ಎಂಬ ಸುದ್ದಿ ತಿಳಿದು ತಮ್ಮ ಮನೆ ವಿದ್ಯುತ್ ಬಿಲ್ ತೋರಿಸಿದ್ದಾಳೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ಅಚ್ಚರಿಪಟ್ಟಿದ್ದಾರೆ. ಕೊನೆಗೆ ಜೆಸ್ಕಾಂಗೆ ಈ ಮಾಹಿತಿ ತಿಳಿದು ಅಧಿಕಾರಿ ರಮೇಶ ಅವರು ಅಜ್ಜಿ ಮನೆಗೆ ಭೇಟಿ ನೀಡಿ  ವಿದ್ಯುತ್ ಬಿಲ್ ಪರಿಶೀಲಿಸಿ, ‘ಇದು ಸಿಬಂದಿ ಮಾಡಿದ ಎಡವಟ್ಟು. ಇದರಲ್ಲಿ ತಾಂತ್ರಿಕ ದೋಷ‌ ಇದೆ. ಇದನ್ನು ಸರಿಪಡಿಸಲು ಐಟಿ ಸೆಲ್ ಗೆ ತಿಳಿಸುವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಜ್ಜಿ ಇನ್ಮುಂದೆ ಉಚಿತ ಸೌಲಭ್ಯ ಪಡೆಯಲು ಸೂಚಿಸಿದ್ದಾರೆ. ಆಗಿರುವ ಪ್ರಮಾದವನ್ನು ಅಧಿಕಾರಿ ಸರಿಪಡಿಸಲು ಪ್ರಯತ್ನ ಮಾಡಿದ್ದಾರೆ.

ಜೆಸ್ಕಾಂ ಮಾಡಿದ ಎಡವಟ್ಟು ಹಲವರ ಅಸಮಾಧಾನಕ್ಕೂ ಕಾರಣವಾಗಿದೆ. ಇಂತಹ ಹಲವು ಪ್ರಮಾದಗಳೂ ಇನ್ನೂ ಜಿಲ್ಲೆಯಲ್ಲಿ ಜೀವಂತ ಇವೆ. ಅವುಗಳ ಸರಿಪಡಿಸಿ ಎಂದು ಜನತೆ ಒತ್ತಾಯ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next