Advertisement
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಅವರು ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದರು. ಮೋದಿಯವರು ಮತ್ತೂಮ್ಮೆ ಪ್ರಧಾನಿ ಯಾಗುವುದು ಖಚಿತ. ಉಡುಪಿ- ಚಿಕ್ಕಮಗಳೂರು ಜನತೆ ಕೂಡ ಮೋದಿ ಯವರ ಕೈಗಳನ್ನು ಬಲಪಡಿಸುತ್ತಾರೆ ಎಂಬ ವಿಶ್ವಾಸವಿದೆ. ನಾನು ಐದು ವರ್ಷಗಳಲ್ಲಿ ಕೇಂದ್ರ ಸರಕಾರದಿಂದ ಅನೇಕ ಯೋಜನೆಗಳನ್ನು ಎರಡೂ ಜಿಲ್ಲೆಗಳಿಗೆ ತರಿಸಿ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಇನ್ನೂ ಹಲವು ಕೆಲಸಗಳು ಬಾಕಿ ಇವೆ. ಅಡಿಕೆ, ಕಾಫಿ ಬೆಳೆಗಾರರ ಸಮಸ್ಯೆಗಳ ನಿವಾರಣೆಗೆ ಮತ್ತಷ್ಟು ಪ್ರಯತ್ನಿಸ ಬೇಕಿದೆ. ಕೇಂದ್ರ- ರಾಜ್ಯದ ನಾಯಕರು ವಿಶ್ವಾಸವಿಟ್ಟು ಮತ್ತೂಮ್ಮೆ ಅವಕಾಶ ನೀಡಿದ್ದಾರೆ ಎಂದರು.
ದೇಶದಲ್ಲಿ ಈ ಬಾರಿ ಮಹಾಘಟ ಬಂಧನ್ ರಚಿಸಲಾಗಿದೆ. ಅದರ ಮುಖಂಡರು ಕರ್ನಾಟಕದಲ್ಲಿಯೇ ಒಂದಾಗಿ ಸಂದೇಶ ನೀಡಿದ್ದರು. ಆದರೆ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಲೋಕಸಭಾ ಸೀಟಿಗಾಗಿ ಕಿತ್ತಾಡುವ ಮೂಲಕ ಘಟ ಬಂಧನ್ ವಿಫಲ ವಾಗಿರುವುದನ್ನು ತೋರಿಸಿ ಕೊಟ್ಟಿದ್ದಾರೆ ಎಂದರು.ಪ್ರಶ್ನೆಯೊಂದಕ್ಕೆ ಉತ್ತರಿಸಿ, ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಅಭ್ಯರ್ಥಿಯ ಘೋಷಣೆಯಾದ ಬಳಿಕ ಒಂದಾಗಿ ಕೆಲಸ ಮಾಡುವುದು ಬಿಜೆಪಿ ಪದ್ಧತಿ. ಅದರಂತೆ ಇಲ್ಲಿಯೂ ಕೆಲಸ ನಡೆಯು ತ್ತಿದೆ ದುಪ್ಪಟ್ಟು ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು. ಮಾ.26: ನಾಮಪತ್ರ
ಮಾ.22ರಂದು ಶುಭ ಮುಹೂರ್ತವೆಂದು ನಾಮಪತ್ರ ಸಲ್ಲಿಸಿದ್ದೇನೆ. ಸಾರ್ವಜನಿಕವಾಗಿ ಮಾ.26ರಂದು ಸಲ್ಲಿಸಲಿದ್ದೇನೆ. ಅಂದು ಬೆಳಗ್ಗೆ 10ಕ್ಕೆ ಉಡುಪಿ ಚಿತ್ತರಂಜನ್ ಸರ್ಕಲ್‌ನಲ್ಲಿ ನಡೆಯುವ ಸಮಾವೇಶದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪಾಲ್ಗೊಳ್ಳಲಿದ್ದು, ಮೀನುಗಾರರ ಜತೆ ಸಭೆ ನಡೆಸಲಿದ್ದಾರೆ ಎಂದರು. ಪಕ್ಷದ ಭಾರತಿ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಜೀವರಾಜ್, ಸಾಣೂರು ನರಸಿಂಹ ಕಾಮತ್, ಗುರ್ಮೆ ಸುರೇಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಪ್ರಭಾಕರ ಪೂಜಾರಿ, ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.
Related Articles
ನಿಮ್ಮ ವಿರುದ್ಧ ನೋಟಾ ಚಲಾಯಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿವೆಯಲ್ಲವೆ? ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಕೈ ಚಿಹ್ನೆಯನ್ನೇ ನೋಡದಂಥ ಸ್ಥಿತಿ ಉಂಟಾಗಿದೆ. ಸ್ಪರ್ಧೆಗೆ ಅವಕಾಶ ಇಲ್ಲದಿರುವುದರಿಂದ ಹತಾಶ ಸ್ಥಿತಿ ತಲುಪಿರುವ ಕಾಂಗ್ರೆಸ್ ನೋಟಾ ಅಭಿಯಾನದ ಷಡ್ಯಂತ್ರ ರೂಪಿಸಿದೆ ಎಂದು ಶೋಭಾ ಪ್ರತ್ರಿಕ್ರಿಯಿಸಿದರು.
Advertisement
ಪ್ರಮೋದ್ ಸ್ಪರ್ಧೆ ವೈಯಕ್ತಿಕ ವಿಚಾರಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಅಭ್ಯರ್ಥಿಯಾಗಿರುವ ಕುರಿತು ಪ್ರಶ್ನಿಸಿದಾಗ, ಈ ಬಗ್ಗೆ ಹೆಚ್ಚು ಮಾತನಾಡಲಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಸ್ಪರ್ಧಿಸಬಹುದು. ಪ್ರಮೋದ್ ಅವರದ್ದು ವೈಯಕ್ತಿಕ ನಿರ್ಧಾರ. ನಮ್ಮ ಎದುರು ಪಕ್ಷದಲ್ಲಿ ಯಾರಿದ್ದರೂ ಸೋಲಿಸುವುದು ನಮ್ಮ ಗುರಿ. ಜನರು ಕೆಲಸ ಮಾಡುವವರಿಗೆ ಮತ ಹಾಕುತ್ತಾರೆಯೇ ವಿನಾಕುಟುಂಬ ರಾಜಕಾರಣ ಮಾಡುವ ಪಕ್ಷದವರಿಗೆ ಮತ ಹಾಕಲಾರರು ಎಂದು ಶೋಭಾ ಪ್ರತಿಕ್ರಿಯಿಸಿದರು.