Advertisement
ತಂಡಗಳ ಟಾಸ್ಕ್ ಶುರು:ವಾರದ ಟಾಸ್ಕ್ ಗೆ ಭವ್ಯ ಹಾಗೂ ಶೋಭಾ ಅವರ ನಡುವಿನ ತಂಡದ ನಡುವೆ ಟಾಸ್ಕ್ ನಡೆದಿದೆ.ಇಬ್ಬರು ತಮ್ಮ ತಂಡದ ಸದಸ್ಯರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
Related Articles
Advertisement
ಎಲ್ಲರಿಗೂ ಸಾವಿರ ಸಾವಿರ ರೂಪಾಯಿ ಬಿಬಿ ಪಾಯಿಂಟ್ಸ್ ಕೊಟ್ಟು ಖರೀದಿಸಲಾಗಿದೆ. ಎಲ್ಲರೂ ತಮಗೆ ಕೊಟ್ಟಿರುವ ಹಣವನ್ನು ಜಾಣ್ಮೆಯಿಂದ ಕಾಪಾಡಿಕೊಂಡಿದ್ದಾರೆ.
ಮೊದಲ ಟಾಸ್ಕ್ ಆಗಿ ‘ಟವರ್ ಬಂತು ಟವರು’ ನೀಡಲಾಗಿದೆ. ಈ ಟಾಸ್ಕ್ ಗೆದ್ದರೆ 5 ಸಾವಿರ ಬಿಬಿ ಪಾಯಿಂಟ್ಸ್ ಗಳಿಸುತ್ತದೆ. ಈ ಸುತ್ತಿನಲ್ಲಿ ಭವ್ಯ ಅವರ ತಂಡ ಗೆದ್ದಿದೆ.
ಶಿಶಿರ್ , ಮೋಕ್ಷಿತಾ ಅವರು ಬಗೆ ಬಗೆಯ ಮಾತುಗಳನ್ನು ಆಡಿ ಚೈತ್ರಾ ಅವರನ್ನು ತಮ್ಮ ತಂಡಕ್ಕೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಎದುರಾಳಿ ತಂಡದ ಜತೆ ಮಾತನಾಡಿ ಆ ತಂಡ ತಂತ್ರಗಾರಿಕೆಯನ್ನು ಹೊರಗೆಳೆದಿದ್ದಾರೆ.
ವೀಕ್ ಎನ್ನುವ ರಜತ್ ಮಾತಿಗೆ ಮಂಜು ಅವರು ಗರಂ ಆಗಿದ್ದಾರೆ. ನಾನು ತ್ರಿವಿಕ್ರಮ್ ಒಂದೇ ಟೀಮ್ ಅಲ್ಲಿ ಇದ್ರೆ ಸ್ಟ್ರಾಂಗ್ ಆಗಿ ಇರುತ್ತದೆ ಎಂದು ರಜತ್ ಹೇಳಿದ್ದಾರೆ. ಇದಕ್ಕೆ ಮಂಜು ನಾವೆಲ್ಲರೂ ವೀಕ್ ಅಂಥ ನೀವು ಹೇಳ್ತಾ ಇದ್ದೀರಾ ಎಂದು ಮಂಜು ಪ್ರಶ್ನೆ ಮಾಡಿದ್ದಾರೆ.
ಐಶ್ವರ್ಯಾ ಅವರ ಬಳಿಯಿದ್ದ ಪಾಯಿಂಟ್ಸ್ ನ್ನು ಚೈತ್ರಾ ಅವರು ಮೆಲ್ಲನೆ ಬಂದು ಕಿತ್ತುಕೊಂಡು ಹೋಗಿದ್ದಾರೆ. ಚೈತ್ರಾ ಅವರ ಈ ಕುತಂತ್ರದಿಂದ ನೋಡಿ ಎದುರಾಳಿ ತಂಡದವರು ಶಾಕ್ ಆಗಿದ್ದಾರೆ.
ಐಶ್ವರ್ಯಾ ಬಳಿಯಿದ್ದ ಎರಡು ಸಾವಿರ ರೂಪಾಯಿಯನ್ನು ಚೈತ್ರಾ ಅವರು ಮೆಲ್ಲಗೆ ಬಂದು ಜಾಣ್ಮೆಯಿಂದ ಕಿತ್ತುಕೊಂಡು ಓಡಿದ್ದಾರೆ.
ಚೆಂಡು ನಿನ್ನ ಬಿಡಲಾರೆ ಎನ್ನುವ ಟಾಸ್ಕ್ ನಲ್ಲಿ ಎರಡು ತಂಡದವರು ಜಿದ್ದಾಜಿದ್ದಿಯಿಂದ ಹೋರಾಟ ಮಾಡಿದ್ದಾರೆ. ಈ ವೇಳೆ ಸುರೇಶ್ – ರಜತ್ ನಡುವೆ ಮಾತಿನ ವಾಗ್ವಾದ ನಡೆದಿದೆ.
ಕಾಲಿನಲ್ಲಿ ಬಾಲ್ ಇಟ್ಟುಕೊಂಡು ಇದ್ರೆ ಏನೋ ಮಾಡ್ತೀಯ. ಗುಗ್ಗು ನನ್ಮಗನ ತರ ಮಾತನಾಡ್ತೀಯಾ. ಮುಚ್ಕೊಂಡು ಅಮ್ಮಿಕೊಂಡು….ವೇಸ್ಟ್ ನನ್ಮಗನೇ. ಹೋಗಲೇ ಸೆಡೆ… ಮಾತಲ್ಲೇ ಬೇರೆ ಅವರ ಹತ್ರ ಇಟ್ಕೋ… ಎಂದು ಮೈಗೆ ಮೈಗೆ ತಾಗಿಸಿಕೊಂಡೇ ರಜತ್ ಮಾತನಾಡಿದ್ದಾರೆ. ಈ ವೇಳೆ ಮಂಜು ಇಬ್ಬರನ್ನು ದೂರ ಮಾಡಿದ್ದಾರೆ.
ಮಗನೇ ಗಿಗನೇ ಮಾತನಾಡಬೇಡ… ಏನೋ ಮಾಡ್ತೀಯಾ. ಮಗನೇ ಅಂದ್ರೆ ನನ್ ಅಪ್ಪನ ಬಿಗ್ ಬಾಸ್ ಇವನು. ಸೆಡೆ ಗುರು ನಾನು. ಓಪನ್ ಮಾಡಿ ಬಿಗ್ ಬಾಸ್ ನಾನು ಆಡಲ್ಲವೆಂದು ಸುರೇಶ್ ಬಾಗಿಲು ಬಡಿದಿದ್ದಾರೆ.
ರಜತ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗವಂತೆ ಮಾಡಿದೆ. ಯಾವುದೇ ಕಾರಣಕ್ಕೂ ನಾನು ಆಡಲ್ಲವೆಂದು ಹೇಳಿದ್ದಾರೆ.
ನನಗೆ ನ್ಯಾಯಬೇಕು ಈ ರೀತಿಯ ಮಾತುಗಳನ್ನು ಕೇಳಿ ನನಗೆ ಇರೋಕೆ ಆಗಲ್ಲ. ನಾನು ಇಲ್ಲಿ ಇರೋದೆ ಇಲ್ಲ. ಬಾಗಿಲು ಓಪನ್ ಮಾಡಿವೆಂದಿದ್ದಾರೆ. ಸುರೇಶ್ ಅವರನ್ನು ಸಮಾಧಾನ ಮಾಡಲು ಸ್ಪರ್ಧಿಗಳು ಹರಸಾಹಸಪಟ್ಟಿದ್ದಾರೆ.
ಅಪ್ಪನ ಬಗ್ಗೆ ಮಾತನಾಡುತ್ತಾರೆ.ಬ್ಯಾಗ್ ಪ್ಯಾಕ್ ಮಾಡುತ್ತೇನೆ. ಒಂದು ಸಲಿ ಹೋದ್ರೆ ವಾಪಸ್ ಬರಲ್ಲವೆಂದು ಸುರೇಶ್ ಕಣ್ಣೀರಿಟ್ಟಿದ್ದಾರೆ.