Advertisement

ಶಿವರಾತ್ರಿ ರಾಜೇಂದ್ರ ಶ್ರೀಗಳಿಂದ ಅಕ್ಷರ ಕಾಯಕ

01:09 PM Sep 23, 2017 | |

ನಂಜನಗೂಡು: ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಮಾನವೀಯ ಮೌಲ್ಯಗಳ ಹರಿಕಾರರಾಗಿ ಜಾತಿ-ಭೇದವಿಲ್ಲದೆ ಅಕ್ಷರ ಜ್ಞಾನವನ್ನು ಪಸರಿಸುವ ಕಾಯಕ ಕೈಗೊಂಡವರಲ್ಲಿ ಅಗ್ರಗಣ್ಯರಾಗಿದ್ದರು ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಪ್ರೊ. ಮಲೆಯೂರು ಗುರುಸ್ವಾಮಿ ತಿಳಿಸಿದರು.

Advertisement

ನಂಜನಗೂಡಿನ ಜೆಎಸ್‌ಎಸ್‌ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಶ್ರೀಗಳ 102 ನೇ ಜಯಂತಿಯಲ್ಲಿ ಭಾಗಿಯಾಗಿ ಶ್ರೀಗಳಿಗೆ ನುಡಿ ನಮನ ಸಲ್ಲಿಸಿ ಮಾತನಾಡಿದರು. ಶ್ರೀಗಳ ವಿಶಾಲ ಮನೋಭಾವದಿಂದಾ ಗಿಯೇ ನೀವಿಂದು ಇಂತಹ ಸುಸುಜ್ಜಿತವಾದ ಸಂಸ್ಥೆಯಲ್ಲಿ ಜ್ಞಾನಾರ್ಥಿಗಳಾಗಿದ್ದಿರಿ ಎಂದ ಗುರುಸ್ವಾಮಿಗಳು ಅನ್ನ ಹಾಗೂ ಅಕ್ಷರ ಜ್ಞಾನದ ಬಗ್ಗೆ ಶ್ರೀಗಳಿಗಿದ್ದ ದೂರದೃಷ್ಟಿಯ ಫ‌ಲವಾಗಿ ಇಂದು ಶ್ರೀ ಮಠ ಹಾಗೂ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು. 

ಅಕ್ಷರ ಜ್ಞಾನಿಗಳಾಗಿ ಬುದ್ಧಿವಂತರು ಎನಿಸಿ ಕೊಂಡವರು ಇಂದು ಪರೋಪಕಾರ ಮರೆತು ಮೋಸ ಮಾಡುವುದರಲ್ಲಿ ಅಕ್ರಮ ವೆಸಗುವುದರಲ್ಲಿ ಮುಂಚೂಣಿಯಲ್ಲಿ ದ್ದಾರೆ. ವಿದ್ಯಾವಂತರ ಮನೋಭಾವ ಬದಲಾಗ ದಿದ್ದರೆ ಸಮಾಜಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದರು. 

ಯುವ ಜನಾಂಗವನ್ನು ದಾರಿ ತಪ್ಪಿಸುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆಯಯುತ್ತಿದೆ ಎಂದ ಗುರುಸ್ವಾಮಿ, ಈ ವಿಷಯದಲ್ಲಿ ದೃಶ್ಯ ಮಾಧ್ಯಮಗಳ ಪಾಲೇ ಹೆಚ್ಚಾಗಿದೆ ಎಂದು ಆರೋಪಿಸಿದರು. ಶ್ರೀಗಳ ಆಶಯ ಇದಲ್ಲ. ಅಕ್ಷರ ಜ್ಞಾನಿಗಳಾದವರು ಪರೋಪಕಾರಿಗಳಾಗಿ ಸಮಾಜದ ಪರಿವರ್ತನೆಯಲ್ಲಿ ತೊಡಗಿಕೊಳ್ಳಬೇಕು ಎಂಬುದು ರಾಜೇಂದ್ರ ಸ್ವಾಮಿಗಳ ಕನಸಾಗಿತ್ತು ಎಂದು ನುಡಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭಾ ಮಾಜಿ ಅಧ್ಯಕ್ಷ ಆರ್‌.ವಿ.ಮಹದೇವಸ್ವಾಮಿ, ಗ್ರಾಮೀಣ ಜನತೆಗೆ ಅನ್ನ ನೀಡಿ ಅಕ್ಷರ ಕಲಿಸಿದ ಮಹನೀಯರು ರಾಜೇಂದ್ರರು ಎಂದು ಹೇಳಿದರು. ಮಲ್ಲನ ಮೂಲೆ ಪೀಠಾಧ್ಯಕ್ಷ ಶ್ರೀ ಚೆನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.

Advertisement

ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ವಿಜಯೇಂದ್ರ ಕುಮಾರ, ಪ್ರೊ.ಸಿ.ವಿ.ಬಸವರಾಜು ಉಪಸ್ಥಿತರಿದ್ದರು. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಸಾದ ಎಂ, ಭವಾನಿ ಆರ್‌, ದೀಪಿಕಾ ಎಂ.ಪಿ, ಹರ್ಷಿತ ಟಿ.ಎಸ್‌, ಕಾವ್ಯಾ ಎಚ್‌.ಎಸ್‌, ಮಹದೇವಸ್ವಾಮಿ, ಭಾಗ್ಯಶ್ರೀ, ಅಪೂರ್ವ,

ಬೀರೇಶ, ನವೀನ ಕುಮಾರ್‌, ಮಹದೇವಸ್ವಾಮಿ ಎಚ್‌.ಬಿ, ತ್ರಿವೇಣಿ, ಮಂಜುಳಾ ಎಂ, ಮಹದೇವಸ್ವಾಮಿ ಎಚ್‌.ಎಂ, ನಳಿನಿ, ಎಸ್‌.ಶರತ್‌ ಕುಮಾರ್‌, ಸುಮಲತಾ, ರಶ್ಮಿ, ಅರ್ಪಿತಾ ಸಿ, ನಂದಿನಿ, ಶ್ವೇತ, ನಿಖೀತ, ಪಲ್ಲವಿ ಹಾಗೂ ಕೋಮಲಾರಿಗೆ ದತ್ತಿ ವಿದ್ಯಾರ್ಥಿ ವೇತನ ಹಾಗೂ ನಗದು ಪುರಸ್ಕಾರ ನೀಡಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next