Advertisement

ವೈರಾಗ್ಯ, ಆಧ್ಯಾತ್ಮದ ಸಂಕೇತವೇ ಶಿವ

06:27 PM Mar 12, 2021 | Team Udayavani |

ಕುದೂರು: ಶಿವ ಎಂಬುದು ವೈರಾಗ್ಯ ಮತ್ತು ಆಧ್ಯಾತ್ಮದ ಸಂಕೇತ. ಸಾಧಕರು, ಸನ್ಯಾಸಿಗಳಿಗೆ ಧ್ಯಾನಾಸಕ್ತ ಶಿವನೇ ಮಾದರಿ ಎಂದು ಕಂಚುಗಲ್‌ ಬಂಡೇಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

Advertisement

ಕಂಚುಗಲ್‌ ಬಂಡೇಮಠದ ಮಹಾಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದ ಅವರು, ದೇಹವನ್ನು ದಂಡಿಸುವ ಜತೆಗೆ, ಶುದ್ಧ ಆಲೋಚನೆ ಮಾಡುವುದು ಶಿವರಾತ್ರಿ ಹಬ್ಬದ ವಿಶೇಷ. ಆಯುರ್ವೇದದಲ್ಲಿ ಬಹುದೊಡ್ಡ ಪಾತ್ರ ವಹಿಸಿರುವ ಔಷಧ ಎಲೆಯಾದ ಬಿಲ್ವಪತ್ರೆಯನ್ನು ಶಿವನಿಗೆ ವಿಶೇಷವಾಗಿ ಅರ್ಪಿಸಲಾಗುತ್ತದೆ. ಬಿಲ್ವಪತ್ರೆ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಬೇಸಿಗೆ ವೇಳೆ ಇದರ ಬಳಕೆ ಹೆಚ್ಚು ಸೂಕ್ತ ಎಂದು ವೈದ್ಯಶಾಸ್ತ್ರ ತಿಳಿಸುತ್ತದೆ ಎಂದರು.

ಶಿವಲಿಂಗಕ್ಕೆ ವಿಶೇಷ ಹೂವಿನ ಅಲಂಕಾರ: ಗ್ರಾಮದ ಪ್ರಸನ್ನ ಗಂಗಾಧರೇಶ್ವರ ದೇವಾಲಯದಲ್ಲಿ ಶಿವಲಿಂಗಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದ ನಡೆದ ರುದ್ರಾಭಿಷೇಕ, ಪೂಜಾ ಕಾರ್ಯಗಳಲ್ಲಿ ಭಕ್ತರು ಪಾಲ್ಗೊಂಡಿದ್ದರು. ಗ್ರಾಮದ ತುಮಕೂರು ರಸ್ತೆಯಲ್ಲಿರುವ ರಾಮಲಿಂಗಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ರಾಮಲಿಂಗ ಸ್ವಾಮಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ರಾಮಲಿಂಗಚೌಡೇಶ್ವರಿ ದೇವಾಲಯ ಸಂಘದ ಅಧ್ಯಕ್ಷ ಕೆ.ಬಿ.ಬಾಲರಾಜು, ಶಿವಕುಮಾರ್‌, ಜಯಚಂದ್ರಬಾಬು, ಶಿವರಾಂ, ಮುರುಳಿಧರ್‌, ಮಂಜುನಾಥ್‌, ಶಿವರಾಮ್‌ ಇದ್ದರು.

ಸೋಲೂರು ಹೋಬಳಿಯ ಗದ್ದುಗೆಮಠದ ಶ್ರೀ ಮಹಂತೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಗದ್ದುಗೆ ಮಠಾಧ್ಯಕ್ಷ ಮಹಂತ ಸ್ವಾಮೀಜಿ ಮಾತನಾಡಿ, ಉಸಿರಾಡುತ್ತಿದ್ದರೆ ಪ್ರತಿಯೊಬ್ಬರು ಶಿವ ಸ್ವರೂಪಿಗಳೇ ಉಸಿರು ನಿಂತರೆ ಅವರು ಶವವಾಗುತ್ತಾರೆ.  ಇನ್ನೊಬ್ಬರ ಹಿತ ಬಯಸುವುದು ಸ್ವಾರ್ಥಕ್ಕೆ ಆರೋಗ್ಯಕರ ಗೆರೆ ಎಳೆದುಕೊಳ್ಳುವುದು. ಸರಳವಾಗಿ ಬದುಕಿದರೂ ಸಂತೋಷದಿಂದ ಇರಬೇಕು ಎಂಬುದನ್ನು ಈ ಹಬ್ಬ ಸಾರುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next