ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಮಹಾ ಶಿವರಾತ್ರಿಯನ್ನು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಿವ ಕ್ಷೇತ್ರಗಳಲ್ಲಿ ವಿಶೇಷ ಪೂಜೆ, ಹೋಮ, ಮಹಾ ರುದ್ರಾಭಿಷೇಕ, ಶತಸೀಯಾಳಾಭಿಷೇಕ, ರಥೋತ್ಸವ, ಜಾಗರಣೆ, ಭಜನೆ ಇತ್ಯಾದಿ ಜರಗಿದವು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶಿವದೇಗುಲಗಳಿಗೆ ತೆರಳಿ ದೇವರ ದರ್ಶನ ಪಡೆದರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. 30,000ಕ್ಕೂ ಅಧಿಕ ಭಕ್ತರು ಪಾದಯಾತ್ರೆ ಯಲ್ಲಿ ಆಗಮಿಸಿದ್ದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಹೋಮ, ರುದ್ರಾಭಿಷೇಕ, ಶತಸೀಯಾಳಾಭಿಷೇಕ, ಮಹಾಪೂಜೆ, ರಥೋತ್ಸವ, ಜಾಗರಣೆ ಜರಗಿದವು. ಕದ್ರಿ ಕ್ಷೇತ್ರದಲ್ಲಿ ಶಿವಪೂಜೆ, ರುದ್ರಾಭಿ ಷೇಕ, ಜಾಗರಣೆ ಜರಗಿತು. ದಕ್ಷಿಣ ಕನ್ನಡ ಜಿಲ್ಲೆಯ ಕಾರಿಂಜ, ಉಪ್ಪಿನಂಗಡಿ, ಪುತ್ತೂರು, ಶರವು, ನಂದಾವರ, ಬಂಟ್ವಾಳ, ತೊಡಿಕಾನ, ಐವರ್ನಾಡು, ವಿಟ್ಲ ನೆಟ್ಲ, ನರಹರಿ ಬೆಟ್ಟ, ಪಾಂಡೇಶ್ವರ, ಕಾವೂರು, ಪೋರ್ಕೊಡಿ, ಆದ್ಯಪಾಡಿ, ಆಲೆಟ್ಟಿ ಮೊದಲಾದೆಡೆಗಳ ಶಿವಕ್ಷೇತ್ರಗಳಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಜಾಗರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ದೇವಿಗೆ ಅರ್ಧ ನಾರೀಶ್ವರ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಉಡುಪಿ ಜಿಲ್ಲೆಯ ಬನ್ನಂಜೆ, ಪರ್ಕಳ, ಪೆರಂಪಳ್ಳಿ, ಕಲ್ಯಾಣಪುರ ಪುತ್ತೂರು ಕುಮ್ರಪಾಡಿ, ಪಂದುಬೆಟ್ಟು ಕಾನಗುಡ್ಡೆ, ತೆಂಕನಿಡಿಯೂರು ಬೆಳ್ಕಲೆ, ಬ್ರಹ್ಮಾವರ, ಕೂರಾಡಿ, ಬಸೂÅರು, ಪಡುಬಿದ್ರಿ, ಕಳತ್ತೂರು, ಸೂರಾಲು, ತೆಕ್ಕಟ್ಟೆ, ಚೊಕ್ಕಾಡಿ, ಮೂಡುಬೆಟ್ಟು, ಪೆರ್ವಾಜೆ, ಹಾರಾಡಿ, ಸಗ್ರಿ ಚಕ್ರತೀರ್ಥ, ಕಟಪಾಡಿ, ಕೆಳಾರ್ಕಳ ಬೆಟ್ಟು, ಕೋಟ, ಬಾರಕೂರು, ಉಪ್ಪೂರು ಚಿತ್ತಾರಿ, ನಯಂಪಳ್ಳಿ ಮಡಿ, ಶಿವಪಾಡಿಯ ಶಿವಕ್ಷೇತ್ರಗಳು, ಹೆರ್ಗದ ತ್ರ್ಯಂಬಕೇಶ್ವರ, ಉಡುಪಿಯ ನಿತ್ಯಾನಂದ ಮಂದಿರ, ಕುಂದಾಪುರದ ಕುಂದೇಶ್ವರ, ಕೋಟೇಶ್ವರದ ಕೋಟಿ ಲಿಂಗೇಶ್ವರ, ಬೈಂದೂರು ಸೇನೇಶ್ವರ, ಒಣಕೊಡ್ಲು, ಬಸೂÅರು ಉಮಾಮಹೇಶ್ವರ ಮಠ ಮತ್ತು ತುಳುವೇಶ್ವರ, ಹಳ್ನಾಡು, ಹೆಬ್ರಿ ಅರ್ಧನಾರೀಶ್ವರ, ಕೊಲ್ಲೂರು ಉಮಾಮಹೇಶ್ವರ, ಗಂಗನಾಡು ಶಿವ ದೇವಸ್ಥಾನ, ಕ್ರೋಡ ಶಂಕರನಾರಾಯಣ, ಹೊಳೆ ಶಂಕರ ನಾರಾಯಣ, ಆವರ್ಸೆ, ಮಾಂಡವಿ, ಬೆಳ್ವೆ ಮತ್ತು ಕೊಡವೂರು, ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಶಂಕರ ನಾರಾಯಣ, ಕಿರಿಮಂಜೇಶ್ವರ ಅಗಸೆöàಶ್ವರ, ಹಟ್ಟಿಯಂಗಡಿ ಲೋಕ ನಾಥೇಶ್ವರ, ಕುಂಭಾಶಿ ಹರಿಹರ, ಕಾರ್ಕಳ ಶಿವತಿಕೆರೆ ಉಮಾ ಮಹೇಶ್ವರ, ಪಡುಬೈಲೂರು ಇಷ್ಟ ಮಹಾಲಿಂಗೇಶ್ವರ, ಬಾರಕೂರು ಮೂಡುಕೇರಿ ಸೋಮನಾಥೇಶ್ವರ, ಎಲ್ಲೂರು ವಿಶ್ವನಾಥ, ಪುತ್ತಿಗೆ ಸೋಮನಾಥೇಶ್ವರ, ಬೋಳ ಮೃತ್ಯುಂಜಯ, ಕಾಂತಾವರ ಕಾಂತೇಶ್ವರ, ಬೆಳ್ಮಣ್ಣು ಮದಕ ಮಹಾದೇವ ದೇವಸ್ಥಾನ, ಕೌಡೂರು ಶಿವ ದೇವಸ್ಥಾನ, ಉದ್ಯಾವರ ಶಂಭುಶೈಲೇಶ್ವರ, ಕೇದಾರ ಬ್ರಹೆ¾àಶ್ವರ ಮಹಾಲಿಂಗೇಶ್ವರ, ಬೈಕಾಡಿ ಕಾಮೇಶ್ವರ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು.