ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ 123ನೇ ಚಿತ್ರ “ಬೈರಾಗಿ’ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೇ ವೇಳೆ ಚಿತ್ರದ ಮೊದಲ ಮತ್ತು ನಾಯಕ ಶಿವರಾಜಕುಮಾರ್ ಅವರ ಎಂಟ್ರಿ ಸಾಂಗ್ ಅನ್ನು ಚಿತ್ರತಂಡ ಅಕ್ಷಯ ತೃತೀಯಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಿದೆ.
“ನಕ್ಕರನಖ ನಕ್ಕರನಖ ನುಗ್ಗಿಬಂತೋ ನಾಡಹುಲಿ…, ಟಕರಟಕ ಟಕರಟಕ ಎಗರಿಬಂತೋ ಕಾಡಹುಲಿ…’ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಆ್ಯಂಥೋನಿ ದಾಸನ್ ಈ ಹಾಡಿಗೆ ಧ್ವನಿಯಾಗಿದ್ದು, ನಟ ದುನಿಯಾ ವಿಜಯ್ “ಬೈರಾಗಿ’ಯ ಈ ಮೊದಲ ಹಾಡನ್ನು ಬಿಡುಗಡೆಗೊಳಿಸಿದ್ದಾರೆ.
ಇನ್ನು “ಬೈರಾಗಿ’ಯ ಈ ಹಾಡು ಸಖತ್ ಮಾಸ್ ಆಗಿ ಮೂಡಿಬಂದಿದ್ದು, ಶಿವಣ್ಣನ ಅದ್ಧೂರಿ ಎಂಟ್ರಿ ಗಮನ ಸೆಳೆಯು ವಂತಿದೆ. “ನೂರಾರು ಡಾನ್ಸರ್, ಬೃಹತ್ ಸೆಟ್, ಕಲರ್‌ಫುಲ್ ಕಾಸ್ಟೂಮ್ ನಲ್ಲಿ ಶಿವಣ್ಣ ಈ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬನ್ನೇರುಘಟ್ಟ ಸಮೀಪದ ದೇವಸ್ಥಾನವೊಂದರ ಬಳಿ ವಿಶೇಷವಾಗಿ ಹಾಕಲಾಗಿದ್ದ ಜಾತ್ರೆ ಸೆಟ್‌ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಹಾಡು ದೊಡ್ಡ ಮಟ್ಟದಲ್ಲಿ ಮೂಡಿಬಂದಿದೆ’ ಎಂದು ಈ ಹಾಡಿನ ಬಗ್ಗೆ ವಿವರಣೆ ಕೊಡುತ್ತಾರೆ ನಿರ್ಮಾಪಕ ಕೃಷ್ಣ ಸಾರ್ಥಕ್.
ಇದನ್ನೂ ಓದಿ:ಥಿಯೇಟರ್‌ನಲ್ಲಿ ಮನೋಜ್ – ರಂಜನಿ ‘ಟಕ್ಕರ್’
ಸದ್ಯ ಈ ಹಾಡು ಹೊರಬಂದ ಎರಡನೇ ದಿನದಲ್ಲಿ 2 ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ವಿಜಯ್ ಮಿಲ್ಟನ್ ಕಥೆ, ಚಿತ್ರಕಥೆ, ಛಾಯಾಗ್ರಹಣ ಮತ್ತು ನಿರ್ದೇಶನವಿ ರುವ “ಬೈರಾಗಿ’ ಚಿತ್ರವನ್ನು “ಕೃಷ್ಣ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ಕೃಷ್ಣ ಸಾರ್ಥಕ್ ನಿರ್ಮಿಸುತ್ತಿದ್ದಾರೆ.