Advertisement

ಶಿವಣ್ಣನ ಮುಂದಿನ ಚಿತ್ರಕ್ಕೆ ರಿಷಬ್ ಶೆಟ್ಟಿ ಆಕ್ಷನ್​ ಕಟ್….

05:37 PM Jul 10, 2021 | Team Udayavani |

ಬೆಂಗಳೂರು : ಅಭಿನಯದಲ್ಲಿ ಬ್ಯುಝಿಯಾಗಿರುವ ರಿಷಬ್ ಶೆಟ್ಟಿ ಮತ್ತೆ ಸಿನಿಮಾ ನಿರ್ದೇಶನಕ್ಕೆ ವಾಪಾಸ್ ಆಗಲಿದ್ದಾರೆ. ಅವರ ಮುಂದಿನ ಸಿನಿಮಾ ಶಿವಣ್ಣನ ಜೊತೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​ ಅವರ 126ನೇ ಚಿತ್ರಕ್ಕೆ ರಿಷಬ್​ ಶೆಟ್ಟಿ ಆಯಕ್ಷನ್​ ಕಟ್​ ಹೇಳಲಿದ್ದಾರಂತೆ.

Advertisement

ಹೌದು, ‘ರಿಕ್ಕಿ’, ‘ಕಿರಿಕ್​ ಪಾರ್ಟಿ’, ‘ಸ.ಹಿ.ಪ್ರಾ. ಶಾಲೆ ಕಾಸರಗೋಡು’ ಅಂಥಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ರಿಷಬ್ ಶೆಟ್ಟಿ ಸದ್ಯ, ರುದ್ರಪ್ರಯಾಗ್​ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಈ ಮಧ್ಯೆ ಶಿವಣ್ಣ ಅವರ 126ನೇ ಚಿತ್ರಕ್ಕೆ ಇವರೇ ನಿರ್ದೇಶನ ಮಾಡಲಿದ್ದಾರೆ ಎನ್ನುವ ಟಾಕ್ ಕೇಳಿ ಬಂದಿದೆ. ಜುಲೈ 12 ಶಿವಣ್ಣನ ಬರ್ತ್ ಡೇ. ಅಂದು ಈ ಸಿನಿಮಾ ಅನೌನ್ಸ್ ಆಗಲಿದೆಯಂತೆ.

ಅಂದಹಾಗೆ ರಿಷಬ್​-ಶಿವರಾಜ್​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ ಜಯಣ್ಣ ಫಿಲ್ಮ್ಸ್​ ಬಂಡವಾಳ ಹೂಡುತ್ತಿದೆ ಎನ್ನಲಾಗಿದೆ.

ಇನ್ನು ಸದ್ಯ ಶಿವಣ್ಣ 123 ಸಿನಿಮಾದ ಕೊನೆಯ ಹಂತದ ಶೂಟಿಂಗ್ ನಲ್ಲಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಜುಲೈ 12 ರಂದು ಸಿನಿಮಾ ಟೈಟಲ್ ಅನಾವರಣಗೊಳ್ಳಲಿದೆ. ಈ ಸಿನಿಮಾದಲ್ಲಿ ಶಿವಣ್ಣನ ಜೊತೆ ಡಾಲಿ ಧನಂಜಯ್ ಕೂಡ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next