Advertisement

ವಿಲನ್‌ ತಂಡ ಸೇರಿಕೊಂಡ ಶಿವಣ್ಣ

10:43 AM Jul 18, 2017 | Team Udayavani |

“ದಿ ವಿಲನ್‌’ ಚಿತ್ರ ಆರಂಭವಾಗಿ ತುಂಬಾ ದಿನಗಳಾದರೂ ಶಿವರಾಜಕುಮಾರ್‌ ಚಿತ್ರತಂಡ ಸೇರಿಕೊಳ್ಳದೇ ಇರುವುದರಿಂದ ಅವರ ಅಭಿಮಾನಿಗಳಲ್ಲಿ ಒಂದು ಸಂದೇಹ ಮೂಡಿತ್ತು. ಅದು ಚಿತ್ರದಲ್ಲಿ ಶಿವರಾಜಕುಮಾರ್‌ ನಟಿಸ್ತಾರೋ, ಇಲ್ಲವೋ ಎಂಬುದು.

Advertisement

ಅದಕ್ಕೆ ಇತ್ತೀಚೆಗೆ ಪ್ರೇಮ್‌, “ನೋ ಡೌಟ್‌, ಶಿವಣ್ಣ ನಟಿಸ್ತಾರೆ, ಲಂಡನ್‌ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ’ ಎಂದು ಹೇಳಿದ್ದರು. ಅದರಂತೆ ಶಿವರಾಜಕುಮಾರ್‌ ಲಂಡನ್‌ನಲ್ಲಿ ನಡೆಯುತ್ತಿರುವ “ದಿ ವಿಲನ್‌’ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ “ದಿ ವಿಲನ್‌’ ತಂಡದ ಸದಸ್ಯರೆಲ್ಲರೂ ಒಟ್ಟಾಗಿದ್ದಾರೆ.

ಲಂಡನ್‌ನ “ದಿ ವಿಲನ್‌’ ಸೆಟ್‌ನಲ್ಲಿ ಶಿವರಾಜಕುಮಾರ್‌ ಉದ್ದ ಕೂದಲಿನ ಗೆಟಪ್‌ನಲ್ಲಿರುವ ಫೋಟೋವೊಂದನ್ನು ಚಿತ್ರತಂಡ ಅಪ್‌ಲೋಡ್‌ ಮಾಡಿದೆ. ಮೇಲ್ನೊಟಕ್ಕೆ ಶಿವರಾಜಕುಮಾರ್‌ ಅವರ ಹೇರ್‌ಸ್ಟೈಲ್‌ “ಜೋಗಿ’ ಸಿನಿಮಾದ ಗೆಟಪ್‌ ಅನ್ನು ನೆನಪಿಸುತ್ತಿದ್ದು, ಅವರ ಪಾತ್ರ ಯಾವ ತರಹ ಇರುತ್ತದೆ ಎಂಬುದನ್ನು ತಿಳದುಕೊಳ್ಳಲು ಇನ್ನೂ ಸಾಕಷ್ಟು ಸಮಯವಿದೆ. 

Advertisement

Udayavani is now on Telegram. Click here to join our channel and stay updated with the latest news.

Next