ಬೆಂಗಳೂರು: ನಗರದ ಶಿವಾನಂದ ವೃತ್ತ ಸ್ಟೀಲ್ ಬ್ರಿಡ್ಜ್ (ಮೇಲ್ಸೇತುವೆ) ಯೋಜನೆ 2017-18 ನೇ ಸಾಲಿನಲ್ಲಿ ಪ್ರಾರಂಭವಾಯಿತು. ಯೋಜನೆಯ ಅವಶ್ಯಕತೆಯ ಚರ್ಚೆ, ಸ್ಥಳೀಯರ ವಿರೋಧ ಹಾಗೂ ಜಾಗದ ಸಮಸ್ಯೆಯಿಂದಾಗಿ ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾಗುತ್ತಲೇ ಇದೆ.
ಈ ಕಾಮಗಾರಿ ಪೂರ್ಣಗೊಳಿಸಲು ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ ಅವಧಿಯಿಂದಲೂ ಡೆಡ್ ಲೈನ್ ಗಳು ನಿಗದಿ ಆಗುತ್ತಲೇ ಇವೆ. ಡೆಡ್ ಲೈನ್ ಮುಗಿಯುತ್ತಿರುವುದು ಬಿಟ್ಟರೆ ಕಾಮಗಾರಿ ಮುಗಿಯುತ್ತಿಲ್ಲ.
ಸ್ಟೀಲ್‌ಬ್ರಿಡ್ಜ್ ನಿರ್ಮಾಣದ ಮೂಲ ಆಶಯವೇ ಸ್ಟೀಲ್ ನಿಂದ ಪಿಲ್ಲರ್ ಗಳನ್ನು ನಿರ್ಮಾಣ ಮಾಡುವುದು ಹಾಗೂ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವುದಾಗಿತ್ತು. ಆದರೆ, ಈ ಯೋಜನೆ ಪ್ರಾರಂಭವಾದಾಗಿನಿಂದಲೂ ಹಲವು ವಿವಾದಗಳು ಸೃಷ್ಟಿಯಾಗಿದ್ದು, ಯೋಜನೆಯ ಮೂಲ ಆಶಯಕ್ಕೆ ತದ್ವಿರುದ್ಧವಾಗಿ ವಿಳಂಬ ಹಾದಿಯಲ್ಲಿದೆ.
ಇದನ್ನೂ ಓದಿ:ಕೆಲಸಕ್ಕಿದ್ದ ಮನೆಯಲ್ಲೇ 60 ಲಕ್ಷ ರೂ. ಮೌಲ್ಯದ ಚಿನ್ನ ದರೋಡೆ: ನೇಪಾಳಿ ಗ್ಯಾಂಗ್ ಬಂಧನ
ಉದ್ದೇಶಿತ ಯೋಜನೆಯ ಪ್ರಕಾರ 326.25 ಮೀ ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಈ ನೀಲ ನಕ್ಷೆಯ ಪ್ರಕಾರವೇ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಕಾಮಗಾರಿ ಸಹ ಪ್ರಾರಂಭಿಸಲಾಗಿತ್ತು. ಆದರೆ, ಶಿವಾನಂದ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬಾರದೆಂದು ಸ್ಥಳೀಯರು ಸುಪ್ರೀಂ ಕೊರ್ಟ್ ಮೊರೆ ಹೋಗಿದ್ದರು. ಸಂಚಾರ ದಟ್ಟಣೆ ನಿವಾರಣೆ ಮಾಡಲು ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ, ಇದರ ಒಟ್ಟಾರೆ ವಿಸ್ತೀರ್ಣ ಚಿಕ್ಕದಾಗಿದ್ದು, ಅದನ್ನು ವಿಸ್ತರಿಸುವಂತೆ ಸೂಚನೆ ನೀಡಿತ್ತು.
ಕೋರ್ಟ್‌ನ ನಿರ್ದೇಶನದ ಅನುಸಾರ ಇದೀಗ 493 ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಹಾಗೂ ಶಿವಾನಂದ ರೈಲ್ವೆ ಹಳಿ ಬಳಿ ಸುಮಾರು 600 ಚ.ಮೀ ರಸ್ತೆ ಅಗಲೀಕರಣ ಪ್ರಕ್ರಿಯೆ ಇದೆ. ಉದ್ದೇಶಿತ ಕಾಮಗಾರಿಗೆ ಜಾಗ ಬಿಟ್ಟು ಕೊಡಲು ಸ್ಥಳೀಯರು ಟಿಡಿಆರ್ ಬದಲಿಗೆ, ಆರ್ಥಿಕ ಪರಿಹಾರ ನೀಡುವಂತೆ ಕೋರಿದ್ದು, ಈ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ ಎನ್ನುತ್ತಾರೆ ಪಾಲಿಕೆಯ ಅಧಿಕಾರಿಗಳು.
ಏಪ್ರಿಲ್ ವೇಳೆಗೆ ಶಿವಾನಂದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಸ್ಥಳೀಯರು ಜಾಗ ಬಿಟ್ಟುಕೊಡುವುದು ತಡವಾದರೆ ಮತ್ತೂಂದು ತಿಂಗಳು ತಡವಾಗಬಹುದು.
ಬಿಬಿಎಂಪಿ ಸಹಾಯಕ ಎಂಜಿನಿಯರ್