Advertisement

ಆಲ್ ರೌಂಡರ್ ದುಬೆ ಫಿಫ್ಟಿ ; ಪಂತ್ ಬಿರುಸಿನ ಬ್ಯಾಟಿಂಗ್ ; ವಿಂಡಿಸ್ ಗೆಲುವಿಗೆ 171 ಟಾರ್ಗೆಟ್

09:45 AM Dec 09, 2019 | Team Udayavani |

ತಿರುವನಂತಪುರಂ: ಪ್ರವಾಸಿ ವೆಸ್ಟ್ ವಿಂಡೀಸ್ ವಿರುದ್ದ ಇಲ್ಲಿನ ಗ್ರೀನ್ ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡ ವಿಂಡೀಸ್ ಗೆಲುವಿಗೆ 171 ರನ್ ಗುರಿ ನೀಡಿದೆ. ಬ್ಯಾಟಿಂಗ್ ಗೆ ಅಷ್ಟೇನೂ ಪೂರಕವಲ್ಲದ ಇಲ್ಲಿನ ಪಿಚ್ ನಲ್ಲಿ ಟಾಸ್ ಗೆದ್ದ ವಿಂಡೀಸ್ ಕಪ್ತಾನ ಕೈರನ್ ಪೊಲಾರ್ಡ್ ಅವರು ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು.

Advertisement

ಯುವ ಆಲ್ ರೌಂಡರ್ ಶಿವಂ ದುಬೆ (54) ಅವರ ಭರ್ಜರಿ ಅರ್ಧಶತಕ ಮತ್ತು ಇನ್ನಿಂಗ್ಸ್ ನ ಕೊನೆಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ (33) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರುಗಳಲ್ಲಿ ಒಟ್ಟು 07 ವಿಕೆಟುಗಳನ್ನು ಕಳೆದುಕೊಂಡು 170 ರನ್ ಗಳನ್ನು ಕಲೆಹಾಕಿತು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಟೀಂ ಇಂಡಿಯಾ ತಂಡದ ಮೊತ್ತ 24 ಆಗುವಷ್ಟರಲ್ಲಿ ರೋಹಿತ್ ಶರ್ಮಾ (15) ಔಟಾದರೆ ಇವರ ಬೆನ್ನಿಗೇ ಕೆ.ಎಲ್. ರಾಹುಲ್ (11) ಸಹ ಪೆವಿಯಲಿಯನ್ ದಾರಿ ಹಿಡಿದರು. ಈ ಹಂತದಲ್ಲಿ ಜೊತೆಯಾದ ದುಬೆ ಮತ್ತು ಕೊಹ್ಲಿ ಜೋಡಿ ಅಮೂಲ್ಯ 34 ರನ್ ಗಳ ಜೊತೆಯಾಟ ನೀಡಿತು.

ಇದರಲ್ಲಿ ದುಬೆ ಸಿಡಿದದ್ದೇ ಹೆಚ್ಚು. ನಾಯಕ ಕೊಹ್ಲಿ ಈ ಯುವ ಬ್ಯಾಟ್ಸ್ ಮನ್ ಗೆ ಉತ್ತಮ ಬೆಂಬಲ ನೀಡಿದರು. ಅಂತಿಮವಾಗಿ 30 ಎಸೆತೆಗಳಲ್ಲಿ 54 ರನ್ ಸಿಡಿಸಿದ ದುಬೆ ಕ್ಯಾಚ್ ನೀಡಿ ಔಟಾದರು. ಅವರ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 4 ಭರ್ಜರಿ ಸಿಕ್ಸರ್ ಮತ್ತು 3 ಬೌಂಡರಿ ಸಿಡಿಸಿದರು. ನಾಯಕ ಪೊಲಾರ್ಡ್ ಓವರಿನಲ್ಲಿ ದುಬೆ ಹ್ಯಾಟ್ರಿಕ್ ಸಿಕ್ಸ್ ಬಾರಿಸಿ ತನ್ನ ಬ್ಯಾಟಿಂಗ್ ತಾಖತ್ತನ್ನು ಪ್ರದರ್ಶಿಸಿದರು.

ಭಾರತೀಯ ಇನ್ನಿಂಗ್ಸ್ ನಲ್ಲಿ ಶಿವಂ ದುಬೆ ಮತ್ತು ರಿಷಭ್ ಪಂತ್ (33 ನಾಟೌಟ್) ಮಾತ್ರವೇ ವಿಂಡೀಸ್ ಬೌಲರ್ ಗಳನ್ನು ಕಾಡಿದರು. ಪಂತ್ ಅವರು 22 ಎಸೆತೆಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 33 ರನ್ ಸಿಡಿಸಿ ಔಟಾಗದೆ ಉಳಿದರು.

Advertisement

ಉಳಿದಂತೆ ನಾಯಕ ಕೊಹ್ಲಿ (19), ಶ್ರೇಯಸ್ ಐಯರ್ (10), ರವೀಂದ್ರ ಜಡೇಜಾ (9) ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದರು.

ವಿಂಡೀಸ್ ಪರ ಕೆಸ್ರಿಕ್ ವಿಲಿಯಮ್ಸ್ ಮತ್ತು ಲೆಗ್ ಬ್ರೇಕ್ ಸ್ಪಿನ್ನರ್ ಹೆಡೇನ್ ರಶೀದಿ ವಾಲ್ಷ್ ತಲಾ 02 ವಿಕೆಟ್ ಪಡೆದು ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next