ಬೆಂಗಳೂರು: ಬಿಜೆಪಿಯೊಂದಿಗಿಗೆ ಬರುತ್ತೇವೆಂದು ಅರುಣ್ ಸಿಂಗ್ ಗೆ ಯಾರು ಅರ್ಜಿ ಹಾಕಿದ್ದರು. ಬಿಜೆಪಿ ಜೊತೆ ಸಖ್ಯ ಬೆಳೆಸುತ್ತೇವೆ ಎಂದು ಬಸವರಾಜ ಹೊರಟ್ಟಿ ಯಾಕೆ ಹೇಳಬೇಕಿತ್ತು? ಅವರಿಗೆ ಸ್ವಾತಂತ್ರ್ಯ ಕೊಟ್ಟವರು ಯಾರು? ಮೈತ್ರಿ ಎಂದು ಯಾಕೆ ಹೇಳಬೇಕಿತ್ತು ಎಂದು ಶಾಸಕ ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಸಖ್ಯದ ವಿಚಾರವಾಗಿ ಸ್ಪಷ್ಟ ನಿಲುವು ತಾಳುವಂತೆ ಒತ್ತಾಯಿಸಿದರು.
ಮೃದು ಧೋರಣೆ ಎಂಬಂತೆ ಒಂದಷ್ಟು ಮಾತುಗಳು ಬಂದವು. ನಮ್ಮಲ್ಲಿ ಎರಡು ನಿಲುವು ಬೇಡ. ಯಾವುದಾದರೂ ಒಂದು ನಿಲುವು ಇರಲಿ. ನಮ್ಮಲ್ಲಿ ದ್ವಂದ್ವ ನಿಲುವು ಬೇಡ ಎಂದು ಹೇಳಿದರು.
ಇದನ್ನೂ ಓದಿ:ಸಭಾಪತಿಯಾಗಲು ಮೂರು ಪಕ್ಷಗಳಲ್ಲಿ ಸಮ್ಮತಿಯಿದೆ: ಹೊರಟ್ಟಿ ವಿಶ್ವಾಸ
ಬಸವರಾಜ ಹೊರಟ್ಟಿಯವರ ಹೇಳಿಕೆಯಿಂದ ಏನೆಲ್ಲಾ ಆಯ್ತು. ಅವರು ಸಭಾಪತಿಯಾಗದಿದ್ದರೆ ಯಾವ ದೇಶ ಮುಳುಗುತ್ತದೆ. ಯಾರದೋ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿ ಕೊಡಬಾರದು. ಮನನೊಂದು ಈ ಮಾತನ್ನಾಡುತ್ತಿದ್ದೇನೆ. ಇದರಿಂದ ಎಷ್ಟು ಹಾನಿಯಾಯಿತು. ಈ ನಿಟ್ಟಿನಲ್ಲಿ ನಮ್ಮ ನಾಯಕರು ತಿದ್ದಿಕೊಳ್ಳಬೇಕು. ಅನಗತ್ಯ ಹೇಳಿಕೆಗಳಿಂದ ವಿಭಿನ್ನ ನಿಲುವುಗಳು ಬರುತ್ತಿದೆ ಎಂದು ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.