Advertisement

ಶಿವದಾಸಿಮಯ್ಯ ಕಾಯಕನಿಷ್ಠೆಯ ಪ್ರತೀಕ

12:59 PM May 15, 2017 | |

ದಾವಣಗೆರೆ: ಶಿವಸಿಂಪಿ ಸಮಾಜದ ಕುಲಗುರು ಶಿವದಾಸಿಮಯ್ಯ ಕಾಯಕನಿಷ್ಠೆಗೆ ಹೆಸರಾದ ಮಹಾತ್ಮರು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ. ಭಾನುವಾರ ಶಿವಯೋಗಿ ಮಂದಿದರಲ್ಲಿ ನಡೆದ ಕುಲಗುರು ಶರಣ ಶಿವದಾಸಿಮಯ್ಯ ಜಯಂತ್ಯುತ್ಸವ, ಜಿಲ್ಲಾ ಶಿವಸಿಂಪಿ ಸಮಾವೇಶ, ಪ್ರತಿಭಾ ಪುರಸ್ಕಾರ, ಸಾಮೂಹಿಕ ವಿವಾಹ ಮಹೋತ್ಸವ, ವೀರಶೈವ ತರುಣ ಸಂಘ ಶತಮಾನೋತ್ಸವ, ಶರಣ ಹಡೇìಕರ್‌ ಮಂಜಪ್ಪ ರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

Advertisement

ಮಹಾನ್‌ ಚೇತನ, ದಾರ್ಶನಿಕ ಬಸವಣ್ಣನವರು ಪ್ರಾರಂಭಿಸಿದ ಅನುಭವ  ಮಂಟಪದಲ್ಲಿ ಮುಂಚೂಣಿಯಲ್ಲಿದ್ದ ಶಿವಸಿಂಪಿ ಸಮಾಜದ ಕುಲಗುರು ಶಿವದಾಸಿಯಮಯ್ಯ ಸಾಂಸ್ಕೃತಿಕ ನಾಯಕರು ಎಂದು ಸ್ಮರಿಸಿದರು. ಉಡುಪು, ಹರಿದ ಬಟ್ಟೆಯನ್ನು, ಸೂಜಿ-ದಾರದಿಂದ ಕೂಡಿಸುವ ಕೆಲಸ ಮಾಡುವ ಶಿವಸಿಂಪಿ ಸಮಾಜ ಬಾಂಧವರು ಸಮುದಾಯಕ್ಕೆ ದೊರೆಯಲೇಬೇಕಾದ ಸಾಮಾಜಿಕ ನ್ಯಾಯ, ಹಲವಾರು ಸೌಲಭ್ಯಗಳಿಗಾಗಿ ಜೇನುಗೂಡಿನಂತೆ ಸಂಘಟಿತರಾಗಬೇಕಿದೆ.

ಸಂಘಟನೆ ಎಂಬ ಸೂಜಿ, ಹೋರಾಟ ಎಂಬ ದಾರದಿಂದ ಮಾತ್ರವೇ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡು ಸಮಾಜದವರು ಒಂದಾಗಬೇಕಿದೆ ಎಂದು ತಿಳಿಸಿದರು. ಸಮಾಜದವರು ಏರ್ಪಡಿಸುವ ಎಲ್ಲಾ ರೀತಿಯ ಸಭೆ, ಸಮಾರಂಭದಲ್ಲಿ ಅತ್ಯಂತ ಸಕ್ರಿಯರಾಗಿ ಭಾಗವಹಿಸುವ ಮೂಲಕ ಸಂಘಟಿಕರಿಗೆ ಉತ್ತೇಜನ ನೀಡುವ ಜೊತೆಗೆ ಸಮಾಜದ ಒಗ್ಗಟ್ಟನ್ನು ತೋರಿಸಬೇಕು. ಸಮಾಜ ಸದೃಢವಾಗಿದ್ದರೆ ಸರ್ಕಾರ ಒಳಗೊಂಡಂತೆ ಯಾರಿಯೇ ಆಗಲಿ ಬೇಡಿಕೆಗೆ ಸ್ಪಂದಿಸುತ್ತಾರೆ.

ಶಿವಸಿಂಪಿ ಸಮಾಜದ ಬಾಂಧವರು ಸಂಘಟಿತರಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ದಾವಣಗೆರೆ ನಗರದಲ್ಲಿಯೇ 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಶಿವಸಿಂಪಿ ಸಮಾಜಕ್ಕೆ ಈವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಸ್ಥಾನಮಾನ ದೊರೆಯದೇ ಇರುವುದು ದುರಂತ ಎಂದೇ ಭಾವಿಸಬೆಕಾಗುತ್ತದೆ. ಎಲ್ಲಾ ರಾಜಕೀಯ ಪಕ್ಷದವರು ಶಿವಸಿಂಪಿ ಸಮಾಜದ ಮತಗಳಿಂದ ಗೆದ್ದಿದ್ದೇವೆ ಎಂದು ಹೇಳುತ್ತಾರೆ. ಗೆದ್ದ ಮೇಲೆ ಸಮಾಜವನ್ನೇ ಮರೆಯುತ್ತಾರೆ.

ಈಗಲಾದರೂ ನಗರಪಾಲಿಕೆ, ರಾಜಕೀಯ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನವನ್ನ ಶಿವಸಿಂಪಿ ಸಮಾಜ ಬಾಂಧವರಿಗೆ ಕೊಡುವ ಮುಖೇನ ಶಿವಸಿಂಪಿ ಸಮಾಜವನ್ನ ಗುರುತಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು. ಚನ್ನಗಿರಿ ಶಾಸಕ ವಡ್ನಾಳ್‌ ರಾಜಣ್ಣ ಮಾತನಾಡಿ, ಒಳ ಪಂಗಡಗಳಿಂದಾಗಿ ಯಾವುದೇ ಸಮಾಜ ಛಿದ್ರವಾಗುವ ದುರಂತವನ್ನ ಕಾಣಬಹುದು. ಕಾಯಕನಿಷ್ಟೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಶಿವಸಿಂಪಿ ಸಮಾಜ ಬಾಂಧವರು ಒಳ ಪಂಗಡ ಎಂಬ ಭೇದಭಾವ ಬಿಟ್ಟು ನಾವೆಲ್ಲರೂ ಒಂದೇ ಎಂದು ಒಂದಾಗಬೇಕು. 

Advertisement

ದೊರೆಯಬೇಕಾದ ಸೌಲಭ್ಯಗಳಿಗೆ ಶ್ರಮಿಸಬೇಕು. ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪ್ರತಿಯೊಬ್ಬರು ವೃತ್ತಿಗೆ ಗೌರವ ನೀಡಬೇಕು ಎಂದು ತಿಳಿಸಿದರು. ಶಿವಸಿಂಪಿ ಸಮಾಜದವರು ಕುಲಗುರು ಶಿವದಾಸಿಯಮಯ್ಯನವರು ಸರ್ಕಾರದಿಂದ ರಜಾ ರಹಿತವಾಗಿ ಆಚರಿಸುವಂತಾಗಬೇಕು ಎಂಬ ಒತ್ತಾಯ ಇದೆ. ಸಮಾಜದವರ ಬಹುಕಾಲದ ಬೇಡಿಕೆ, ಒತ್ತಾಯದ ಬಗ್ಗೆ ಮುಖ್ಯಮಂತ್ರಿ  ಸಿದ್ದರಾಮಯ್ಯನವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. 

ಸಮಾಜದ ಜಿಲ್ಲಾ ಅಧ್ಯಕ್ಷ ಗುರುಬಸಪ್ಪ ಬೂಸ್ನೂರ್‌ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಮಲ್ಲಿಕಾರ್ಜುನ ಜವಳಿ ಪ್ರಾಸ್ತಾವಿಕ ಮಾತುಗಳಾಡಿದರು. ಕೆ.ಎಚ್‌. ಬಸವರಾಜ್‌, ಡಾ| ಮಂಜುನಾಥ್‌ ಬೇವಿನಕಟ್ಟಿ, ಡಾ| ಎಂ. ಕೊಟ್ರೇಶ್‌, ಕಣಕುಪ್ಪಿ ಮುರುಗೇಶಪ್ಪ, ಜ್ಞಾನೇಶ್ವರ್‌ ಜವಳಿ ಇತರರು ಇದ್ದರು. ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಚಿಂದೋಡಿ ಶ್ರೀಕಂಠೇಶ್‌ ಇತರರನ್ನು ಸನ್ಮಾನಿಸಲಾಯಿತು. ಒಂದು ಜೋಡಿ ವಿವಾಹ  ನೆರವೇರಿಸಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next