Advertisement

ಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನ: ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

01:51 PM Feb 12, 2023 | Team Udayavani |

ಶಿರ್ವ: ಸುಮಾರು 2200 ವರ್ಷಗಳ ಇತಿಹಾಸವಿರುವ ಮಟ್ಟಾರ್‌ ಶ್ರೀ ಬಬ್ಬರ್ಯ ದೈವಸ್ಥಾನದಲ್ಲಿ ಫೆ. 27 ರಂದು ಬ್ರಹ್ಮಕಲಶೋತ್ಸವ-ವಾರ್ಷಿಕ ನೇಮ, ಅನ್ನಸಂತರ್ಪಣೆ ಮತ್ತು ಧಾರ್ಮಿಕ ಸಭೆ ನಡೆಯಲಿದ್ದು, ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ ಸಮಾರಂಭವು ಫೆ. 12 ರಂದು ಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನದ ಆವರಣದಲ್ಲಿ ನಡೆಯಿತು.

Advertisement

ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್‌ ಕುಮಾರ್‌ ಶೆಟ್ಟಿ ಕಲ್ಲೊಟ್ಟು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾಹಿತಿ ನೀಡಿ ಸುಮಾರು 60 ಲ. ರೂ. ವೆಚ್ಚದಲ್ಲಿ ದೈವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಭದ್ರತಾ ಕೊಠಡಿ, ಧ್ವಜಸ್ಥಂಭದ ಪೀಠ ಬದಲಾವಣೆ, ತುಳಸೀಕಟ್ಟೆ ನವೀಕರಣ, ದೈವಸ್ಥಾನದ ಪಶ್ಚಿಮ ಮತ್ತು ಉತ್ತರ ಭಾಗದ ಸುತ್ತುಪೌಳಿ ನಿರ್ಮಾಣ ಮತ್ತು ಭೋಜನ ಶಾಲೆಯ ಮೇಲ್ಛಾವಣಿ ಪೂರ್ಣಗೊಂಡಿದ್ದು ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಸುಮಾರು 25 ಲ. ರೂ.ಗಳ ಅವಶ್ಯಕತೆಯಿದ್ದು, ಭಕ್ತರ ಸಹಕಾರ ಕೋರಿದರು.

ಬಂಟಕಲ್ಲು ಶ್ರೀ ದುರ್ಗಾಪರಮೇಶ್ವ‌ರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಬೆಳ್ಮಣ್‌ ಶ್ರೀಕೃಷ್ಣ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಎಸ್‌.ಕೆ. ಸಾಲ್ಯಾನ್‌ ಬೆಳ್ಮಣ್‌, ಮಟ್ಟಾರು ಪರಾಡಿ ದಿನರಾಜ್‌ ಹೆಗ್ಡೆ, ಗರಡಿಮನೆ ಆನಂದ ಪೂಜಾರಿ, ಕಾರ್ಯದರ್ಶಿ ಸುರೇಶ್‌ ನಾಯಕ್‌, ಕೋಶಾಧಿಕಾರಿ ಗೋಪಾಲ್‌ ನಾಯ್ಕ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಹಿರಿಯರಾದ ದಿವಾಕರ ಹೆಗ್ಡೆ ಪರಾಡಿ, ಕಾನಬೆಟ್ಟು ಶಿವರಾಯ ಪೂಜಾರಿ, ರಮೇಶ್‌ ಪ್ರಭು ಬೆಳಂಜಾಲೆ, ನಿತೇಶ್‌ ಶೆಟ್ಟಿ, ನಿತೇಶ್‌ ಪೂಜಾರಿ, ಬೊಗ್ರ ನಾಯ್ಕ, ರಂಜಿತ್‌ ಶೆಟ್ಟಿ, ಗೋಪಾಲ ನಾಯ್ಕ,ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಮತ್ತು ಭಕ್ತರು ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next