ಶಿರೂರ: ಪಟ್ಟಣದಿಂದ ನೀಲಾನಗರಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಕೃಷಿಭೂಮಿಯಲ್ಲಿನ ಬೆಳೆಗಳಿಗೆ ಹಂದಿ (ಕಾಡಹಂದಿಗಳ) ಕಾಟದಿಂದ ಬೆಳೆಹಾನಿಯಾಗಿದ್ದು ಇದರಿಂದ ರೈತರು ಕಂಗಾಲಾಗಿದ್ದಾರೆ.
Advertisement
ಒಂದು ವರ್ಷದಿಂದ ಈ ಹಂದಿಗಳ ಕಾಟದಿಂದ ರೈತರು ಬೇಸತ್ತು ಹೋಗಿದ್ದು, ಭೂಮಿಯಲ್ಲಿನ ತೋಗರಿ, ಜೋಳ, ಕಡಲೆ, ಶೇಂಗಾ, ಕಬ್ಬು ಸೇರಿದಂತೆ ನಾನಾ ಬೆಳೆಗಳು ನಾಶವಾಗಿವೆ. ಈ ಕುರಿತು ರೈತರು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಪರಿಹಾರವು ಮರೀಚಿಕೆಯಾಗಿದೆ. ಒಂದೊದು ಭಾರಿ ಭೂಮಿಗೆ ಬಿತ್ತಿದ ಬೀಜಗಳನ್ನು ಸಹ ತಿಂದು ಹಾಕಿರುವ ಉದಾಹರಣೆಗಳಿವೆ.
ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ರೈತರ ಕಷ್ಟವನ್ನು ಅರಿತು ಶಾಶ್ವತವಾದ ಸಮಸ್ಯೆಗೆ ಮುಂದಾಗಿ ರೈತರ ಬೆಳೆ ರಕ್ಷಣೆ ಮಾಡಬೇಕೆಂದು ನೊಂದ ರೈತರು ಒತ್ತಾಯಿಸಿದ್ದಾರೆ.
Related Articles
*ಮೊಹಮ್ಮದ ಹಳದೂರ, ಶಿರೂರ ರೈತ
Advertisement
ಈ ಹಂದಿ ಕಾಟದ ಸಮಸ್ಯೆಯನ್ನು ಹಾಗೂ ರೈತರಿಗಾದ ಬೆಳೆ ಹಾನಿಯ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಂದಿ ಕಾಟ ತಪ್ಪಿಸಲು ಕೆಲವೇ ದಿನಗಳಲ್ಲಿ ಶಿರೂರ ಗುಡ್ಡದಿಂದ ನೀಲಾನಗರದವರೆಗೂ ತಂತಿ ಬೇಲಿ ಹಾಕಲು ಕ್ರಮ ಕೈಗೊಂಡಿದ್ದು, ಹಾನಿಯಾದ ಬೆಳೆಗೆ ಪರಿಶೀಲನೆ ಮಾಡಿ ಪರಿಹಾರ ನೀಡುವುದಾಗಿ ತಿಳಿಪಡಿಸಿದ್ದಾರೆ.*ಅಮೀನಸಾಬ ಗುಜರಾತಿ, ಗಸ್ತು ಅರಣ್ಯ ಪಾಲಕ ಶಿರೂರ *ಶಂಕರ ಹೂಗಾರ